ನವದೆಹಲಿ: ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ನ ಭಾಗವಾಗಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (United Kingdom) ನಡುವೆ 14 ಹೆಚ್ಚುವರಿ ವಿಮಾನಗಳನ್ನು ನಿರ್ವಹಿಸುವುದಾಗಿ ಭಾರತದ ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಭಾನುವಾರ ತಿಳಿಸಿದೆ.
COVID-19 ಸಾಂಕ್ರಾಮಿಕದ ಮಧ್ಯೆ ಯುಕೆನಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಅಡಿಯಲ್ಲಿ ಈ ವಿಮಾನಗಳನ್ನು ನಡೆಸಲಾಗುವುದು. ಜುಲೈ 15 ರಿಂದ 24 ರವರೆಗೆ ವಿಮಾನಗಳು ಕಾರ್ಯನಿರ್ವಹಿಸಲಿವೆ ಎಂದು ಏರ್ ಇಂಡಿಯಾ (Air india) ತಿಳಿಸಿದೆ. ಜುಲೈ 13 ರಂದು ಮಧ್ಯಾಹ್ನ 2 ರಿಂದ ವಿಮಾನಗಳ ಬುಕಿಂಗ್ ತೆರೆಯಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ಯುಕೆ ಮತ್ತು ಭಾರತ ನಡುವೆ ಜುಲೈ 15 ರಿಂದ 24 ರವರೆಗೆ #VBM ಅಡಿಯಲ್ಲಿ 14 ಹೆಚ್ಚುವರಿ ವಿಮಾನಗಳನ್ನು ನಿರ್ವಹಿಸಲಿದೆ. ನಮ್ಮ ವೆಬ್ಸೈಟ್ನಲ್ಲಿ 1400 ಗಂಟೆ ಐಎಸ್ಟಿಯಿಂದ ಜುಲೈ 13 ರಂದು ಬುಕಿಂಗ್ ತೆರೆಯುತ್ತದೆ. ಪ್ರಯಾಣಿಕರು ವಿಮಾನ ನಿಲ್ದಾಣ ಮತ್ತು ಸಿಟಿ ಬುಕಿಂಗ್ ಕಚೇರಿಗಳಿಗೆ ಭೇಟಿ ನೀಡಬಹುದು ಎಂದು ಅದು ಹೇಳಿದೆ.
ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಚೆನ್ನೈ ಮತ್ತು ಅಮೃತಸರ ಸೇರಿದಂತೆ ಹಲವಾರು ನಗರಗಳಿಂದ ಲಂಡನ್ಗೆ (London) ವಿಮಾನಯಾನ ನಡೆಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಜುಲೈ 25 ರಿಂದ 28 ರವರೆಗೆ ವಂದೇ ಭಾರತ್ ಮಿಷನ್ (Vande Bharat Mission) ಅಡಿಯಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈಗಳನ್ನು ನೆದರ್ಲ್ಯಾಂಡ್ಸ್ನ ಆಮ್ಸ್ಟರ್ಡ್ಯಾಮ್ನೊಂದಿಗೆ ಸಂಪರ್ಕಿಸುವ ಹೆಚ್ಚುವರಿ ವಿಮಾನಯಾನಗಳನ್ನು ನಡೆಸಲಿದೆ ಎಂದು ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ಇದು ಜುಲೈ 21 ರಿಂದ 24 ರವರೆಗೆ ಜರ್ಮನಿಯ ಫ್ರಾಂಕ್ಫರ್ಟ್ ಅನ್ನು ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ದೆಹಲಿಯೊಂದಿಗೆ ಸಂಪರ್ಕಿಸುವ ಹೆಚ್ಚುವರಿ ವಿಮಾನಯಾನಗಳನ್ನು ಸಹ ನಿರ್ವಹಿಸಲಿದೆ.
ಈ ದೇಶಗಳಿಂದ ಸಿಕ್ಕಿಬಿದ್ದ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಿಂಗಾಪುರ, ಕೆನಡಾ ಮತ್ತು ಜರ್ಮನಿಗಳಿಗೆ ವಿಮಾನಯಾನ ನಡೆಸುವುದಾಗಿ ಈ ಹಿಂದೆ ವಿಮಾನಯಾನ ಸಂಸ್ಥೆಗಳು ತಿಳಿಸಿದ್ದವು.