Digital ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಲು RBI ಹೊಸ ಉಪಕ್ರಮ

Digital Transactions: ದೇಶದಲ್ಲಿ ನೋಟು ಅಮಾನೀಕರಣದ ಬಳಿಕ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ 3.5 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತದೆ. ಈ ಪರಿಸ್ಥಿತಿಯಿಂದ ಪ್ರೋತ್ಸಾಹಿಸಲ್ಪಟ್ಟ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲು ಮುಂದಾಗಿದೆ.  

Written by - Yashaswini V | Last Updated : Feb 25, 2020, 10:09 AM IST
Digital ವಹಿವಾಟಿಗೆ ಹೆಚ್ಚಿನ ಉತ್ತೇಜನ ನೀಡಲು RBI ಹೊಸ ಉಪಕ್ರಮ title=
Photo : DNA

ನವದೆಹಲಿ: ದೇಶದಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ಘೋಷಣೆ ನೀಡಿದೆ. ಡಿಜಿಟಲ್ ಪಾವತಿಗಳನ್ನು ಸಾರ್ವಜನಿಕರಿಗೆ ಉತ್ತಮ ಅನುಭವವಾಗಿಸಲು ಎಲ್ಲ ಪ್ರಯತ್ನಗಳನ್ನು ಮಾಡುವಲ್ಲಿ ರಿಸರ್ವ್ ಬ್ಯಾಂಕಿನ ಘೋಷಣೆ - "ನಗದು ರಾಜ, ಆದರೆ ಡಿಜಿಟಲ್ ದೈವಿಕ" (Cash is king, but digital is divine). ಅಂದರೆ "ನಗದು ಭವ್ಯವಾಗಿದೆ, ಆದರೆ ಡಿಜಿಟಲ್ ದೈವಿಕವಾಗಿದೆ." ದೇಶದಲ್ಲಿ ನೋಟು ಅಮಾನೀಕರಣದ ಬಳಿಕ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆ 3.5 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳುತ್ತದೆ.  ಈ ಪರಿಸ್ಥಿತಿಯಿಂದ ಪ್ರೋತ್ಸಾಹಿಸಲ್ಪಟ್ಟ ಕೇಂದ್ರ ಬ್ಯಾಂಕ್ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಿದೆ.

ನಗದಿನಿಂದ ಎಲೆಕ್ಟ್ರಾನಿಕ್ ಮೋಡ್‌ಗೆ ದೇಶದಲ್ಲಿನ ವಹಿವಾಟಿನ ಬೆಳವಣಿಗೆಯನ್ನು ನಿರ್ಣಯಿಸಿದ ರಿಸರ್ವ್ ಬ್ಯಾಂಕ್, ದೇಶದಲ್ಲಿ ಎಷ್ಟು ಹಣವನ್ನು ಪಾವತಿಸಲಾಗುತ್ತದೆ ಎಂಬುದರ ಬಗ್ಗೆ ನಿಖರ ಅಳತೆ ಇಲ್ಲ, ಆದರೆ ಡಿಜಿಟಲ್ ಪಾವತಿಗಳಿಂದಾಗಿ ಇದನ್ನು ಸಂಪೂರ್ಣವಾಗಿ ಅಳೆಯಬಹುದು ಎಂದು ಅಭಿಪ್ರಾಯಪಟ್ಟಿದೆ.

ಕಳೆದ ಐದು ವರ್ಷಗಳಲ್ಲಿ, ಡಿಜಿಟಲ್ ವಹಿವಾಟುಗಳು ಒಟ್ಟಾರೆ ಪರಿಮಾಣದ ಪ್ರಕಾರ ಶೇಕಡಾ 61 ಮತ್ತು ಮೌಲ್ಯದ ದೃಷ್ಟಿಯಿಂದ 19 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಪಿಟಿಐ ಸುದ್ದಿಗಳ ಪ್ರಕಾರ, ಈ ಅಂಕಿ ಅಂಶಗಳು ಡಿಜಿಟಲ್ ಪಾವತಿಗಳತ್ತ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತವೆ.

ನಗದು ಮೊತ್ತವು(Cash Amount)  ಇನ್ನೂ ಪ್ರಾಬಲ್ಯ ಹೊಂದಿದೆ ಎಂದು ತಿಳಿಸಿರುವ ಆರ್‌ಬಿಐ, ಈಗ ಅದನ್ನು ಪಾವತಿಗೆ ಬಳಸುವುದಕ್ಕಿಂತ ಹೆಚ್ಚಾಗಿ ಆರ್ಥಿಕ ಆಸ್ತಿಯಾಗಿ ನೋಡಲಾಗಿದೆ ಎಂದು ಹೇಳಿದೆ.

2014 ರ ಅಕ್ಟೋಬರ್‌ನಿಂದ 2016 ರ ಅಕ್ಟೋಬರ್‌ನಲ್ಲಿ ಚಲಾವಣೆಯಲ್ಲಿರುವ ನೋಟುಗಳಲ್ಲಿ ಸರಾಸರಿ 14 ಪ್ರತಿಶತದಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಇದರ ಆಧಾರದ ಮೇಲೆ 2019 ರ ಅಕ್ಟೋಬರ್‌ನಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ 26,04,953 ಕೋಟಿ ರೂ. ಆದರೆ ಅದು ನಿಜವಾಗಿ 22,31,090 ಕೋಟಿ ರೂ. ಇದರಿಂದ, ಡಿಜಿಟಲೀಕರಣ ಪ್ರವೃತ್ತಿಯಲ್ಲಿ 3.5 ಲಕ್ಷ ಕೋಟಿ ರೂ.ಗಳ ನೋಟುಗಳ ಅಗತ್ಯ ಕಡಿಮೆಯಾಗಿದೆ ಎಂದು ಅಂದಾಜಿಸಬಹುದು.

Trending News