ಮುಂಬೈ 'Gateway of India'ಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತ! ಇಲ್ಲಿದೆ ವಿಡಿಯೋ

'ಗೇಟ್ ವೇ ಆಫ್ ಇಂಡಿಯಾ'ಗೆ ಅಪ್ಪಳಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ  ವೈರಲ್

Last Updated : May 18, 2021, 05:18 PM IST
  • ತೌಕ್ತೆ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಉಂಟಾದ ಭಾರೀ ಅಲೆಗಳು
  • ಅಲೆಗಳು ನಗರದ 'ಗೇಟ್ ವೇ ಆಫ್ ಇಂಡಿಯಾ'ಗೆ ಅಪ್ಪಳಿಸಿದ ವಿಡಿಯೋ
  • ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 230 ಮಿ.ಮೀ ಮಳೆ
ಮುಂಬೈ 'Gateway of India'ಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತ! ಇಲ್ಲಿದೆ ವಿಡಿಯೋ

ಮುಂಬೈ : ತೌಕ್ತೆ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಉಂಟಾದ ಭಾರೀ ಅಲೆಗಳು ನಗರದ 'ಗೇಟ್ ವೇ ಆಫ್ ಇಂಡಿಯಾ'ಗೆ ಅಪ್ಪಳಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ  ವೈರಲ್ ಆಗಿದೆ.

ರೋಸಿ ಎಂಬುವರು ತಮ್ಮ ಟ್ವೀಟ್ ಖಾತೆಯಲ್ಲಿ ಗೇಟ್ ವೇ ಆಫ್ ಇಂಡಿಯಾ(Gateway of India)ದ ಗೋಡೆಗಳಿಗೆ ಅಲೆಗಳು ಅಪ್ಪಳಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Elephant Video : ಕಾರಣವಿಲ್ಲದೆ ಹಾರನ್ ಹಾಕಿದ ಟ್ರಕ್ ಡ್ರೈವರ್ ವಿರುದ್ಧ ಗಜರಾಜನ ಕೋಪ

ಈ ವಿಡಿಯೋ(Viral Video)ವನ್ನು ಗೇಟ್ ವೇ ಆಫ್ ಇಂಡಿಯಾದ ಪಕ್ಕದಲ್ಲಿರುವ ತಾಜ್ ಹೋಟೆಲ್ ನಿಂದ ಸೆರೆ ಹಿಡಿಯಲಾಗಿದೆ.

 

ಇದನ್ನೂ ಓದಿ : ಮಂಗಳನ ಮೇಲೊಂದು ಮೆಗಾಸಿಟಿ ಯಾವಾಗ ನಿರ್ಮಾಣವಾಗುತ್ತೆ ಗೊತ್ತಾ..?

ತೌಕ್ತೆ ಚಂಡಮಾರುತ(Cyclone Tauktae) ಮುಂಬೈ ಕರಾವಳಿ ಸಮೀಪದ ಹಾದು ಹೋಗಿದ್ದು, ವಾಣಿಜ್ಯನಗರದಲ್ಲಿ 114 ಕಿಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಕೊರೊನಾ ನಿರ್ವಹಣೆಯಲ್ಲಿ ಜಾಗತಿಕ ಮೆಚ್ಚುಗೆ ಗಳಿಸಿದ ಶೈಲಜಾ ಟೀಚರ್ ಗೆ ಇಲ್ಲ ಸಚಿವ ಸ್ಥಾನ

ಮುಂಬೈ(Mumbai)ನಲ್ಲಿ 230 ಮಿ.ಮೀ ಮಳೆ ಆಗಿದೆ. ಇದು 24 ಗಂಟೆಗಳಲ್ಲಿ ಮೇ ತಿಂಗಳಲ್ಲಿ ಸುರಿದ ಅತೀ ಹೆಚ್ಚು ಮಳೆ ಆಗಿದೆ ಎಂದು ಐಎಂಡಿ ತಿಳಿಸಿದೆ.

ಇದನ್ನೂ ಓದಿ : Chaman Lal Gupta : ಬಿಜೆಪಿಯ ಮಾಜಿ ಕೇಂದ್ರ ಸಚಿವ ಚಮನ್ ಲಾಲ್ ಗುಪ್ತಾ ಇನ್ನಿಲ್ಲ!

ಇಂದು ಬೆಳಿಗ್ಗೆ 8 ಗಂಟೆಗಳವರೆಗೆ ಸಾಂತಾಕ್ರೂಜ್‌ ವೀಕ್ಷಣಾಲಯದಲ್ಲಿ 230.3 ಮಿ.ಮೀ ಮಳೆ(Rain) ದಾಖಲಾಗಿದೆ. ಇದೇ ಅವಧಿಯಲ್ಲಿ ಕೊಲಾಬಾ ವೀಕ್ಷಣಾಲಯದಲ್ಲಿ 207.6 ಮಿ.ಮೀ ಮಳೆ ದಾಖಲಾಗಿದೆ' ಎಂದು ಮುಂಬೈನ ಐಎಂಡಿ ಪ್ರಾದೇಶಿಕ ಕಚೇರಿಯು ತಿಳಿಸಿದೆ.

ಇದನ್ನೂ ಓದಿ : Ather Energy ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಸೋರಿಕೆ

ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 230 ಮಿ.ಮೀ ಮಳೆ ಸುರಿದಿದೆ. ಇದು 24 ಗಂಟೆಗಳಲ್ಲಿ ಮೇ ತಿಂಗಳಲ್ಲಿ ಸುರಿದ ಅತಿ ಹೆಚ್ಚು ಮಳೆ ಎಂದು ಪುಣೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರಾಲಜಿ(Indian Institute of Meteorological Department Pune)ಯಲ್ಲಿನ ಸಂಶೋಧಕ ವಿನೀತ್‌ ಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News