ರೈಲ್ವೆಯಲ್ಲಿ ಹೇಗೆ ಎಮರ್ಜೆನ್ಸಿ ಕೋಟಾದಡಿಯಲ್ಲಿ ಸೀಟ್ ಗಳಿಗೆ ಪ್ರಾಸಶ್ತ್ಯ ನೀಡಲಾಗುತ್ತದೆ?

    

Last Updated : Apr 11, 2018, 08:44 PM IST
ರೈಲ್ವೆಯಲ್ಲಿ ಹೇಗೆ ಎಮರ್ಜೆನ್ಸಿ ಕೋಟಾದಡಿಯಲ್ಲಿ ಸೀಟ್ ಗಳಿಗೆ ಪ್ರಾಸಶ್ತ್ಯ ನೀಡಲಾಗುತ್ತದೆ?  title=

ನವದೆಹಲಿ: ಭಾರತೀಯ ರೈಲ್ವೆಯಲ್ಲಿ  ವಿವಿಧ ರೈಲುಗಳಲ್ಲಿ ತುರ್ತು ಕೋಟಾದಲ್ಲಿ ಸೀಮಿತ ಸಂಖ್ಯೆಯ ಸೀಟ್ ಗಳನ್ನು ಮೀಸಲಿರಿಸಿದೆ. ಆ ತುರ್ತು ಕೋಟಾಗಳನ್ನು ಉನ್ನತ ಸ್ಥಾನಗಳನ್ನು ಹೊಂದಿರುವ ಅಧಿಕಾರಿಗಳಿಗೆ ವಿವಿಧ ಕ್ಲಾಸ್ ಮತ್ತು ಟ್ರೈನ್ ಗಳಲ್ಲಿ  ಮಿಸಲಿಡಲಾಗಿರುತ್ತದೆ ಎಂದು ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

ರೇಲ್ವೆಯು ತುರ್ತು ಪ್ರಯಾಣವನ್ನು ಪರಿಗಣಿಸಿ "ಕೇಂದ್ರ ಸರ್ಕಾರದ ಮಂತ್ರಿಗಳು, ಗೌರವ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು / ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಸಂಸತ್ತಿನ ಸದಸ್ಯರುಗಳಿಗೆ  ತುರ್ತು ಪ್ರಯಾಣದ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ, ವೇಟಿಂಗ್ ಲಿಸ್ಟ್ , ಸೀಮಿತ ಸಂಖ್ಯೆಯ ಬರ್ತ್ಗಳನ್ನು ವಿವಿಧ ರೈಲುಗಳಲ್ಲಿ ಮತ್ತು ವಿವಿಧ ಕ್ಲಾಸ್ ಗಳಲ್ಲಿ ತುರ್ತು ಕೋಟಾ ಎಂದು ನಿಗದಿಪಡಿಸಲಾಗಿದೆ " ಎಂದು ರಾಜ್ಯ ಸಭೆಯಲ್ಲಿ ತಿಳಿಸಲಾಗಿದೆ 

             ರೈಲು ತುರ್ತು ಪ್ರಯಾಣದ  ಕೋಟಾದ ಅಡಿಯಲ್ಲಿ ಹೇಗೆ ಆಧ್ಯತೆ ನೀಡಲಾಗುತ್ತದೆ ಎಂಬುದು ಇಲ್ಲಿದೆ.

  • ಈ ಕೋಟಾವನ್ನು ಆದ್ಯತೆಗೆ ಅನುಗುಣವಾಗಿ ಬಿಡುಗಡೆ ಮಾಡುತ್ತಾರೆ.ಇದನ್ನು ಈ ಹಿಂದಿನಿಂದಲೂ  ಅನುಸರಿಸುತ್ತಾ ಬರಲಾಗಿದೆ.
  •  ಸೀಟ್ ಗಳ  ಹಂಚಿಕೆಯ ಸಮಯದಲ್ಲಿ, ಎಚ್ಆರ್ಒ ಹೊಂದಿರುವವರು  ಮತ್ತು  ಸಂಸತ್ತಿನ ಸದಸ್ಯರ ಪ್ರಯಾಣಕ್ಕಾಗಿ ತುರ್ತು ಕೋಟಾವನ್ನು ಮೊದಲ ಪ್ರಾಶಸ್ತ್ಯವಾಗಿ  ನೀಡಲಾಗುತ್ತದೆ.
  •  ಅದರ ನಂತರ, ವಿವಿಧ ವಲಯಗಳಿಂದ  ಸ್ವೀಕರಿಸಲ್ಪಟ್ಟ ಇತರ ವಿನಂತಿಗಳನ್ನು ಪರಿಗಣಿಸಲಾಗುತ್ತದೆ.ಅದರಲ್ಲಿ ಕೋಟಾವು ಪ್ರಯಾಣಿಕರ ಸ್ಥಿತಿ, ಸರ್ಕಾರಿ ಕರ್ತವ್ಯದ ಪ್ರಯಾಣ, ತುರ್ತುಸ್ಥಿತಿಯ ಸ್ವಭಾವ, ಕುಟುಂಬದಲ್ಲಿ ವಿಮೋಚನೆ, ಅನಾರೋಗ್ಯ, ಕೆಲಸದ ಸಂದರ್ಶನ ಇತ್ಯಾದಿ ಮುಂತಾದ ಅಂಶಗಳನ್ನು ಪರಿಗಣಿಸುತ್ತದೆ.
  •  ತುರ್ತು ಕೋಟಾ ಪ್ರಮುಖವಾಗಿ  ವಲಯ ಮತ್ತು / ಮುಖ್ಯ ವಿಭಾಗೀಯ ಮತ್ತು ಕೆಲವು ಪ್ರಮುಖ ಅಲ್ಲದ  ರೈಲ್ವೆ ಕೇಂದ್ರಗಳಲ್ಲಿರುತ್ತವೆ 
  • ಈ ವಲಯಗಳು ಮುಖ್ಯವಾಗಿ  ಗಝೆಟೆಡ್ ಅಧಿಕಾರಿಗಳ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತವೆ.

Trending News