close

News WrapGet Handpicked Stories from our editors directly to your mailbox

ಆರೆಸೆಸ್ಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಚ್‌ಸಿಎಲ್‌ ಸಂಸ್ಥಾಪಕ ಶಿವ್ ನಾಡರ್

ಅಕ್ಟೋಬರ್ 8 ರಂದು ನಾಗ್ಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿರುವ ಈ ವರ್ಷದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಬಹುರಾಷ್ಟ್ರೀಯ ಐಟಿ ಕಂಪನಿ ಎಚ್‌ಸಿಎಲ್‌ ಸಂಸ್ಥಾಪಕ-ಅಧ್ಯಕ್ಷ ಶಿವ್ ನಾಡರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಆರ್‌ಎಸ್‌ಎಸ್ ನಾಗ್ಪುರ ‘ಮಹಾನಗರ ಸಂಚಲಕ್’ ರಾಜೇಶ್ ಲೋಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Updated: Sep 22, 2019 , 07:59 PM IST
ಆರೆಸೆಸ್ಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಚ್‌ಸಿಎಲ್‌ ಸಂಸ್ಥಾಪಕ ಶಿವ್ ನಾಡರ್
file photo

ನವದೆಹಲಿ:  ಅಕ್ಟೋಬರ್ 8 ರಂದು ನಾಗ್ಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿರುವ ಈ ವರ್ಷದ ವಿಜಯ ದಶಮಿ ಕಾರ್ಯಕ್ರಮದಲ್ಲಿ ಬಹುರಾಷ್ಟ್ರೀಯ ಐಟಿ ಕಂಪನಿ ಎಚ್‌ಸಿಎಲ್‌ ಸಂಸ್ಥಾಪಕ-ಅಧ್ಯಕ್ಷ ಶಿವ್ ನಾಡರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಆರ್‌ಎಸ್‌ಎಸ್ ನಾಗ್ಪುರ ‘ಮಹಾನಗರ ಸಂಚಲಕ್’ ರಾಜೇಶ್ ಲೋಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ಹಿಂದೆ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಕ್ಕಳ ಹಕ್ಕುಗಳ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಮತ್ತು ಮಾಜಿ ದಲಿತ ಧಾರ್ಮಿಕ ಮುಖಂಡ ನಿರ್ಮಲ್ ದಾಸ್ ಮಹಾರಾಜ್ ಮುಂತಾದ ವ್ಯಕ್ತಿಗಳು ಭಾಗವಹಿಸಿದ್ದರು. ಪ್ರತಿವರ್ಷ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣಗಳನ್ನು ಒಳಗೊಂಡಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳ ಭಾಷಣವನ್ನು ರಾಜಕೀಯ ತಜ್ಞರು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ದಸರಾ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮ ಮಹತ್ವವನ್ನು ಪಡೆದಿದೆ.

1925 ರಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ವಿಜಯದಶಮಿ ದಿನದಂದು ಸಂಘಟನೆಯನ್ನು ಸ್ಥಾಪಿಸಿದಾಗಿನಿಂದ ಇದನ್ನು ಸಂಘಟನೆಯ ಸಂಸ್ಥಾಪನಾ ದಿನವೆಂದು ಆಚರಿಸಲಾಗುತ್ತದೆ. ಈ ಹಿಂದೆ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರ ಗಣ್ಯರೆಂದರೆ ಡಿಆರ್ಡಿಓ ಮಾಜಿ ಮಹಾನಿರ್ದೇಶಕ ವಿಜಯ್ ಕುಮಾರ್ ಸರಸ್ವತ್, ದಾದಾ ಜೆ.ಪಿ.ವಾಸ್ವಾನಿ, ಆಧ್ಯಾತ್ಮಿಕ ಗುರು ಮತ್ತು ಸಾಧು ವಾಸ್ವಾನಿ ಮಿಷನ್ ಮುಖ್ಯಸ್ಥ ಮತ್ತು ಮಾಜಿ ಅಧಿಕಾರಿ ಸತ್ಯ ಪ್ರಕಾಶ್ ರೈ ಸೇರಿದ್ದಾರೆ.