Indian Cities In Danger: ಮುಂದಿನ 30 ವರ್ಷಗಳಲ್ಲಿ 3 ಅಡಿ ಸಮುದ್ರದ ನೀರಿನಲ್ಲಿ ಮುಳುಗಲಿವೆ ಭಾರತದ ಈ ನಗರಗಳು: NASA ವರದಿ

Indian Cities In Danger - ಮುಂದಿನ 30 ವರ್ಷಗಳಲ್ಲಿ ಸಮುದ್ರ ಮಟ್ಟ ಏರಿಕೆಯಾಗಲಿದೆ ಎಂದು ನಾಸಾ ತನ್ನ ಒಂದು ವರದಿಯಲ್ಲಿ ಹೇಳಿದೆ. ಈ ಕಾರಣದಿಂದಾಗಿ, ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಮಸ್ಯೆಗಳು ಹೆಚ್ಚಾಗಬಹುದು ಎನ್ನಲಾಗಿದೆ.

Written by - Nitin Tabib | Last Updated : Aug 18, 2021, 12:06 PM IST
  • ಮುಂದಿನ 30 ವರ್ಷಗಳಲ್ಲಿ ಸಮುದ್ರ ಮಟ್ಟ ಏರಿಕೆಯಾಗಲಿದೆ.
  • ನಾಸಾ ತನ್ನ ಒಂದು ವರದಿಯಲ್ಲಿ ಈ ಅಂಶ ಬಹಿರಂಗಪಡಿಸಿದೆ.
  • ಈ ಕಾರಣದಿಂದಾಗಿ, ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಮಸ್ಯೆಗಳು ಹೆಚ್ಚಾಗಬಹುದು ಎನ್ನಲಾಗಿದೆ.
Indian Cities In Danger: ಮುಂದಿನ 30 ವರ್ಷಗಳಲ್ಲಿ 3 ಅಡಿ ಸಮುದ್ರದ ನೀರಿನಲ್ಲಿ ಮುಳುಗಲಿವೆ ಭಾರತದ ಈ ನಗರಗಳು: NASA ವರದಿ title=
Indian Cities In Danger:

ನವದೆಹಲಿ: Indian Cities In Danger - ಸಮುದ್ರದ ತೀರದಲ್ಲಿರುವ ನಗರಗಳ ಪಾಲಿಗೆ ಅಹಿತಕರ ಸುದ್ದಿಯೊಂದು ಪ್ರಕಟವಾಗಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ (US Space Research Organization) ನಾಸಾ  (NASA) ಮುಂದಿನ ಮೂವತ್ತು ವರ್ಷಗಳಲ್ಲಿ ಸಮುದ್ರ ಮಟ್ಟವು ಒಂದು ಅಡಿಯಿಂದ ಮೂರು ಅಡಿಗಳಿಗೆ ಏರಬಹುದು ಎಂದು ಹೇಳಿದೆ. ಇದು ಸಂಭವಿಸಿದಲ್ಲಿ, ಸಮುದ್ರ ತೀರದಲ್ಲಿರುವ ನಗರಗಳಿಗೆ  ತೊಂದರೆ ಉಂಟಾಗಬಹುದು. ಸಮುದ್ರ ಮಟ್ಟ ಏರಿಕೆಯಿಂದಾಗಿ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ವರದಿ ಹೇಳಿದೆ.

ಸಮುದ್ರ ಮಟ್ಟ ಏರಿಕೆಯಿಂದಾಗಿ (Sea Level Rise) ಮುಖ್ಯವಾಗಿ ಕೊಚ್ಚಿ, ಮೊರ್ಮುಗಾವೊ, ಮುಂಬೈ, ಮಂಗಳೂರು, ಚೆನ್ನೈ, ವಿಶಾಖಪಟ್ಟಣಂ ಮತ್ತು ಪ್ಯಾರಾದೀಪ್ ಸೇರಿದಂತೆ 12 ನಗರಗಳ ಕರಾವಳಿ ಪ್ರದೇಶಗಳ ಮೇಲೆ ಪ್ರಭಾವವನ್ನು ಕಾಣಬಹುದಾಗಿದೆ.

ತೀವ್ರ ಶಾಖದಿಂದಾಗಿ ಹಿಮನದಿಗಳು ಕರಗಿದಾಗ ಮಾತ್ರ ಸಮುದ್ರ ಮಟ್ಟ ಏರುತ್ತದೆ ಎಂದು ನಾಸಾ ತನ್ನ ವರದಿಯಲ್ಲಿ ಹೇಳಿದೆ. ಮುಂದಿನ ಮೂವತ್ತು ವರ್ಷಗಳಲ್ಲಿ ತಾಪಮಾನವೂ ಹೆಚ್ಚಾಗಲಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ತಾಪಮಾನ ಏರಿಕೆಗೆ ಸಂಬಂಧಿಸಿದಂತೆ, ನಾಸಾ ಹೇಳಿರುವ ಪ್ರಕಾರ (NASA Report), ವಿಶ್ವದ ಮಾಲಿನ್ಯವನ್ನು ಕಡಿಮೆ ಮಾಡಲು ಅಥವಾ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಹಲವು ರೀತಿಯ ಅಪಾಯಗಳು ಎದುರಾಗಲಿವೆ ಎನ್ನಲಾಗಿದೆ.

ಇದನ್ನೂ ಓದಿ-Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ?

ನಾಸಾ ತನ್ನ ಪ್ರೊಜೆಕ್ಷನ್ ಟೂಲ್ ನಲ್ಲಿ (Nasa Projection Tool) ವಿಶ್ವದ ಭೂಪಟವನ್ನು (World Map) ತಯಾರಿಸಿದೆ ಮತ್ತು ಪ್ರಪಂಚದ ಯಾವ ಪ್ರದೇಶದಲ್ಲಿ ಯಾವ ವರ್ಷದಲ್ಲಿ ಸಮುದ್ರ ಮಟ್ಟ ಏರಿಕೆಯಾಗಲಿದೆ ಎಂಬುದನ್ನು ತೋರಿಸಿದೆ. ವಿಶ್ವದಾದ್ಯಂತ ಮುಂದಿನ ಕೆಲವು ದಶಕಗಳಲ್ಲಿ ಏರುತ್ತಿರುವ ನೀರಿನ ಮಟ್ಟವನ್ನು ಅಳೆಯಲು ನಾಸಾ ಹೊಸ ಸಾಧನವನ್ನು ಸಿದ್ಧಪಡಿಸಿದ್ದು, ಇದೆ  ಮೊದಲ ಬಾರಿಗೆ ಅದು  ಕಂಡುಬಂದಿದೆ. ಈ ಉಪಕರಣದ ಮೂಲಕ, ಕರಾವಳಿ ಪ್ರದೇಶಗಳನ್ನು ಹೊಂದಿರುವ ದೇಶಗಳ ಸಮುದ್ರ ಮಟ್ಟವನ್ನು ಅಳೆಯಬಹುದು.

ಇದನ್ನೂ ಓದಿ-NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA

ಐಪಿಸಿಸಿ (IPCC Report) ಪ್ರತಿ 5 ರಿಂದ 7 ವರ್ಷಗಳಿಗೊಮ್ಮೆ ವಿಶ್ವದ ಪರಿಸರದ ಸ್ಥಿತಿಯ ಕುರಿತು ವರದಿಯನ್ನು ನೀಡುತ್ತದೆ. ಈ ವರ್ಷ ಸಂಸ್ಥೆಯು ಪ್ರಸ್ತುತಪಡಿಸಿದ ವರದಿಗಳು ತುಂಬಾ ಆಘಾತಕಾರಿಯಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News