ಮುಂಬೈ: ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೋನಿಯಾ ಗಾಂಧಿ 2004 ರಲ್ಲಿ ಮನಹೋಹನ್ ಸಿಂಗ್ ಪ್ರಧಾನಿ ಮಂತ್ರಿ ಹುದ್ದೆಗೆ ನನಗಿಂತ ಹೆಚ್ಚು ಅವರು ಸೂಕ್ತರಾಗಿದ್ದರು ಎಂದು ತಿಳಿಸಿದರು.
ಮುಂಬೈದಲ್ಲಿ ನಡೆದ 2018ನೇ ಸಾಲಿನ ಇಂಡಿಯಾ ಟುಡೇ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ನೆಹರು-ಗಾಂಧಿ ಪರಿವಾರದ ಹೊರತಾಗಿ ಕಾಂಗ್ರೆಸ್ ವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾತಾಂತ್ರಿಕವಾಗಿಯೇ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ, ವಂಶವಾಹಿ ರಾಜಕಾರಣ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಅದು ಅದು ಅಮೆರಿಕಾದಲ್ಲಿಯೂ ಕೂಡಾ ಅಸ್ತಿತ್ವದಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ತಾವು ಪ್ರಧಾನಮಂತ್ರಿಯಾಗಲಿಲ್ಲವೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಮನಮೋಹನ್ ಸಿಂಗ್ ನನಗಿಂತಲೂ ಹೆಚ್ಚು ಪ್ರಶಸ್ತವಾದ ವ್ಯಕ್ತಿಯಾಗಿದ್ದರಿಂದ ಅವರಿಗೆ ಹೆಚ್ಚು ಮಾನ್ಯತೆ ನೀಡಲಾಯಿತು ಎಂದು ಅವರು ತಿಳಿಸಿದರು.