Different Meals For Pilots: ವಿಮಾನವನ್ನು ಹಾರಿಸಲು ಇಬ್ಬರು ಪೈಲಟ್‌ಗಳಿರುತ್ತಾರೆ. ಇಬ್ಬರು ಪೈಲಟ್‌ಗಳನ್ನು ವಿಮಾನದಲ್ಲಿ ಇರಿಸಲು ಪ್ರಯಾಣಿಕರ ಸುರಕ್ಷತೆಯೇ ದೊಡ್ಡ ಕಾರಣ ಎಂಬುದು ನಿಮಗೆ ಗೊತ್ತಿರಬೇಕು. ಆದರೆ ವಿಮಾನದ ಇಬ್ಬರು ಪೈಲಟ್‌ಗಳಿಗೆ ಯಾವಾಗಲೂ ಪ್ರತ್ಯೇಕ ಮತ್ತು ಬೇರೆ ಬೇರೆ ಆಹಾರವನ್ನು (Pilots And Co Pilots Given Different Food) ನೀಡಲಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಅವರಿಗೆ ಎಂದಿಗೂ ಒಂದೇ ರೀತಿಯ ಆಹಾರವನ್ನು ನೀಡಲಾಗುವುದಿಲ್ಲ. ಇದರ ಹಿಂದಿನ ಕಾರಣ ಕೂಡ ಅಷ್ಟೇ ರೋಚಕವಾಗಿದೆ.
ಇಬ್ಬರು ಪೈಲಟ್‌ಗಳಿಗೂ ಬೇರೆ ಬೇರೆ ಆಹಾರವನ್ನು ನೀಡಲಾಗುತ್ತದೆ (Pilots Amazing Facts)
1984 ರಲ್ಲಿ, ಕಾಂಕಾರ್ಡ್ ಸೂಪರ್ಸಾನಿಕ್ ವಿಮಾನವು ಲಂಡನ್‌ನಿಂದ ನ್ಯೂಯಾರ್ಕ್‌ಗೆ ಹೋಗುತ್ತಿತ್ತು. ಈ ವಿಮಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಈ ವಿಮಾನದಲ್ಲಿ ಒಟ್ಟು 120 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಒಂದೇ ರೀತಿಯ ಆಹಾರವನ್ನು ನೀಡಲಾಗಿತ್ತು. ಆ ಆಹಾರದಲ್ಲಿ ಏನೋ ದೋಷವಿತ್ತು. ಏಕೆಂದರೆ ಎಲ್ಲಾ ಜನರು ಫುಡ್ ಪಾಯಿಸನಿಂಗ್ ಗೆ ಗುರಿಯಾಗಿದ್ದರು. ಇದಾದ ಬಳಿಕ ಜನರೆಲ್ಲರಿಗೂ ವಾಂತಿ, ಜ್ವರ, ಭೇದಿ ಕಾಣಿಸಿಕೊಂಡಿದೆ. ಫುಡ್ ಪಾಯ್ಸನಿಂಗ್ ನಿಂದಾಗಿ ಓರ್ವ ಪ್ರಯಾಣಿಕ ಕೂಡ ಅದರಲ್ಲಿ ಸಾವನ್ನಪ್ಪಿದ್ದ.
Different Food Of Pilot And Co Pilots
ಆ ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳೂ ಕೂಡ ಇದೇ ಕಾರಣದಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಒಂದೇ ವಿಮಾನದ ಪೈಲಟ್ ಮತ್ತು ಸಹ-ಪೈಲಟ್‌ಗೆ ಒಂದೇ ಆಹಾರವನ್ನು ನೀಡಲಾಗುವುದಿಲ್ಲ ಮತ್ತು ಇಬ್ಬರಿಗೂ ವಿಭಿನ್ನ ಆಹಾರವನ್ನು ನೀಡಲಾಗುತ್ತದೆ. ಇದರಿಂದಾಗಿ ಆಹಾರ ವಿಷವಾಗುವ ಸಂಭವವಿದ್ದರೂ ಇಬ್ಬರಲ್ಲಿ ಕನಿಷ್ಠ ಒಬ್ಬ ಪೈಲಟ್ ಸುರಕ್ಷಿತವಾಗಿರಬೇಕು ಮತ್ತು ಅವರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಬಹುದು ಎಂಬುದು ಇದರ ಹಿಂದಿನ ಲಾಜಿಕ್.
ಇದನ್ನೂ ಓದಿ-ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?
ಫುಡ್ ಪಾಯಿಸನಿಂಗ್ ತಪ್ಪಿಸಲು ಈ ರೀತಿ ಮಾಡಲಾಗಿದೆ (Pilots Food Aeroplane Pilots Food)
ಸಾಮಾನ್ಯವಾಗಿ ಪೈಲಟ್‌ಗೆ ಪ್ರಥಮ ದರ್ಜೆ ಆಹಾರವನ್ನು ನೀಡಲಾಗುತ್ತದೆ ಮತ್ತು ಸಹ-ಪೈಲಟ್‌ಗೆ ವ್ಯಾಪಾರ ದರ್ಜೆಯ ಆಹಾರವನ್ನು ನೀಡಲಾಗುತ್ತದೆ. ಅನೇಕ ವಿಮಾನಯಾನ ಸಂಸ್ಥೆಗಳು ಕಾಕ್‌ಪಿಟ್ ಸಿಬ್ಬಂದಿಗೆ ಪ್ರತ್ಯೇಕ ಊಟವನ್ನು ಸಹ ತಯಾರಿಸುತ್ತವೆ. ಈ ವಿಮಾನಯಾನ ಸಂಸ್ಥೆಗಳು ತಮ್ಮ ಆಹಾರವನ್ನು ಪೈಲಟ್ ಮತ್ತು ಸಹ ಪೈಲಟ್‌ಗೆ ಪ್ರತ್ಯೇಕವಾಗಿ ನೀಡುತ್ತವೆ, ಇದು ಪ್ರಯಾಣಿಕರ ಆಹಾರಕ್ಕಿಂತ ವಿಭಿನ್ನವಾಗಿರುತ್ತದೆ. ಈ ಆಹಾರವು ತುಂಬಾ ಸರಳವಾಗಿರುತ್ತದೆ. 2012 ರಲ್ಲಿ, CNN ಕೊರಿಯನ್ ಪೈಲಟ್ ನ ಸಂದರ್ಶನ ನಡೆಸಿತ್ತು. ಇದರಲ್ಲಿ, ಫುಡ್ ಪಾಯಿಸನಿಂಗ್ ನಿಂದ ರಕ್ಷಿಸಲು, ಪೈಲಟ್‌ಗಳಿಗೆ ಪ್ರತ್ಯೇಕ ಆಹಾರವನ್ನು ನೀಡಲಾಗುತ್ತದೆ ಎಂದು ಆ ಪೈಲಟ್ ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ-ಎಲ್ಲಿಂದ ಬಂದ ಸಂತಾ ಕ್ಲಾಸ್? ಕ್ರಿಸ್ಮಸ್ ಟ್ರೀ ಮಹತ್ವವೇನು? ಇಲ್ಲಿದೆ ರೋಚಕ ಕಥೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.