ಗಂಡರ್‌ಬಾಲ್‌ನಲ್ಲಿ ಭದ್ರತಾ ಪಡೆ-ಉಗ್ರರ ನಡುವೆ ಗುಂಡಿನ ಕಾಳಗ, ಉಗ್ರರ ಹತ್ಯೆ

ಹಿಂದಿನ ಭಾನುವಾರ, ಭದ್ರತಾ ಪಡೆಗಳಿಗೆ ಬಂಡಿಪೋರಾದ ಲಾವ್ದರಾ ಪ್ರದೇಶದಲ್ಲಿ ಭಯೋತ್ಪಾದಕರನ್ನು ಅಡಗಿಸಿಟ್ಟಿರುವ ಬಗ್ಗೆ ಮಾಹಿತಿ ದೊರೆತಿದ್ದು, ಇದರ ಆಧಾರದ ಮೇಲೆ ಸೇನೆಯುಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ  ಜಂಟಿ ಕಾರ್ಯಾಚರಣೆ ನಡೆಸಿದ್ದು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

Last Updated : Nov 12, 2019, 09:57 AM IST
ಗಂಡರ್‌ಬಾಲ್‌ನಲ್ಲಿ ಭದ್ರತಾ ಪಡೆ-ಉಗ್ರರ ನಡುವೆ ಗುಂಡಿನ ಕಾಳಗ, ಉಗ್ರರ ಹತ್ಯೆ title=

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡರ್‌ಬಾಲ್‌ನಲ್ಲಿ ಮಂಗಳವಾರ ಬೆಳಿಗ್ಗೆ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. 

ಗುಂಡರ್‌ಬಾಲ್‌ನ ಗುಂಡ್ ಪ್ರದೇಶದಲ್ಲಿ 2-3 ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ,  ಜಮ್ಮು ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಯು ಜಂಟಿ ಕಾರ್ಯಾಚರಣೆ ನಡೆಸಿ ಇಡೀ ಪ್ರದೇಶವನ್ನು ಸುತ್ತುವರೆದಿತ್ತು. ಈ ಸಂದರ್ಭದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಎರಡೂ ಕಡೆಯಿಂದ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ, ಹತ್ಯೆಗೀಡಾದ ಭಯೋತ್ಪಾದಕರ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಆದರೆ ಈ ಭಯೋತ್ಪಾದಕರು ಲಷ್ಕರ್-ಎ-ತೈಬಾಗೆ ಸೇರಿದವರು ಎಂದು ಹೇಳಲಾಗುತ್ತಿದೆ.

Trending News