ಉಬರ್ ಹ್ಯಾಕಿಂಗ್ ಸಮಸ್ಯೆ ನಿವಾರಿಸಿದ ಭಾರತೀಯ ಸಂಶೋಧಕನಿಗೆ 4.6 ಲಕ್ಷ ರೂ.ಬಹುಮಾನ

ಜಾಗತಿಕ ಸವಾರಿ ಕಂಪನಿಯಲ್ಲಿ ಖ್ಯಾತಿ ಗಳಿಸಿರುವ ಉಬರ್ ಈಗ ತನ್ನ ಆಪ್ ನಲ್ಲಿನ ದೋಷ ನಿವಾರಿಸಿದ್ದಕ್ಕಾಗಿ ಭಾರತೀಯ ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಎನ್ನುವವರಿಗೆ 4.6 ಲಕ್ಷ ರೂ ಬಹುಮಾನ ನೀಡಿದೆ.

Last Updated : Sep 16, 2019, 02:22 PM IST
ಉಬರ್ ಹ್ಯಾಕಿಂಗ್ ಸಮಸ್ಯೆ ನಿವಾರಿಸಿದ ಭಾರತೀಯ ಸಂಶೋಧಕನಿಗೆ 4.6 ಲಕ್ಷ ರೂ.ಬಹುಮಾನ title=
Photo courtesy: Twitter

ನವದೆಹಲಿ: ಜಾಗತಿಕ ಸವಾರಿ ಕಂಪನಿಯಲ್ಲಿ ಖ್ಯಾತಿ ಗಳಿಸಿರುವ ಉಬರ್ ಈಗ ತನ್ನ ಆಪ್ ನಲ್ಲಿನ ದೋಷ ನಿವಾರಿಸಿದ್ದಕ್ಕಾಗಿ ಭಾರತೀಯ ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಎನ್ನುವವರಿಗೆ 4.6 ಲಕ್ಷ ರೂ ಬಹುಮಾನ ನೀಡಿದೆ.

ಈ ಹಿಂದೆ ಹ್ಯಾಕರ್ ಗಳು ಉಬರ್ ಖಾತೆಗೆ ಖನ್ನ ಹಾಕಬಹುದಿತ್ತು. ಈ ದೋಷವು ಉಬರ್‌ನಲ್ಲಿನ ಖಾತೆ-ಸ್ವಾಧೀನ-ದುರ್ಬಲತೆಯಾಗಿದೆ ಎಂದು ಹ್ಯಾಕಿಂಗ್ ನಲ್ಲಿನ ದೋಷವನ್ನು ಪರಿಹರಿಸಿದ ಆನಂದ್ ಪ್ರಕಾಶ್ ವಿವರಿಸಿದ್ದಾರೆ. ಇದು ಪಾಲುದಾರರು ಮತ್ತು ಉಬರ್ ಈಟ್ಸ್ ಬಳಕೆದಾರರು ಸೇರಿದಂತೆ ಯಾವುದೇ ಬಳಕೆದಾರರ ಉಬರ್ ಖಾತೆಯನ್ನು ಹ್ಯಾಕರ್ ಗಳು ವಶಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ಇಂಕ್ 42 ವರದಿ ಮಾಡಿದೆ.

ಮಾಧ್ಯಮ ವರದಿಯ ಪ್ರಕಾರ ಉಬರ್ ಅಪ್ಲಿಕೇಶನ್‌ನ API ಕಾರ್ಯದಲ್ಲಿ ದೋಷ ಕಂಡುಬಂದಿತ್ತು. ಅದನ್ನು ಕಂಪನಿಯ ಬಗ್ ಬೌಂಟಿಪ್ರೋಗ್ರಾಮ್ ಮೂಲಕ ದೋಷವನ್ನು ತಕ್ಷಣ ಸರಿಪಡಿಸಲಾಗಿದೆ. ಇಂತಹ ದೋಷಗಳ ನಿವಾರಣೆಗಾಗಿ ಭಾರತೀಯ ಸಂಶೋಧಕರು ಸೇರಿದಂತೆ ವಿಶ್ವದಾದ್ಯಂತ 600 ಕ್ಕೂ ಹೆಚ್ಚು ಸಂಶೋಧಕರಿಗೆ 2 ಮಿಲಿಯನ್ ಹಣವನ್ನು ಪಾವತಿಸಲಾಗಿದೆ ಎಂದು ಉಬರ್ ಹೇಳಿದೆ.

Trending News