viral video : ಮದುವೆ ಶಾಸ್ತ್ರ ನಡೆಯುತ್ತಿರುವಾಗ ಇದ್ದಕ್ಕಿದಂತೆ ವರ ಹೀಗೆ ಮಾಡಿದ್ದೇಕೆ ?

ಈ ದಿನಗಳಲ್ಲಿ ಮದುವೆಗಳ ಹಲವು ವಿಡಿಯೋಗಳು  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅವುಗಳಲ್ಲಿ ಒಂದು ವಿಡಿಯೋ  ಇಲ್ಲಿದೆ.

Written by - Ranjitha R K | Last Updated : Aug 2, 2021, 09:09 PM IST
  • ಮದುವೆ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್
  • ವರ ಮಂಟಪದಲ್ಲಿ ಈ ಕೆಲಸ ಮಾಡಿರುವ ವಿಡಿಯೋ ವೈರಲ್
  • ಏಳೂವರೆ ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್
viral video : ಮದುವೆ ಶಾಸ್ತ್ರ ನಡೆಯುತ್ತಿರುವಾಗ ಇದ್ದಕ್ಕಿದಂತೆ ವರ ಹೀಗೆ ಮಾಡಿದ್ದೇಕೆ ?  title=
ಮದುವೆ ಹಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (photo instagram)

ನವದೆಹಲಿ : ಮದುವೆ ಸೀಸನ್ ನಲ್ಲಿ, ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗಿವೆ. ಈ ವಿಡಿಯೋಗಳನ್ನು ನೋಡಿದ ನಂತರ ಹೀಗೂ ಇರುತ್ತಾ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಕೆಲವೊಂದು ಶಾಸ್ತ್ರಗಳ ಬಗ್ಗೆ ತಿಳಿದಿರುವುದಿಲ್ಲ. ಇನ್ನು ಕೆಲವೊಮ್ಮೆ ಶಾಸ್ತ್ರ ನಡೆಯುವ ಸಂದರ್ಭ, ಅರ್ಚಕರು ಶಾಸ್ತ್ರಗಳನ್ನು ವಿವರಿಸುವ ವೇಳೆಯು ಇದರ ಬಗ್ಗೆ ಅರಿವಿಲ್ಲದ ವಧು- ವರರು ನಗಲು ಶುರು ಮಾಡುತ್ತಾರೆ. ಹೀಗಾಗುವಾಗ ಯಾರಾದರು ವಿಡಿಯೋ ಮಾಡುತ್ತಿದ್ದರೆ, ವೈರಲ್ ಆಗಲು ಶುರು ಆಗುತ್ತದೆ.  

 ವಧುವನ್ನು ಮಂಟಪದಲ್ಲೇ ಎತ್ತಿದ ವರ : 
ಈ ದಿನಗಳಲ್ಲಿ ಮದುವೆಗಳ ಹಲವು ವಿಡಿಯೋಗಳು (Marriage video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅವುಗಳಲ್ಲಿ ಒಂದು ವಿಡಿಯೋ (Viral video) ಇಲ್ಲಿದೆ. ಇಲ್ಲಿ ಶಾಸ್ತ್ರ ನಡೆಯುತ್ತಿದ್ದಂತೆ ವರ ಇದ್ದಕ್ಕಿದ್ದಂತೆಯೇ, ವಧುವನ್ನು ಎತ್ತಿ, ವಧುವಿನ ಸ್ಥಳವನ್ನು ಬದಲಾಯಿಸುತ್ತಾನೆ. ಆದರೆ ವರ ಇದ್ದಕ್ಕಿದ್ದಂತೆ ಯಾಕೆ ಹೀಗೆ ಮಾಡಿದ ಎನ್ನುವುದು ಮಾತ್ರ ಅಲ್ಲಿದ್ದ ಯಾರಿಗೂ ತಿಳಿಯುವುದಿಲ್ಲ. ವರ ಮಾಡಿದ ಕೆಲಸ ನೋಡಿ ಕೆಲವರು ಆಶ್ಚರ್ಯ ಪಟ್ಟರೆ, ಇನ್ನು ಕೆಲವರಿಗೆ ನಗು ತಡೆಯೋದಕ್ಕೆ ಆಗಲೇ ಇಲ್ಲ. ಆದರೆ ಇದು ವಿವಾಹ ಶಾಸ್ತ್ರದ ಒಂದು ಭಾಗ ಎಂದು ಹೇಳಲಾಗುತ್ತಿದೆ.  

 
 
 
 

 
 
 
 
 
 
 
 
 
 
 

A post shared by Raju Lakhchaura (@raju_lakhchaura)

 

ಇದನ್ನೂ ಓದಿ : ಮೊದಲ ರಾತ್ರಿಯಂದೇ ಟೆರೇಸ್‌ನಿಂದ ಜಿಗಿದು ಓಡಿಹೋದ ನವವಧು..!: ಕಾರಣ ಏನು ಗೊತ್ತಾ?

ಸೇರಿದ್ದವರ ನಗುವಿಗೆ ಪಾರವೇ ಇರಲಿಲ್ಲ :
ವೈರಲ್ ಆಗಿರುವ ವಿಡಿಯೋದಲ್ಲಿ, ವರನು ತನ್ನ ಎರಡೂ ಕೈಗಳಿಂದ ಬಲಭಾಗದಲ್ಲಿ ಕುಳಿತಿದ್ದ ವಧುವನ್ನು (Bride) ಎತ್ತಿ ಎಡಭಾಗದಲ್ಲಿ ಕೂರಿಸುವುದನ್ನು  ಕಾಣಬಹುದು. ಈ ಸಮಯದಲ್ಲಿ ಅಲ್ಲಿದ್ದ ಎಲ್ಲರೂ ನಗಲು ಪ್ರಾರಂಭಿಸುತ್ತಾರೆ. ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಶೇರ್ ಮಾಡಲಾಗಿದೆ.   ಏಳೂವರೆ ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ Viral Video : ಮದುವೆ ಮಂಟಪದಲ್ಲಿ ತೂಕಡಿಸುತ್ತಿದ್ದ ವಧು ; ಹಿಂದೆ ಕುಳಿತಿದ್ದ ವ್ಯಕ್ತಿ ಮಾಡಿದ ಕೆಲಸ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News