ಇಸ್ರೋ: ಜಿಸ್ಯಾಟ್-6ಎ ಉಪಗ್ರಹ ಯಶಸ್ವಿ ಉಡಾವಣೆ

ಇಸ್ರೋ ಜಿಸ್ಯಾಟ್-6ಎ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

Last Updated : Mar 29, 2018, 07:25 PM IST
ಇಸ್ರೋ: ಜಿಸ್ಯಾಟ್-6ಎ ಉಪಗ್ರಹ ಯಶಸ್ವಿ ಉಡಾವಣೆ title=

ನವದೆಹಲಿ: ಭಾರತಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಶಕ್ತಿಶಾಲಿ ಎಸ್-ಬ್ಯಾಂಡ್ ಸಂವಹನ ಉಪಗ್ರಹ ಜಿಸ್ಯಾಟ್ -6 ಎ ಅನ್ನು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ-ಎಫ್08) ಮೂಲಕ ಗುರುವಾರ ಯಶವಿ ಉಡಾವಣೆ ಮಾಡಿದೆ. 

ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್(SLP)ನಿಂದ  ಜಿಸ್ಯಾಟ್-6ಎ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‍ವಿ-ಎಫ್-08 ರಾಕೆಟ್'ಅನ್ನು ಸಂಜೆ 4:56ಕ್ಕೆ ಉಡಾವಣೆ ಮಾಡಲಾಯಿತು. ಸುಮಾರು 17 ನಿಮಿಷಗಳ ಕಾಲ ಮೂರೂ ಹಂತಗಳಲ್ಲಿ ನಡೆದ ರಾಕೆಟ್ ಉಡಾವಣೆ, ಕಡೆಗೆ ಜಿಸ್ಯಾಟ್-6ಎ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಜಿಸ್ಯಾಟ್-6ಎ ಉಪಗ್ರಹವನ್ನು ಹೊತ್ತ GSLV-F08 ರಾಕೆಟ್ ಸುಮಾರು 415.6 ಟನ್‌ ತೂಕವಿದ್ದು, 161ಅಡಿ ಎತ್ತರವಿದೆ. ಈ ರಾಕೆಟ್ ಗೆ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದ್ದು, ಇದರ ಇಂಧನ ದಕ್ಷತೆ ಈ ಹಿಂದಿನ ರಾಕೆಟ್ ಗಳಿಗಿಂತಲೂ ಉತ್ತಮವಾಗಿದೆ.

ಇನ್ನು ಜಿಸ್ಯಾಟ್-6ಎ ಉಪಗ್ರಹವನ್ನು ಭೂಮಿಯಿಂದ ಸುಮಾರು 36,000ಕಿ.ಮೀ. ದೂರದಲ್ಲಿರುವ ಕಕ್ಷೆಗೆ ರವಾನೆ ಮಾಡಲಾಗಿದ್ದು, 10 ವರ್ಷಗಳು ಈ ಉಪಗ್ರಹ ಕಾರ್ಯನಿರ್ವಹಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಜನವರಿ 2018ರಲ್ಲಿ ಕೆ ಶಿವನ್ ಅವರು ಇಸ್ರೋ ಮುಖ್ಯಸ್ಥರಾಗಿ ನೇಮಕವಾದ ಬಳಿಕ ನಡೆದ ಮೊದಲ ಉಡ್ಡಯನ ಇದಾಗಿದೆ. 

Trending News