ಮಾಸ್ಟರ್ ಬ್ಲಾಸ್ಟರ್ ಸಚಿನ್ ಮತ್ತು ನಟಿ ರೇಖಾ ಮಾಡಿರುವ ನೂತನ ದಾಖಲೆ ಏನು ಗೊತ್ತಾ?

     

Last Updated : Apr 5, 2018, 08:46 PM IST
ಮಾಸ್ಟರ್ ಬ್ಲಾಸ್ಟರ್ ಸಚಿನ್ ಮತ್ತು ನಟಿ ರೇಖಾ ಮಾಡಿರುವ ನೂತನ ದಾಖಲೆ ಏನು ಗೊತ್ತಾ? title=

ನವದೆಹಲಿ: ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನಕ್ಕೆ ಇಳಿದರೆ ದಾಖಲೆ ಎನ್ನುವುದು ಅವರಿಗೆ ಸಹಜವೆನ್ನುವಂತೆಯಾಗಿದೆ,ಅದೇ ರೀತಿ ನಟಿ ರೇಖಾ ಕೂಡಾ ದಾಖಲೆ ಮಾಡುವುದರಲ್ಲಿ ಕಮ್ಮಿ ಇಲ್ಲ.

ಈ ದಕ್ಷಿಣದ ಬೆಡಗಿ ಬಾಲಿವುಡ್ ನಲ್ಲಿ 70,80,ರ ದಶಕದಲ್ಲಿ ಇಡಿ ಬಾಲಿವುಡನ್ನೇ ಆವರಿಸಿಕೊಂಡಿದ್ದಾಕೆ.ಇಂದಿಗೂ ಕೂಡಾ 60ರ ಮಧ್ಯದಲ್ಲಿದ್ದರೂ ಸಹಿತ ತನ್ನ ಚಲುವನ್ನು ಹಾಗೆ ಉಳಿಸಿಕೊಂಡಿರುವಾಕೆ. ಹಾಗಾದರೆ ಈಗ ಇವರಿಬ್ಬರ ಅಸಲಿ ಸಾಧನೆಯ ಸಮಾಚಾರವೇನು ಗೊತ್ತೇ?

ಹೌದು, ಈಗ ಇಬ್ಬರು ಒಂದು ಜಂಟಿಯಾಗಿ ನೂತನ ದಾಖಲೆ ಮಾಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಇವರಿಬ್ಬರ ಅವಧಿ ಈಗ ಮುಗಿಯುತ್ತಾ ಬಂದಿದ್ದು, ಕಳೆದ ಆರು ವರ್ಷಗಳ ಅವಧಿಯಲ್ಲಿ ಇಲ್ಲಿಯವರೆಗೂ ಸಚಿನ 7.3 ಮತ್ತು ರೇಖಾ 4.5 ಹಾಜರಿಯನ್ನು ಹೊಂದಿದ್ದಾರೆ.

ಇಲ್ಲಿಯವರೆಗೂ ಒಟ್ಟು 400 ಸಂಸತ್ ಅಧಿವೇಶನದ ದಿನಗಳಲ್ಲಿ ಸಚಿನ್ ಹಾಜರಾಗಿರೋದು ಕೇವಲ 29. ಅದರಲ್ಲಿ ಒಟ್ಟು 22 ಪ್ರಶ್ನೆಗಳನ್ನು ಕೇಳಿದ್ದಾರೆ. ವೇತನ ರೂಪದಲ್ಲಿ ಅವರು 86.23 ಲಕ್ಷ ರೂಗಳನ್ನು ಪಡೆದಿದ್ದಾರೆ. ಇನ್ನೊಂದೆಡೆಗೆ ನಟಿ ರೇಖಾ ಇದುವರೆಗೂ ಸಂಸತ್ತಿನಲ್ಲಿ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ, 99.59 ಲಕ್ಷ ರೂಗಳನ್ನು ವೇತನ ರೂಪದಲ್ಲಿ ಪಡೆದಿದ್ದಾರೆ, ಕೇವಲ 18 ದಿನಗಳ ಅಧಿವೇಶನದಲ್ಲಿ ಮಾತ್ರ ಭಾಗವಹಿಸಿದ್ದಾರೆ.

ಆ ಮೂಲಕ ಈ ಇಬ್ಬರು ತಾರಾಮಣಿಗಳು ಸಂಸತ್ತಿನಲ್ಲಿ ಹೆಚ್ಚು ಕಡಿಮೆ ಶೂನ್ಯ ಸಾಧನೆ ಮಾಡುವ ಮೂಲಕ ಸಂಸತ್ತಿನಲ್ಲಿಯೂ ಕೂಡ ಹೊಸ ದಾಖಲೆ ನಿರ್ಮಿಸಿದ್ದಾರೆ.  

Trending News