ಮಾಲೆಗಾವ್:ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿರುವ ಮಾಲೆಗಾವ್ ಜಾತ್ರೆಯಲ್ಲಿ ಪ್ರತಿ ವರ್ಷ ಕತ್ತೆಗಳ ಸಂತೆ ನಡೆಯುತ್ತದೆ. ಇಲ್ಲಿ ಕತ್ತೆಗಳ ಖರೀದಿ ಹಾಗೂ ಮಾರಾಟಕ್ಕಾಗಿ ಜನರು ನೆರೆಯುತ್ತಾರೆ. ಈ ಸಂತೆಯಲ್ಲಿ ಒಂದು ಕಾಲದಲ್ಲಿ 10-15ಸಾವಿರಕ್ಕೆ ಮಾರಾಟವಾಗುತ್ತಿದ್ದ ಕತ್ತೆಗಳು ಇಂದು 30-35 ಸಾವಿರಕ್ಕೆ ಮಾರಾಟವಾಗುತ್ತಿವೆ. ಕಡಿಮೆಯಾಗುತ್ತಿರುವ ಕತ್ತೆಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯಾಗಿದೆ ಎಂದು ವರ್ತಿಸಲಾಗುತ್ತಿದೆ.
ಈ ಕುರಿತು ಮಾತನಾಡುವ ಕತ್ತೆಗಳ ವ್ಯಾಪಾರಿ ಗುಣಾಜಿ ತೇಲಂಗ್ "ನಾನು ಕಳೆದ 20 ವರ್ಷಗಳಿಂದ ಕತ್ತೆಗಳ ವ್ಯಾಪಾರ ನಡೆಸುತ್ತೇನೆ. ನಾನು ವ್ಯಾಪಾರ ಆರಂಬಿಸಿದ ವೇಳೆ 5 ಸಾವಿರ ರೂ.ಗಳಿಗೆ ಒಂದು ಕತ್ತೆ ಮಾರಾಟವಾಗುತ್ತಿತ್ತು. ಆದೆ ಇಂದು 25-30 ಸಾವಿರ ರೂ.ಗಳಿಗೆ ಒಂದು ಕತ್ತೆ ಮಾರಾಟವಾಗುತ್ತಿದ್ದು, 35 ಸಾವಿರ ರೂ.ಗಳಿಗೂ ಒಂದು ಕತ್ತೆ ಖರೀದಿಸುವ ಜನ ಇದ್ದಾರೆ" ಎನ್ನುತ್ತಾರೆ.
ಮತ್ತೋರ್ವ ಕತ್ತೆಗಳ ವ್ಯಾಪಾರಿ ಕನೋಜಿ ಮಾನೆ ಹೇಳುವ ಪ್ರಕಾರ ಸದ್ಯ 10-35 ಸಾವಿರ ರೂ.ಗಳಿಗೆ ಒಂದು ಕತ್ತೆ ಮಾರಾಟವಾಗುತ್ತಿದ್ದು, ಕತ್ತೆಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಈ ಕಾರಣದಿಂದ ಕತ್ತೆಗಳ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ.
ಈ ಸಂತೆಯ ವಿಶೇಷತೆ ಎಂದರೆ, ಇಲ್ಲಿ ಸಾಲದ ಮೇಲೂ ಕೂಡ ನೀವು ಕತ್ತೆಗಳನ್ನು ಖರೀದಿಸಬಹುದು. ಹಾಗೂ ಮುಂದಿನ ವರ್ಷದ ಸಂತೆಯ ವೇಳೆ ನೀವು ಅದನ್ನು ತೀರಿಸಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿ EMI ರೂಪದಲ್ಲಿಯೂ ಕೂಡ ನೀವು ಹಣವನ್ನು ತೀರಿಸಬಹುದಾಗಿದೆ.
ಈ ಕುರಿತು ಮಾತನಾಡುವ ಕತ್ತೆಗಳ ವ್ಯಾಪಾರೀ ಕಾಲಬಾ ಮಾನೆ, "ನಾನು ಕತ್ತೆ ಖರೀದಿಸುವವರ ಗುರಿತು ಚೀಟಿಯ ಝೆರಾಕ್ಸ್ ಪ್ರತಿಯನ್ನು ಪಡೆದು ಕೂಡ ಕತ್ತೆಗಳ ಮಾರಾಟ ಮಾಡಿದ್ದೇನೆ" ಎನ್ನುತ್ತಾರೆ. ಉಳ್ಳವರು ನಗದು ಹಣ ನೀಡಿ ಕತ್ತೆಗಳನ್ನು ಖರೀದಿಸುತ್ತಾರೆ. ಆದರೆ ಕೆಲ ಖರೀದಿದಾರರು ತಮ್ಮಲ್ಲಿರುವಷ್ಟು ಹಣ ನೀಡಿ ಕತ್ತೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಬಳಿಕ ಉಳಿದ ಹಣವನ್ನು ಕಂತುಗಳಲ್ಲಿ ಪಾವತಿಸುತ್ತಾರೆ ಎಂದು ಹೇಳುತ್ತಾರೆ.