ಹರ್ಯಾಣ ಚುನಾವಣೆ: ಬಿಜೆಪಿಯಿಂದ ಕುಸ್ತಿಪಟು ಬಬಿತಾ ಫೋಗತ್, ಯೋಗೇಶ್ವರ್ ದತ್ ಕಣಕ್ಕೆ

ಹರ್ಯಾಣ ವಿಧಾನಸಭೆ ಕ್ರೀಡಾ ತಾರೆಗಳಾಗಿರುವ ಬಬಿತಾ ಫೋಗತ್ ಮತ್ತು ಯೋಗೇಶ್ವರ ದತ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈಗ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಈ ಇಬ್ಬರು ಕುಸ್ತಿ ಪಟುಗಳಿಗೆ ಟಿಕೆಟ್ ದೊರೆತಿದೆ.

Last Updated : Sep 30, 2019, 06:48 PM IST
 ಹರ್ಯಾಣ ಚುನಾವಣೆ: ಬಿಜೆಪಿಯಿಂದ ಕುಸ್ತಿಪಟು ಬಬಿತಾ ಫೋಗತ್, ಯೋಗೇಶ್ವರ್ ದತ್ ಕಣಕ್ಕೆ    title=

ನವದೆಹಲಿ: ಹರ್ಯಾಣ ವಿಧಾನಸಭೆ ಕ್ರೀಡಾ ತಾರೆಗಳಾಗಿರುವ ಬಬಿತಾ ಫೋಗತ್ ಮತ್ತು ಯೋಗೇಶ್ವರ ದತ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈಗ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಈ ಇಬ್ಬರು ಕುಸ್ತಿ ಪಟುಗಳಿಗೆ ಟಿಕೆಟ್ ದೊರೆತಿದೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಮುಖ್ಯಸ್ಥ ಅಮಿತ್ ಶಾ ಮತ್ತು ಹಿರಿಯ ಮುಖಂಡರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೂರು ಗಂಟೆಗಳ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಇದಾದ ಒಂದು ದಿನದ ನಂತರ ಈಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಮಂತ್ರಿಗಳಾದ ಬಾದ್‌ಶಾಹಪುರದ ರಾವ್ ನರ್ಬೀರ್ ಸಿಂಗ್ ಮತ್ತು ಫರಿದಾಬಾದ್‌ನ ವಿಪುಲ್ ಗೋಯಲ್ ಅವರಿಗೆ ಟಿಕೆಟ್ ಲಭಿಸಿಲ್ಲ ಎನ್ನಲಾಗಿದೆ. 

2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಮತ್ತು ಕಾಂಗ್ರೆಸ್ 15 ರಲ್ಲಿ ಜಯಗಳಿಸಿತು. ಭಾರತೀಯ ರಾಷ್ಟ್ರೀಯ ಲೋಕ ದಳ (ಐಎನ್‌ಎಲ್‌ಡಿ) 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಉಳಿದ ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರರು ಗೆದ್ದಿದ್ದರು.

ಮಾಜಿ ಕೇಂದ್ರ ಸಚಿವ ಮತ್ತು ಜಾಟ್ ನಾಯಕ ಬಿರೇಂದರ್ ಸಿಂಗ್ ಅವರ ಪತ್ನಿ ಉಚಾನಾ ಕಲನ್ ಅವರು 2014 ರಲ್ಲಿ ಗೆದ್ದ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ.ಬಿಜೆಪಿಯ ಮೊದಲ ಪಟ್ಟಿಯಲ್ಲಿ ಒಂಬತ್ತು ಮಹಿಳೆಯರು ಮತ್ತು ಇಬ್ಬರು ಮುಸ್ಲಿಮರಿದ್ದಾರೆ.

Trending News