ಯಾತ್ರಿಕರಿಗೆ ಗುಡ್ ನ್ಯೂಸ್: ಏ.15ರಿಂದ ಈ ವಿಮಾನಯಾನ ಸಂಸ್ಥೆಗಳಿಂದ ಸಿಗಲಿದೆ ಎರಡು ದೊಡ್ಡ ಸೌಲಭ್ಯ

ಮೇ 31 ರವರೆಗೆ ಟಿಕೆಟ್‌ನಲ್ಲಿ ಪ್ರಯಾಣದ ದಿನಾಂಕವನ್ನು ಬದಲಾಯಿಸಿದರೆ ಅದು ಸುಂಕ ರಹಿತವಾಗಿರಲಿದೆ ಎಂದು ಏರ್ ಏಷ್ಯಾ ಇಂಡಿಯಾ (Air Asia India) ಪ್ರಕಟಿಸಿದೆ. ಎರಡನೇ ಸುದ್ದಿ ಏರ್‌ಲೈನ್ಸ್ ಗೋಏರ್ (GoAir) ಏಪ್ರಿಲ್ 15 ರಿಂದ ದೇಶೀಯ ವಿಮಾನಗಳ ಟಿಕೆಟ್ ಕಾಯ್ದಿರಿಸುವಿಕೆಯನ್ನು ಪ್ರಕಟಿಸಿದೆ.  

Last Updated : Apr 7, 2020, 10:27 AM IST
ಯಾತ್ರಿಕರಿಗೆ ಗುಡ್ ನ್ಯೂಸ್: ಏ.15ರಿಂದ ಈ ವಿಮಾನಯಾನ ಸಂಸ್ಥೆಗಳಿಂದ ಸಿಗಲಿದೆ ಎರಡು ದೊಡ್ಡ ಸೌಲಭ್ಯ  title=

ನವದೆಹಲಿ : ಲಾಕ್‌ಡೌನ್ ಮುಕ್ತಾಯಗೊಂಡ ಬಳಿಕ ಏಪ್ರಿಲ್ 15 ರಿಂದ ನೀವು ವಿಮಾನದಲ್ಲಿ ಪ್ರಯಾಣಿಸುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ ಈ ಎರಡು ಸುದ್ದಿಗಳು ನಿಮಗೆ ಅನುಕೂಳವಾಗಲಿವೆ. ಮೊದಲನೆಯದು, ಖಾಸಗಿ ವಿಮಾನಯಾನ ಕಂಪನಿ ಏರ್ ಏಷ್ಯಾ (Air Asia ) ಮೇ 31 ರವರೆಗೆ  ಟಿಕೆಟ್‌ನಲ್ಲಿ ಪ್ರಯಾಣದ ದಿನಾಂಕವನ್ನು ಬದಲಾಯಿಸಿದರೆ ಅದು ಸುಂಕ ರಹಿತವಾಗಿರಲಿದೆ ಎಂದು ಘೋಷಿಸಿದೆ. ಎರಡನೇ ಸುದ್ದಿ ಏರ್‌ಲೈನ್ಸ್ ಗೋಏರ್ (GoAir) ಏಪ್ರಿಲ್ 15 ರಿಂದ ದೇಶೀಯ ವಿಮಾನಗಳ ಟಿಕೆಟ್ ಕಾಯ್ದಿರಿಸುವಿಕೆಯನ್ನು ಪ್ರಕಟಿಸಿದೆ.

ಏರ್ ಏಷ್ಯಾ ಪ್ರಕಾರ, ಪ್ರಯಾಣಿಕರು ಪ್ರಯಾಣಕ್ಕಾಗಿ ಟಿಕೆಟ್ ದಿನಾಂಕವನ್ನು 31 ಮೇ 2020 ರಂದು ಅಥವಾ ಮೊದಲು ಅಥವಾ ಭವಿಷ್ಯದಲ್ಲಿ ಯಾವುದೇ ಶುಲ್ಕವನ್ನು ಪಾವತಿಸದೆ ಬದಲಾಯಿಸಬಹುದು. ದೇಶೀಯ ಮಾರ್ಗದಲ್ಲಿನ ಎಲ್ಲಾ ಟಿಕೆಟ್‌ಗಳಲ್ಲಿ ಪ್ರಯಾಣದ ದಿನಾಂಕದ ಬದಲಾವಣೆಯಿಂದ ವಿನಾಯಿತಿ ಅನ್ವಯವಾಗುತ್ತದೆ.

ಇದಲ್ಲದೆ, ಅವರು 14 ದಿನಗಳು ಅಥವಾ ಹೆಚ್ಚಿನ ಮುಂಗಡ ಬುಕಿಂಗ್‌ನಲ್ಲಿ 10 ಪ್ರತಿಶತದಷ್ಟು ರಿಯಾಯಿತಿ ನೀಡುತ್ತಿದ್ದಾರೆ. ಇದಕ್ಕಾಗಿ ಗ್ರಾಹಕರು "FLYNOW 10" ಎಂಬ ಪ್ರೋಮೋ ಕೋಡ್ ಅನ್ನು ಬಳಸಬೇಕಾಗುತ್ತದೆ. ಕರೋನಾ ವೈರಸ್ 'Covid-19' ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಏರ್ ಏಷ್ಯಾ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗರ್ಗ್ ಹೇಳಿದ್ದಾರೆ.

ಏತನ್ಮಧ್ಯೆ, ಏರ್‌ಲೈನ್ಸ್ ಗೋಏರ್ ಏಪ್ರಿಲ್ 15 ರಿಂದ ದೇಶೀಯ ವಿಮಾನಗಳಿಗೆ ಟಿಕೆಟ್ ಕಾಯ್ದಿರಿಸಲು ಪ್ರಾರಂಭಿಸುವುದಾಗಿ ಘೋಷಿಸಿದೆ. ಏಪ್ರಿಲ್ 14 ರಂದು 21 ದಿನಗಳ ಲಾಕ್‌ಡೌನ್ ಮುಕ್ತಾಯಗೊಂಡ ನಂತರ ಸರ್ಕಾರವು ದೇಶೀಯ ಮತ್ತು ವಿದೇಶಿ ವಿಮಾನಯಾನವನ್ನು ಹಂತಹಂತವಾಗಿ ಪ್ರಾರಂಭಿಸಲಿದೆ  ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. 

"ಗೋ ಏರ್ 15 ಏಪ್ರಿಲ್ 2020 ರಿಂದ ದೇಶೀಯ ವಿಮಾನಗಳಿಗಾಗಿ ಕಾಯ್ದಿರಿಸಲಾಗುತ್ತಿದೆ ಮತ್ತು 1 ಮೇ 2020 ರಿಂದ ಅಂತರರಾಷ್ಟ್ರೀಯ ವಿಮಾನಗಳು ಕಾಯ್ದಿರಿಸಲಾಗುವುದು"ಎಂದು ಗೋ ಏರ್ ವಕ್ತಾರರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

Trending News