Electricity Amendment Bill 2021: ಸೇವೆ ಸರಿಯಾಗಿ ನೀಡದಿದ್ದರೆ ನೀವೂ ನಿಮ್ಮ ವಿದ್ಯುತ್ಶಕ್ತಿ ಕಂಪನಿ ಬದಲಾಯಿಸಬಹುದು

Electricity Amendment Bill 2021 - ನಿಮ್ಮ ಟೆಲಿಕಾಂ ಕಂಪನಿ ನೀಡುತ್ತಿರುವ ಸೇವೆಯಿಂದ ಅತೃಪ್ತರಾಗಿರುವಾಗ ಯಾವ ರೀತಿ ನೀವು ಬೇರೆ ಟೆಲಿಕಾಂ ಕಂಪನಿಗೆ ಪೋರ್ಟ್ ಆಗುತ್ತೀರೋ, ಅದೇ ರೀತಿಯಲ್ಲಿ ನೀವು ನಿಮ್ಮ ಮನೆಯ ವಿದ್ಯತ ಸಂಪರ್ಕವನ್ನು ಕೂಡ ಮೊತ್ತೊಂದು ಕಂಪನಿಗೆ ಪೋರ್ಟ್ ಮಾಡಲು ಸಾಧ್ಯವಾಗಲಿದೆ. ಏಕೆಂದರೆ ಶೀಘ್ರದಲ್ಲಿಯೇ ಈ ಕುರಿತಾದ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ.

Written by - Nitin Tabib | Last Updated : Mar 16, 2021, 12:30 PM IST
  • ಟೆಲಿಕಾಂ ಕ್ಷೆತ್ರದಂತೆ ಇದೀಗ ನೀವು ನಿಮ್ಮ ವಿದ್ಯುತ್ ವಿತರಣಾ ಕಂಪನಿ ಕೂಡ ಬದಲಾಯಿಸಬಹುದು.
  • ಶೀಘ್ರದಲ್ಲಿಯೇ ಈ ಕುರಿತಾದ ಮಸೂದೆ ಸಂಸತ್ತಿನಲ್ಲಿ ಮಂಡನೆ.
  • ಚಾಲ್ತಿ ಅಧಿವೇಶನದಲ್ಲಿಯೇ ಈ ಮಸೂದೆ ಜಾರಿಗೆ ಬರುವ ಸಾಧ್ಯತೆ.
Electricity Amendment Bill 2021: ಸೇವೆ ಸರಿಯಾಗಿ ನೀಡದಿದ್ದರೆ ನೀವೂ ನಿಮ್ಮ ವಿದ್ಯುತ್ಶಕ್ತಿ ಕಂಪನಿ ಬದಲಾಯಿಸಬಹುದು title=
Electricity Amendment Bill 2021 (Representational Image)

ನವದೆಹಲಿ: Electricity Amendment Bill 2021 - ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವ ಕಂಪನಿಯ ಸೇವೆಯಿಂದ ಒಂದು ವೇಳೆ ನೀವು ಅಸಂತೃಪ್ತರಾಗಿದ್ದರೆ, ಶೀಘ್ರದಲ್ಲಿಯೇ ಆ ಕಂಪನಿಯನ್ನು ಬದಲಾಯಿಸಿ ಬೇರೆ ಕಂಪನಿಗೆ ಪೋರ್ಟ್ ಆಗುವ ಅಧಿಕಾರ ನಿಮಗೆ ಸಿಗಲಿದೆ. ಯಾವ ರೀತಿ ನೀವು ನಿಮ್ಮ ಟೆಲಿಕಾಂ ಸಂಪರ್ಕ ಬದಲಾಯಿಸುತ್ತೀರೋ ಅದೇ ರೀತಿ ನೀವು ಬೇರೆ ವಿದ್ಯುತ್ ಕಂಪನಿಯ ಕನೆಕ್ಷನ್ ಪಡೆಯಬಹುದು.

ಚಾಲ್ತಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ
ಸದ್ಯ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಸರ್ಕಾರ Electricity Amendment Bill 2021ಮಂಡಿಸುವ ಸಾಧ್ಯತೆ ಇದೆ. ಕಳೆದ ಜನವರಿ ತಿಂಗಳಿನಲ್ಲಿ ಕೇಂದ್ರ ಸಚಿವ ಸಂಪುಟ Electricity Amendment Bill 2021 ಕುರಿತಾದ ಪ್ರಸ್ತಾವನೆಗೆ ಸಂಸತ್ತಿನ ಅನುಮೋದನೆಗೆ ಜಾರಿಗೊಳಿಸಿದೆ (Budget Session). ಈ ಕರಡು ನಿಯಮ ಈ ಅಧಿವೇಶನದಲ್ಲಿ ಅನುಮೋದನೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ವರದಿ ಮಾಡಿವೆ.

ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ, ವಿದ್ಯುತ್(Electricity) ವಿತರಣಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ಗ್ರಾಹಕರಿಗೆ ಇದರಿಂದ ದೊಡ್ಡ ಶಕ್ತಿಯೇ ಸಿಗಲಿದೆ.

