ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯವಾಗಿದೆ; ಲೋಕಸಭೆಯಲ್ಲಿ ಅಮಿತ್ ಶಾ

ಜಮ್ಮು-ಕಾಶ್ಮೀರದಲ್ಲಿ ವಿಧಿ 370 ಅನ್ನು ತೆಗೆದುಹಾಕಿದ ಬಳಿಕ ಕಣಿವೆ ರಾಜ್ಯ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Last Updated : Dec 10, 2019, 01:16 PM IST
ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯವಾಗಿದೆ; ಲೋಕಸಭೆಯಲ್ಲಿ ಅಮಿತ್ ಶಾ title=
File Image

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ವಿಚಾರ ಲೋಕಸಭೆಯಲ್ಲಿ ಮಂಗಳವಾರ ಮತ್ತೆ ಸದ್ದು ಮಾಡಿದೆ. ವಾಸ್ತವವಾಗಿ, ಸದನದಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ರಾಜ್ಯ ನಾಯಕರನ್ನು ಎಷ್ಟು ದಿನ ಬಂಧನದಲ್ಲಿಡಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ(Amit Shah), ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿ. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಅಲ್ಲಿ ರಕ್ತಪಾತ ನಡೆಯಲಿದೆ, ಜನರು ಸಾಯುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಇದಾವುದೂ ಆಗಲಿಲ್ಲ ಎಂದು ಹೇಳಿದರು. 

ಜಮ್ಮು-ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದಾಗಿನಿಂದ, ಕಾಶ್ಮೀರದಲ್ಲಿ ಪೊಲೀಸರು ಗುಂಡಿನ ದಾಳಿಯಿಂದ ಒಂದೂ ಸಾವು ಸಂಭವಿಸಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಸಾಮಾನ್ಯವೆಂದು ಅನಿಸುವುದಿಲ್ಲ ಎಂದು ಅಮಿತ್ ಶಾ ಪ್ರತಿಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪುರಸಭೆ ಚುನಾವಣೆ ಶಾಂತಿಯುತವಾಗಿ ನಡೆಯಿತು, ಮಕ್ಕಳು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಇದು ಸಾಮಾನ್ಯ ಪರಿಸ್ಥಿತಿ ಅಲ್ಲವೇ? 99.5 ರಷ್ಟು ಮಕ್ಕಳು ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ರಾಜಕೀಯ ಚಟುವಟಿಕೆಗಳನ್ನು ಸಾಮಾನ್ಯ ಪರಿಸ್ಥಿತಿ ಎಂದು ಕಾಂಗ್ರೆಸ್ ಮಾತ್ರ ಪರಿಗಣಿಸುತ್ತದೆ? ಎಂದು ಶಾ ತೀಕ್ಷ್ಣ ಮಾತುಗಳಿಂದ ಪ್ರತಿಕ್ರಿಯಿಸಿದರು.

ಈ ಕುರಿತು ಅಧೀರ್ ರಂಜನ್ ಚೌಧರಿ(Adhir Ranjan Chowdhury), 'ಜಮ್ಮು ಮತ್ತು ಕಾಶ್ಮೀರದಲ್ಲಿ ರಾಮ-ರಾಜ್ಯ ಸ್ಥಾಪನೆಯಾಗಿದೆ ಎಂದು ನಿಮ್ಮ ಉತ್ತರದಿಂದ ತೋರುತ್ತದೆ. ಟ್ರೆಡರ್ ಲಕ್ಷಾಂತರ ಕೋಟಿ ನಷ್ಟವಾಗಿದೆ, ದೇಶದ ಸಂಸದರಿಗೆ ಹೋಗಲು ಅನುಮತಿ ಇಲ್ಲ ಎಂದು ಹೇಳುತ್ತಾರೆ. ರಾಹುಲ್ ಗಾಂಧಿಗೆ ಹೋಗಲು ಅನುಮತಿ ಇಲ್ಲ. ಇದು ಯಾವ ಸಾಮಾನ್ಯತೆ? ಅನೇಕ ನಾಯಕರು ಇನ್ನೂ ಬಂಧನದಲ್ಲಿದ್ದಾರೆ, ಅವರನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ? ಎಂದು ಮತ್ತೆ ದನಿ ಎತ್ತಿದರು.

ಅಧೀರ್ ರಂಜನ್ ಅವರ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಅಮಿತ್ ಶಾ, 'ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ. ಆದರೆ ನಾವು ಕಾಂಗ್ರೆಸ್ ಸ್ಥಾನವನ್ನು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. 7 ಲಕ್ಷಕ್ಕೂ ಹೆಚ್ಚು ಒಪಿಡಿ ರೋಗಿಗಳು ಆಗಮಿಸಿದರು. ಪೊಲೀಸ್ ಗುಂಡಿನ ದಾಳಿ ಜನಸಾಮಾನ್ಯರ ಸಾವಿಗೆ ಕಾರಣವಾಗಲಿಲ್ಲ. ಸಂಚಾರ ಸಾಮಾನ್ಯವಾಗಿದೆ. ಆದಾಗ್ಯೂ, ರಾಜಕೀಯ ಚಟುವಟಿಕೆಗಳು ಪ್ರಾರಂಭವಾದಾಗ ಮಾತ್ರ ಇದು ನಿಮಗೆ ಸಾಮಾನ್ಯತೆಯ ವ್ಯಾಖ್ಯಾನ ಎಂದೆನಿಸುತ್ತದೆಯೇ ಎಂದರಲ್ಲದೆ, ಎಲ್ಲಾ ಪಂಚಾಯತ್ ಚುನಾವಣೆಗಳು ನಡೆದಿವೆ. ಎಷ್ಟೋ ವರ್ಷಗಳಿಂದ ಇದು ಸಾಧ್ಯವಾಗಿಯೇ ಇರಲಿಲ್ಲ. ಶೇಖ್ ಅಬ್ದುಲ್ಲಾ ಅವರನ್ನು 11 ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ನೀವು ಆಡಳಿತವನ್ನು ಕರೆದು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿದ್ದೀರಿ. ಇದು ನಮ್ಮ ಅಭ್ಯಾಸವಲ್ಲ ಎಂದು ಚಾಟಿ ಬೀಸಿದ ಶಾ, ಆಡಳಿತವು ರಾಜ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಬಂಧನಕ್ಕೊಳಗಾಗಿರುವವರನ್ನು ಬಿಡುಗಡೆ ಮಾಡಲಿದೆ ಎಂದು ಸ್ಪಷ್ಟನೆ ನೀಡಿದರು.

2019 ರಲ್ಲಿ ಕಲ್ಲು ತೂರಾಟದ 544 ಘಟನೆಗಳು ನಡೆದಿವೆ, 90 ಪ್ರತಿಶತಕ್ಕೂ ಹೆಚ್ಚು ವಿದ್ಯಾರ್ಥಿಗಳು 11 ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಮೊಬೈಲ್ ಪೋಸ್ಟ್‌ಪೇಯ್ಡ್ ಮೊಬೈಲ್ ಫೋನ್‌ಗಳನ್ನು ಬಳಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ, ನೆರೆಯ ರಾಷ್ಟ್ರಗಳು ಇನ್ನೂ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ. ಆದರೆ ಸರ್ಕಾರವು ಭದ್ರತೆಗೆ ಸಂಬಂಧಿಸಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ವಿವರಿಸಿದರು.

Trending News