ನವದೆಹಲಿ: ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಸ್ಪೀಕರ್ ಅನುಮತಿಯಿಲ್ಲದೆ ದಲಿತ ವ್ಯಕ್ತಿಯ ಹತ್ಯೆಯ ವಿಷಯವನ್ನು ಎತ್ತಿದ ನಂತರ ಅವರನ್ನು ಅಶಿಸ್ತಿನ ಕಾರಣವೊಡ್ಡಿ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.
ಈ ವಿಷಯದ ಬಗ್ಗೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರ ಆದೇಶದ ಮೇರೆಗೆ ಅವರನ್ನು ಸದನದಿಂದ ಹೊರಹಾಕಲಾಯಿತು.ಗುರುವಾರವೂ ಇದೇ ಕಾರಣಕ್ಕಾಗಿ ಮೇವಾನಿಯನ್ನು ವಿಧಾನಸಭೆಯಿಂದ ಹೊರಹಾಕಲಾಗಿತ್ತು.ಪ್ರಶ್ನೋತ್ತರ ವೇಳೆ ಮುಗಿದ ಕೂಡಲೇ, ವಡ್ಗಮ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೇವಾನಿ (Jignesh Mevani) ಇದ್ದಕ್ಕಿದ್ದಂತೆ ದಲಿತ ವ್ಯಕ್ತಿ ಹತ್ಯೆಯಾಗಿರುವ ಪೋಸ್ಟರ್ ನ್ನು ತೋರಿಸಿದರು.
ಇದನ್ನೂ ಓದಿ: ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ವಿರುದ್ಧ ಎಫ್ಐಆರ್
ಮೇವಾನಿಯ ಮೈಕ್ ಆಫ್ ಆಗಿದ್ದರಿಂದ, ಅವರು ಕೂಗಲು ಪ್ರಾರಂಭಿಸಿದರು ಮತ್ತು ರಾಜ್ಯದ ಬಿಜೆಪಿ ಸರ್ಕಾರ ಇನ್ನೂ ಪಿಎಸ್ಐ ಅನ್ನು ಏಕೆ ಬಂಧಿಸಿಲ್ಲ ಎಂದು ಕೇಳಿದರು. ಗೃಹ ಸಚಿವ ಪ್ರದೀಪ್ಸಿಂಗ್ ಜಡೇಜಾ ಪಿಎಸ್‌ಐಗೆ ಸಂಬಂಧಿಸಿದ್ದಾರೆಯೇ ಎಂದು ಸ್ಪಷ್ಟನೆ ನೀಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭಲ್ಲಿ ಸ್ಪೀಕರ್ ಅವರು ಮೆವಾನಿ ಅವರಿಗೆ ಅಶಿಸ್ತಿನಿಂದ ವರ್ತಿಸದಂತೆ ಕೇಳಿಕೊಂಡರು.ಈ ವಿಚಾರವನ್ನು ಸದನದಲ್ಲಿ ಎತ್ತಲು ಸ್ಪೀಕರ್ ರಿಂದ ಅನುಮತಿ ಪಡೆಯಬೇಕು ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.