ನವದೆಹಲಿ: ಇಂದು ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ನಾಮ ಪತ್ರ ಸಲ್ಲಿಸಿದ ನಂತರ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ 2004 ರಲ್ಲಿ ವಾಜಪೇಯಿ ಸರ್ಕಾರ ಸೋತಿದ್ದನ್ನು ನೆನಪಿಸಿದರು.
Is Modi invincible?
UPA Chairperson Smt. Sonia Gandhi gives a fitting reply to the media after filing her nomination in Rae Bareli. #SoniaGandhiRaeBareli pic.twitter.com/bicCCaALAC— Congress (@INCIndia) April 11, 2019
ಸುದ್ದಿಗಾರರು ಈ ವೇಳೆ ಸೋನಿಯಾಗಾಂಧಿಯವರಿಗೆ ಪ್ರಧಾನಿ ಮೋದಿ ಅಜೇಯರಾಗಿದ್ದಾರೆಯೇ ? ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅವರು " ಖಂಡಿತ ಇಲ್ಲ, 2004 ರಲ್ಲಿ ಆದದ್ದನ್ನು ಮರೆಯಬೇಡಿ, ಆಗ ವಾಜಪೇಯಿ ಕೂಡ ಅಜೇಯ ಎನಿಸಿದ್ದರು ಆದರೂ ನಾವು ಗೆಲುವು ಸಾಧಿಸಿದೆವು" ಎಂದು ಹೇಳಿದರು.
Four time MP from Rae Bareli, UPA Chairperson Smt. Sonia Gandhi files her nomination for the 2019 Lok Sabha elections. #SoniaGandhiRaeBareli pic.twitter.com/Yjl3TxOsHm
— Congress (@INCIndia) April 11, 2019
ಅಟಲ್ ಬಿಹಾರಿ ವಾಜಪೇಯಿ 1996, 1998 ಮತ್ತು 1999ರಲ್ಲಿ ಎನ್ ಡಿ ಎ ಸರ್ಕಾರದ ನೇತೃತ್ವವನ್ನು ವಹಿಸಿಕೊಂಡಿದ್ದರು.ಆಗ ಭಾರತ ಪ್ರಕಾಶಿಸುತ್ತದೆ ಎನ್ನುವ ಘೋಷ ವಾಕ್ಯದೊಂದಿಗೆ 2004 ರಲ್ಲಿನ ಚುನಾವಣೆಯನ್ನು ಗೆಲ್ಲುವ ನಿಟ್ಟಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದರು.ಆದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು.ಈ ಹಿನ್ನಲೆಯಲ್ಲಿ ಇಂದು ಸೋನಿಯಾ ಗಾಂಧಿ 2004 ರಲ್ಲಿ ಆದದ್ದನ್ನು ಮರೆಯಬೇಡಿ ಎಂದು ನೆನಪಿಸಿದರು.
2004 ರಿಂದ ನಾಲ್ಕನೇ ಬಾರಿಗೆ ರಾಯಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