WATCH: ತನ್ನ ತೂಕಕ್ಕೆ ಸಮನಾದ ಜಿಂಕೆ ಹೊತ್ತು ಮರವನ್ನು ಹತ್ತಿದ ಚಿರತೆ

Leopard Video: ಕಾಡಿನಲ್ಲಿ ಪ್ರಾಣಿಗಳು ಬೇಟೆಯಾಡುವುದು ಸಾಮಾನ್ಯವಾದರೂ, ಈ ದೃಶ್ಯ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸುತ್ತಿದೆ.

Edited by - Zee Kannada News Desk | Last Updated : Feb 15, 2022, 07:09 PM IST
  • ಪ್ರವಾಸಿಗರ ಕಣ್ಣೆದುರೇ ಬೇಟೆಯಾಡಿದ ಚಿರತೆ
  • ತನ್ನ ತೂಕಕ್ಕೆ ಸಮನಾದ ಜಿಂಕೆ ಹೊತ್ತು ಮರವನ್ನು ಹತ್ತಿದ ಚಿರತೆ
  • ಪ್ರವಾಸಿಗರು ಕ್ಯಾಮೆರಾದಲ್ಲಿ ಅಪರೂಪದ ಬೇಟೆ ದೃಶ್ಯ ಸೆರೆ
WATCH: ತನ್ನ ತೂಕಕ್ಕೆ ಸಮನಾದ ಜಿಂಕೆ ಹೊತ್ತು ಮರವನ್ನು ಹತ್ತಿದ ಚಿರತೆ  title=
ಚಿರತೆ

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಒಂದು ವಿಶಿಷ್ಟ ದೃಶ್ಯ ಕಂಡುಬಂದಿದೆ. ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Sariska Tiger Reserve) ಜಿಂಕೆಯನ್ನು ಬೇಟೆಯಾಡಿದ ಚಿರತೆ ಅದರೊಂದಿಗೆ ಮರವನ್ನು ಏರಿದೆ. ಬೇಟೆಯನ್ನು ಮರದ ಮೇಲೆ ನೇತುಹಾಕಿದ ಚಿರತೆ, ಜಿಂಕೆಗಳನ್ನು ತಿನ್ನಲು ಪ್ರಾರಂಭಿಸಿತು. ಈ ದೃಶ್ಯವನ್ನು ಪ್ರವಾಸಿಗರೊಬ್ಬರು ಕ್ಯಾಮರಾದಲ್ಲಿ ಸೆರೆ (Viral Video) ಹಿಡಿದಿದ್ದಾರೆ.

ಇದನ್ನೂ ಓದಿ:Bachchan Pandey: ಬಚ್ಚನ್ ಪಾಂಡೆ ಹೊಸ ಪೋಸ್ಟರ್ ರಿಲೀಸ್.. ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್

ಪ್ರವಾಸಿಗರು ಇಂತಹ ದೃಶ್ಯವನ್ನು ಮೊದಲ ಬಾರಿಗೆ ನೋಡಿದ್ದಾರೆ. ಈ ದೃಶ್ಯವನ್ನು ಸರಿಸ್ಕಾ ಹುಲಿ (Tiger) ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಏಕೆಂದರೆ ಭೇಟಿ ನೀಡಿದ ಪ್ರವಾಸಿಗರು ಮೊದಲ ಬಾರಿಗೆ ಬೇಟೆಯಾಡುತ್ತಿರುವ ದೃಶ್ಯವನ್ನು ನೋಡಿದ್ದಾರೆ.

ಚಿರತೆ (Leopard) ಜಿಂಕೆಯನ್ನು ಬೇಟೆಯಾಡುತ್ತಿರುವುದನ್ನು ನೋಡಿದ ಪ್ರವಾಸಿಗರ ಸಂತಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಇಂತಹ ದೃಶ್ಯ ಅಪರೂಪಕ್ಕೆ ಕಾಣಸಿಗುತ್ತದೆ ಎಂದು ಸರಿಸ್ಕಾ ಮಾರ್ಗದರ್ಶಕ ಶ್ಯಾಮಸುಂದರ್‌ ಹೇಳಿದ್ದಾರೆ. 

ಇದನ್ನೂ ಓದಿ: ರತ್ನದ ಉಂಗುರ ತೊಟ್ಟರೂ ಅದೃಷ್ಟ ಬದಲಾಗುತ್ತಿಲ್ಲ.. ಹಾಗಾದರೆ ಖಂಡಿತ ಈ ಕೆಲಸ ಮಾಡಿ

ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಿರತೆಗಳಿವೆ. ಇದಲ್ಲದೇ ಪ್ರವಾಸಿಗರಿಗೆ ಚಿರತೆ ಕಾಣಿಸಿಕೊಂಡಿರುವುದು ಸಾಮಾನ್ಯವಾಗಿದೆ. ಚಿರತೆಯೊಂದು ಜಿಂಕೆಯನ್ನು (Deer) ಬೇಟೆಯಾಡಿ ಬಾಯಿಯಲ್ಲಿ ಹಿಡಿದುಕೊಂಡು ಮರದ ತುದಿಗೆ ಕೊಂಡೊಯ್ದು ಮರದ ಮೇಲೆ ಕುಳಿತು ತಿನ್ನುತ್ತಿರುವ ದೃಶ್ಯ ಕಂಡು ಪ್ರವಾಸಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಜಿಂಕೆ ಚಿರತೆಯ ತೂಕಕ್ಕೆ ಸಮವಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News