ನವದೆಹಲಿ : ಕರೋನಾ ವೈರಸ್‌ನಿಂದ (Coronavirus) ಚೇತರಿಸಿಕೊಂಡ ನಂತರ ಉಂಟಾದ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ (Ramesh Pokhriyal Nishank) ಅವರನ್ನು ಏಮ್ಸ್ ಗೆ ದಾಖಲಿಸಲಾಗಿದೆ. ಏಮ್ಸ್ (AIIMS) ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
12 ನೇ ತರಗತಿ ಪರೀಕ್ಷೆಯ ಬಗ್ಗೆ ಇಂದು ನಿರ್ಧಾರ:
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮತ್ತು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ (CICSE) 12ನೇ ತರತಿಯ ಪರೀಕ್ಷೆ ಯಬಗ್ಗೆ ಇಂದು ನಿರ್ಧಾರ ಹೊರ ಬೀಳಲಿದೆ. ಆದರೆ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ (Ramesh Pokhriyal Nishank) ಅವರ ಅನಾರೋಗ್ಯದ ಕಾರಣ ಪರೀಕ್ಷೆಯ ನಿರ್ಧಾರವನ್ನು ಮುಂದೂಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
Union Education Minister Dr Ramesh Pokhriyal Nishank admitted to AIIMS due to post COVID complications today: AIIMS officials
(File pic) pic.twitter.com/w1xMx8xhmt
— ANI (@ANI) June 1, 2021
ಇದನ್ನೂ ಓದಿ :Black Fungus: ದೇಶಾದ್ಯಂತ 26 ರಾಜ್ಯಗಳಲ್ಲಿ ಕಪ್ಪು ಶಿಲೀಂಧ್ರ ಹಾನಿ, ಇಷ್ಟು ಜನರಿಗೆ ಸೋಂಕು
ಮೇ 9 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಸಚಿವರು :
ಕರೋನಾ ವೈರಸ್‌ನಿಂದ (Coronavirus) ಚೇತರಿಸಿಕೊಂಡ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಮೇ 9 ರಂದು ಏಮ್ಸ್ (AIIMS) ನಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಇದಾದ ನಂತರ ಅವರು, ಟ್ವಿಟ್ಟರ್ ನಲ್ಲಿ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದರು.
कोरोना वायरस संक्रमण के कारण एम्स दिल्ली में अपने इलाज के पश्चात सकुशल घर वापसी पर एम्स की कोविड चिकित्सक टीम को हृदय की गहराइयों से धन्यवाद और विनम्रतापूर्वक आभार । pic.twitter.com/JMxg4OJddO
— Dr. Ramesh Pokhriyal Nishank (@DrRPNishank) May 9, 2021
ಇದನ್ನೂ ಓದಿ : Liquor at Home: ಈಗ ಮದ್ಯಕ್ಕಾಗಿ ಅಂಗಡಿ ಮುಂದೆ ಕ್ಯೂ ನಿಲ್ಲಬೇಕಿಲ್ಲ, ಈ ರೀತಿ ನಿಮ್ಮ ಮನೆ ಬಾಗಿಲಿಗೇ ತರಿಸಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.