ನೂತನ ಖಾಸಗಿ ಕಂಪನಿಗಳಿಗೆ ಇದರಿಂದ ಭಾರಿ ಅವಕಾಶ ಸಿಗಲಿದೆ
ಈ ಮಸೂದೆ ಒಂದು ವೇಳೆ ಜಾರಿಯಾದರೆ ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳಿಗೆ ಇದರಿಂದ ಭಾರಿ ಲಾಭವಾಗಲಿದೆ. ಅಂದರೆ, ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಎಂಟ್ರಿ ನೀಡಲು ಅವುಗಳಿಗೆ ಇದರಿಂದ ಸಾಧ್ಯವಾಗಲಿದ್ದು, ಇದಕ್ಕಾಗಿ ಆ ಕಂಪನಿಗಳು ಯಾವುದೇ ರೀತಿಯ ಲೈಸನ್ಸ್ ಪಡೆಯುವ ಅವಶ್ಯಕತೆ ಬೀಳುವುದಿಲ್ಲ. ಇದರಿಂದ ವಿತ್ಯುತ್ ವಿತರಣಾ (Power Distribution) ಕ್ಷೇತ್ರದಲ್ಲಿ ಭಾರಿ ಸ್ಪರ್ಧೆಯೇ ಏರ್ಪಡಲಿದ್ದು, ಗ್ರಾಹಕರಿಗೂ (Power Consumers) ಕೂಡ ತಮ್ಮ ನೆಚ್ಚಿನ ಕಂಪನಿ ಆಯ್ಕೆ ಮಾಡುವ ಅವಕಾಶ ಸಿಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲ ಸರ್ಕಾರಿ ಹಾಗೂ ಆಯ್ದ ಖಾಸಗಿ ಕಂಪನಿಗಳಿಗೆ ಮಾತ್ರ ಈ ಅವಕಾಶ ಇದೆ.

ಇದನ್ನೂ ಓದಿ-SBI Doorstep Banking : ಕೂತಲ್ಲೇ ಸಿಗಲಿದೆ ಈ ಹತ್ತು ಸೇವೆಗಳ ಲಾಭ

ಒಂದೇ ಕ್ಷೆತ್ರದಲ್ಲಿ ಹಲವು ವಿದ್ಯುತ್ ವಿತರಣಾ ಕಂಪನಿಗಳು
ಸರ್ಕಾರದ ಈ ಹೆಜ್ಜೆಯಿಂದ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೂ ಕೂಡ ಅವರ ಕ್ಷೇತ್ರದಲ್ಲಿ ವಿದ್ಯುತ್ ವಿತರಣೆ ಮಾಡುವ ಹಲವು ಕಂಪನಿಗಳ ಆಯ್ಕೆ ಮಾಡಲು ಅವಕಾಶ ಸಿಗಲಿದೆ. ಸದ್ಯ ಪ್ರಸ್ತಾವಿಸಲಾಗಿರುವ ಮಸೂದೆ ಯಿಂದ ಅಸ್ತಿತ್ವದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳೂ ಕೂಡ ತಮ್ಮ ಸೇವೆ ನೀಡುವುದನ್ನು ಮುಂದುವರೆಸಲಿವೆ. ಆದರೆ, ಅವುಗಳಿಗೆ ತೀವ್ರ ಪ್ರತಿಸ್ಪರ್ಧೆ ನೀಡಲು ಇತರೆ ಕಂಪನಿಗಳು ಕೂಡ ಅಸ್ತಿತ್ವದಲ್ಲಿ ಬರಲಿವೆ. ಇದರಿಂದ ಗ್ರಾಹಕರ ಬಳಿ ವಿದ್ಯುತ್ ವಿತರಣಾ ಕಂಪನಿ ಆಯ್ಕೆ ಮಾಡುವ ಹಲವು ಅವಕಾಶಗಳು ಇರಲಿವೆ.

ಇದನ್ನೂ ಓದಿ-7th pay commission : DA ಹೆಚ್ಚಳದೊಂದಿಗೆ ವೇತನವು ಹೆಚ್ಚಳ , ಈ ತಾರೀಕಿನಿಂದ ಸಿಗಲಿದೆ ಲಾಭ

ಹೊಸ ಕಂಪನಿಗಳು ನೋಂದಣಿ ಮಾಡಬೇಕು
ವಿದ್ಯುತ್ ವಿತರಣಾ (Supply Of Electricity)ಕ್ಷೇತ್ರದಲ್ಲಿ ಎಂಟ್ರಿ ನೀಡಲು ಉದ್ದೇಶಿಸಿರುವ ಕಂಪನಿಗಳು ಕೇಂದ್ರ ಸರ್ಕಾರ ಜಾರಿಗೊಳಿಸುವ ಷರತ್ತುಗಳನ್ನು ಪಾಲಿಸಬೇಕಾಗಲಿದೆ. ಅಷ್ಟೇ ಅಲ್ಲ ವಿದ್ಯುತ್ ವಿತರಣೆ ಆರಂಭಿಸಲು ಮೊದಲು ಸೂಕ್ತ ಕಮಿಷನ್ ಜೊತೆಗೆ ಹೆಸರನ್ನು ನೋಂದಾಯಿಸಬೇಕಾಗಲಿದೆ. ಕಮಿಷನ್ ಕೂಡ 60 ದಿನಗಳೊಳಗೆ ಕಂಪನಿಗಳ ನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ಕಮಿಷನ್ ಗೆ ಅನಿಸಿದರೆ ಅದಕ್ಕೆ ನೋಂದಣಿ ರದ್ದು ಮಾಡುವ ಅಧಿಕಾರ ಕೂಡ ಇರಲಿದೆ. ಕಂಪನಿಗಳು ಒಂದು ವೇಳೆ ಷರತ್ತಿಗೆ ಬದ್ಧವಾಗಿ ಉಳಿಯದಿದ್ದರೆ ಅವುಗಳ ನೋಂದಣಿ ರದ್ದಾಗಲಿದೆ.

ಇದನ್ನೂ ಓದಿ- Ajay Devgn, Kajol ದಂಪತಿಯ ಭವ್ಯವಾದ ಬಂಗಲೆ ಹೇಗಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News