ನವದೆಹಲಿ : ಇಂಟರ್ನೆಟ್ ನಲ್ಲಿ ಲಕ್ಷಾಂತರ ವೀಡಿಯೊಗಳು (Viral video) ಬರುತ್ತಿರುತ್ತವೆ. ಕೆಲವು ವಿಡಿಯೋಗಳು ಆಶ್ಚರ್ಯವನ್ನು ಉಂಟು ಮಾಡಿದರೆ ಇನ್ನು ಕೆಲವು ವಿಡಿಯೋಗಳು ಭಯಾನಕವಾಗಿರುತ್ತವೆ. ಮತ್ತೊಂದೆಡೆ, ಕೆಲವು ವಿಡಿಯೋಗಳನ್ನು ನೋಡಿದರೆ ನಗು ತಡೆಯುವುದಿಲ್ಲ (Funny video). ಇಂಥಹ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋವನ್ನು ಇಲ್ಲಿ ಕೂಡಾ ಕಾಣಬಹುದು. ಈ ವೀಡಿಯೊ ಕೋಳಿ ಮತ್ತು ಹದ್ದಿಗೆ ಸಂಬಂಧಿಸಿದ ವಿಡಿಯೋವಾಗಿದೆ. ಇದನ್ನು ಸಾಮಾಜಿಕ ಮಾಧ್ಯಮದ (Social media) ಬೇರೆ ಬೇರೆ ವೇದಿಕೆಗಳಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ.
ಇಲ್ಲಿರುವುದು ಕೋಳಿ ಮತ್ತು ಹದ್ದಿಗೆ ಸಂಬಂಧಿಸಿದ ಕೆಲವು ಸೆಕೆಂಡುಗಳ ವಿಡಿಯೋವಷ್ಟೇ. ಕೋಳಿ ತನ್ನ ಮರಿಗಳೊಂದಿಗೆ ತೆರೆದ ಮೈದಾನದಲ್ಲಿ ತನ್ನ ಪಾಡಿಗೆ ಇರುವುದನ್ನು ಇಲ್ಲಿ ಕಾಣಬಹುದು. ಅಷ್ಟರಲ್ಲಿ ಅಲ್ಲಿಗೆ ಹದ್ದು ಬರುತ್ತದೆ. ಹದ್ದಿಗೆ ಸಾಮಾನ್ಯವಾಗಿ ಕೋಳಿ ಮರಿ ಸುಲಭದ ಬೇಟೆ. ಆದರೆ ಇಲ್ಲಿ ಹಾಗಾಗುವುದಿಲ್ಲ. ಹದ್ದು ತನ್ನ ಮರಿಗಳತ್ತ ಬರುತ್ತಿರುವುದನ್ನು ತಾಯಿ ಕೋಳಿ ನೋಡಿದ್ದೇ ತಡ ಕೋಳಿ ಹದ್ದಿನ ಮೇಲೆರಗಿ ಬಿಡುತ್ತದೆ. ತನ್ನ ಮರಿಗಳ ರಕ್ಷಣೆಗೆ ನಿಲ್ಲುವ ಕೋಳಿ, ಹದ್ದಿಗೆ ಸರಿಯಾದ ಪಾಠ ಕಲಿಸುತ್ತದೆ.
Mother’s Power(MP) is far stronger than Horse Power(HP)... pic.twitter.com/JxPo9kEJ69
— Susanta Nanda IFS (@susantananda3) November 18, 2021
ಇದನ್ನೂ ಓದಿ : Viral Video: ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನನ್ನು ಎಳೆದಾಡಿ ಥಳಿಸಿದ ಮಹಿಳೆ, ವಿಡಿಯೋ ವೈರಲ್
ಈ ವಿಡಿಯೋ (Viral video) ಆಶ್ಚರ್ಯವನ್ನು ಉಂಟು ಮಾಡುತ್ತದೆ. ತಾಯಿ ತನ್ನೆಲ್ಲಾ ಶಕ್ತಿಯನ್ನು ಬಳಸಿ ತನ್ನ ಮರಿಗಳನ್ನು ರಕ್ಷಿಸುವುದನ್ನು ನೋಡಿದರೆ ತಾಯಿಯ ಶಕ್ತಿ ಕೂಡಾ ಇಲ್ಲಿ ತಿಳಿಯುತ್ತದೆ. ಅಷ್ಟೊಂದು ಚೂಪಾದ ಕೊಲ್ಲು ಹೊಂದಿರುವ ಹದ್ದನ್ನು ಕೋಳಿ ಕುಕ್ಕಿ (Hen video) ಕುಕ್ಕಿ ಸುಸ್ತಾಗಿಸಿ ಬಿಡುತ್ತದೆ. ಅಲ್ಲದೆ, ಹದ್ದು ಮರಿಗಳಿಂದ ದೂರು ಉಳಿಯುವಂತೆ ಮಾಡುತ್ತದೆ.
ಈ ವಿಡಿಯೋವನ್ನು ಐಎಫ್‌ಎಸ್ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ (twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಸಾವಿರಾರು ಮಂದಿ ಈ ವಿಡಿಯೋವನ್ನು (Video on social media)ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಹಾಡಹಗಲೇ ಬೈಕ್ ಗೆ ಅಡ್ಡಬಂದ ಚಿರತೆ, ಆಮೇಲೇನಾಯ್ತು ನೋಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.