ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸ್ಫೋಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸುತ್ತಮುತ್ತಲಿನ ದಟ್ಟ ಹೊಗೆ, ಕಿರುಚಾಟದ ನಡುವೆ ಜನರು ಸಹಾಯಕ್ಕಾಗಿ ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಇಡ್ಲಿ-ದೋಸೆಯಂತಹ ದಕ್ಷಿಣ ಭಾರತದ ಖಾದ್ಯಗಳಿಗೆ ಪ್ರಸಿದ್ಧವಾದ ಕೆಫೆಯಲ್ಲಿ ಸ್ಫೋಟಕ್ಕೆ ಕಾರಣವೇನು ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಈ ಸ್ಫೋಟವು ರಾಮೇಶ್ವರಂ ಕೆಫೆಯ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ಸ್ಫೋಟದ ಹೊಡೆತಕ್ಕೆ ತತ್ತರಿಸಿದೆ. ರಾಮೇಶ್ವರಂ ಕೆಫೆಯ ಇಡ್ಲಿ-ದೋಸೆಯ ಬಗ್ಗೆ ಹೇಳುವುದಾದರೆ ಬೆಂಗಳೂರಿಗೆ ಬಂದು ದಕ್ಷಿಣ ಭಾರತದ ಖಾದ್ಯ, ಫಿಲ್ಟರ್ ಕಾಫಿ ಇಲ್ಲದೇ ಹೋದರೆ ನಿಮ್ಮ ಪಯಣ ಮುಗಿಯುವುದೇ ಇಲ್ಲ.
10×10 ಚದರಡಿಯಲ್ಲಿ ರಾಮೇಶ್ವರಂ ಕೆಫೆ ಪ್ರಾರಂಭ
ಇಡ್ಲಿ-ಸಾಂಬಾರ್ ಮತ್ತು ಫಿಲ್ಟರ್ ಕಾಫಿಗಾಗಿ ಕರ್ನಾಟಕದಾದ್ಯಂತ ಪ್ರಸಿದ್ಧವಾಗಿರುವ ಈ ಕೆಫೆಯು 10×10 ಚದರಡಿಯ ಸಣ್ಣ ಕೆಫೆಯೊಂದಿಗೆ ಪ್ರಾರಂಭವಾಯಿತು. ಗ್ರಾಹಕರ ಸರತಿ ಸಾಲಿನಿಂದಲೇ ಈ ಕೆಫೆಯ ಜನಪ್ರಿಯತೆಯನ್ನು ಅಳೆಯಬಹುದು. ಬಿರುಗಾಳಿ ಇರಲಿ, ಮಳೆಯಿರಲಿ ಇಲ್ಲಿ ಊಟ ಮಾಡಲು ಕಿಲೋಮೀಟರ್ಗಟ್ಟಲೇ ಉದ್ದದ ಸರತಿ ಸಾಲು ಇದ್ದೇ ಇರುತ್ತದೆ. ಕೆಫೆಯ ಹೊರಗೆ ತುಂಬಾ ಜನಸಂದಣಿ ಇರುತ್ತದೆ. ನೆಲದ ಮೇಲೆ ಕುಳಿತು ಆಹಾರ ಸೇವಿಸುವ ಜನರನ್ನು ನೀವು ಕಾಣಬಹುದು. ಈ ಕೆಫೆಯನ್ನು ಆರಂಭಿಸಿದ್ದು ಪತಿ-ಪತ್ನಿ.
ಇದನ್ನೂ ಓದಿ: ಜಾರ್ಖಂಡ್ನ 36 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ರಾಮೇಶ್ವರಂ ಕೆಫೆಯ ಮಾಲೀಕರು ಯಾರು..?
ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆಗೆ ಅಡಿಪಾಯ ಹಾಕಿದ್ದು ಆಲ್ಟ್ರಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್. ಮನೆಯವರ ಅಪೇಕ್ಷೆಗೆ ವಿರುದ್ಧವಾಗಿ ಸಿಎ ದಿವ್ಯಾ ರಾಘವೇಂದ್ರ ರಾವ್ ಅವರು ತಮ್ಮ ಪತಿ ರಾಘವೇಂದ್ರ ರಾವ್ ಜೊತೆಗೂಡಿ ಈ ಕೆಫೆಯನ್ನು ಆರಂಭಿಸಿದ್ದಾರೆ. 2021ರಲ್ಲಿ ಈ ದಂಪತಿ ಬೆಂಗಳೂರಿನ ಇಂದಿರಾ ನಗರದಲ್ಲಿ 10×10 ಚದರ ಅಡಿ ಜಾಗದಲ್ಲಿ ಕೆಫೆಯನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ದಕ್ಷಿಣ ಭಾರತದ ಪ್ರಸಿದ್ಧ ಆಹಾರವಾದ ಇಡ್ಲಿ-ದೋಸೆ, ವಡಾ, ಸಾಂಬಾರ್ ಮತ್ತು ಫಿಲ್ಟರ್ ಕಾಫಿಯನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಮೆಕ್ಯಾನಿಕಲ್ ಇಂಜಿನಿಯರ್ ರಾಘವೇಂದ್ರ ಅವರು ಆಹಾರ ಉದ್ಯಮದಲ್ಲಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರ ಪತ್ನಿ ಮತ್ತು ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾ ರಾಘವೇಂದ್ರ ರಾವ್ ಅವರು ಐಐಎಂನಲ್ಲಿ ಓದಿದ್ದು, ಸಿಎ ಪದವಿ ಪಡೆದಿದ್ದಾರೆ.
ಮಾಸಿಕ 5 ಕೋಟಿ ರೂ. ಲಾಭ
ದಿವ್ಯಾ ಮತ್ತು ರಾಧಾವೇಂದ್ರ ದಂಪತಿ ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ಬಳಸಿಕೊಂಡು ತಮ್ಮ ಕೆಫೆಯನ್ನು ಮಾರುಕಟ್ಟೆಗೆ ತಂದರು. ಅವರು ತಮ್ಮ ಕೆಫೆಯ ಹೊರಗೆ ಗ್ರಾಹಕರೊಂದಿಗೆ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇಂದಿಗೂ ರಾಮೇಶ್ವರಂ ಕೆಫೆಯ ಹೊರಗೆ ಪ್ರತಿದಿನ ಗ್ರಾಹಕರ ಫೋಟೋಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದನ್ನು ಅವರು ತಮ್ಮ Instagram ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಈ ಕೆಫೆಯಿಂದ ಪ್ರತಿದಿನ 7,500 ಆರ್ಡರ್ಗಳನ್ನು ತಲುಪಿಸಲಾಗುತ್ತದೆ ಎಂದರೆ ನೀವು ಆಶ್ಚರ್ಯ ಪಡುತ್ತೀರಿ. ಈ ದಂಪತಿ ಕೆಲವೇ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಮೂರು ರೆಸ್ಟೋರೆಂಟ್ಗಳನ್ನು ತೆರೆದು ಯಶಸ್ವಿಯಾದರು. ಇಂದು ಬೆಂಗಳೂರಿನ ಹೊರತಾಗಿ ಹೈದರಾಬಾದ್ನಲ್ಲಿಯೂ ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ಗಳಿಕೆಯ ಬಗ್ಗೆ ಹೇಳುವುದಾದರೆ, ಈ ದಂಪತಿ ಪ್ರತಿ ಕೆಫೆಯಿಂದ ಪ್ರತಿತಿಂಗಳು ಸುಮಾರು 5 ಕೋಟಿ ರೂ. ಲಾಭ ಗಳಿಸುತ್ತಿದ್ದಾರೆ. ರಾಮೇಶ್ವರಂ ಕೆಫೆ ಇಂದು ದೊಡ್ಡ ಬ್ರಾಂಡ್ ಆಗಿ ಮಾರ್ಪಟ್ಟಿದೆ.
ಇದನ್ನೂ ಓದಿ: GST: ಜಿಎಸ್ಟಿ ಸಂಗ್ರಹ 2.5 ಪ್ರತಿಶತ ಹೆಚ್ಚಳ, 1.68 ಲಕ್ಷ ಕೋಟಿಗೆ ಏರಿಕೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.