ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಭೂಕಂಪನ

ಭೂಕಂಪನವು ರಿಕ್ಟರ್ ಮಾಪನದಲ್ಲಿ 3.1ರಷ್ಟಿದ್ದು ಯಾವುದೇ ಸಾವು ನೋವಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.ಈ ರೀತಿಯ ಭೂಕಂಪನವು ಕಳೆದ ವರ್ಷ ನವಂಬರ್ ನಿಂದಲೂ ಉಂಟಾಗಿದೆ ಎಂದು ತಿಳಿದುಬಂದಿದೆ.

Last Updated : Feb 13, 2019, 03:07 PM IST
ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಭೂಕಂಪನ title=

ನವದೆಹಲಿ: ಭೂಕಂಪನವು ರಿಕ್ಟರ್ ಮಾಪನದಲ್ಲಿ 3.1ರಷ್ಟಿದ್ದು ಯಾವುದೇ ಸಾವು ನೋವಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.ಈ ರೀತಿಯ ಭೂಕಂಪನವು ಕಳೆದ ವರ್ಷ ನವಂಬರ್ ನಿಂದಲೂ ಉಂಟಾಗಿದೆ ಎಂದು ತಿಳಿದುಬಂದಿದೆ.

ಬೆಳಗ್ಗೆ 10.44 ರ ವೇಳೆಗೆ ಧುಂದಲವಾಡಿ ಗ್ರಾಮದಲ್ಲಿ ಭೂಕಂಪನದ ಅನುಭವ ಉಂಟಾಗಿದೆ. ಇದೇ ಫೆಬ್ರುವರಿ 1 ರಂದು ರಿಕ್ಟರ್ ಮಾಪಕ 3.5 ದಹಾನು ಮತ್ತು ತಳಸಾರಿ ತಾಲೂಕಿನಲ್ಲಿಯೂ ಕೂಡ ಭೂಕಂಪನ ಉಂಟಾದ ಬಗ್ಗೆ ವರದಿಯಾಗಿತ್ತು. ಈ ಸಂದರ್ಭದಲ್ಲಿ ಎರಡು ವರ್ಷದ ಬಾಲಕಿ ಉರುಳಿ ಬಿದ್ದು ತಲೆಗೆ ಗಾಯವಾಗಿ ನಂತರ ಸಾವನ್ನುಪ್ಪಿದ್ದಳು.

ಈಗ ಈ ಪ್ರದೇಶದಲ್ಲಿ ಕಳೆದ ನವಂಬರ್ ತಿಂಗಳಿಂದಲೂ ಕೂಡ ನಿರಂತರವಾಗಿ ಭೂಕಂಪನ ಅನುಭವವಾಗುತ್ತಿದೆ.ಇದರಿಂದ ಜಿಲ್ಲಾ ಆಡಳಿತವು ಕೂಡ ದಹಾನು ತಾಲೂಕಿನ ಕೆಲವು ಗ್ರಾಮಗಳಲ್ಲಿ ಫೆ.12 ರಿಂದ 21 ರವರೆಗೆ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿ ಜಾಗೃತಿ ಮೂಡಿಸುತ್ತಿದೆ. 

  

Trending News