ಡಾಟಾ ಸೋರಿಕೆ ಮಾಹಿತಿ ನೀಡುವಂತೆ ಫೇಸ್ಬುಕ್'ಗೆ ಸರ್ಕಾರ ನೋಟಿಸ್

ಫೇಸ್ಬುಕ್​ ಖಾತೆದಾರರ ಡಾಟಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಲ್ಲಾ ಮಾಹಿತಿಗಳನ್ನೂ ಒದಗಿಸುವಂತೆ ಕೇಂದ್ರ ಸರ್ಕಾರ ಈಗ ಫೇಸ್ಬುಕ್​ ಸಂಸ್ಥೆಗೆ ನೋಟಿಸ್​ ಜಾರಿ ಮಾಡಿದೆ.

Last Updated : Mar 28, 2018, 09:23 PM IST
ಡಾಟಾ ಸೋರಿಕೆ ಮಾಹಿತಿ ನೀಡುವಂತೆ ಫೇಸ್ಬುಕ್'ಗೆ ಸರ್ಕಾರ ನೋಟಿಸ್ title=

ನವದೆಹಲಿ : ಫೇಸ್ಬುಕ್​ ಖಾತೆದಾರರ ಡಾಟಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಲ್ಲಾ ಮಾಹಿತಿಗಳನ್ನೂ ಒದಗಿಸುವಂತೆ ಕೇಂದ್ರ ಸರ್ಕಾರ ಈಗ ಫೇಸ್ಬುಕ್​ ಸಂಸ್ಥೆಗೆ ನೋಟಿಸ್​ ಜಾರಿ ಮಾಡಿದೆ.

ಇಂಗ್ಲೆಂಡ್​ ಮೂಲದ ಕೇಂಬ್ರಿಡ್ಜ್​ ಅನಾಲಿಟಿಕಾ ಸಂಸ್ಥೆ ಹಲವು ದೇಶಗಳಲ್ಲಿ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಫೇಸ್ಬುಕ್ ಬಳಕೆದಾರರ ಮಾಹಿತಿ ಬಳಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವಾಲಯ ಇಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್'ಗೆ ನೋಟಿಸ್ ನೀಡಿದೆ. 

ಭಾರತೀಯ ಮತದಾರರ ವೈಯಕ್ತಿಕ ಮಾಹಿತಿಗಳು ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ? ಈ ಒಂದು ಮಾಹಿತಿ ದುರ್ಬಳಕೆ ತಡೆಯಲು ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ? ಬಳಕೆದಾರರ ಮಾಹಿತಿ ರಕ್ಷಣೆಗಾಗಿ ಯಾವ ಕ್ರಮಗಳನ್ನು ಫೇಸ್​ಬುಕ್​ ಕೈಗೊಂಡಿದೆ? ಎಂಬುದನ್ನು ಸೇರಿ ಒಟ್ಟು 5 ಪ್ರಶ್ನೆಗಳನ್ನು ಭಾರತ ಸರ್ಕಾರ ಫೇಸ್​ಬುಕ್​ಗೆ ಕೇಳಿದೆ. ಅಲ್ಲದೇ, ಈ ನೋಟಿಸ್'ಗೆ ಏಪ್ರಿಲ್ 7ರೊಳಗೆ ಉತ್ತರಿಸುವಂತೆ ಸರ್ಕಾರ ಸೂಚಿಸಿದೆ. 

Trending News