ನವದೆಹಲಿ: JAN DHAN YOJANA: ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಖಾತೆ ಹೊಂದಿರಬೇಕು ಎಂದು ಉಚಿತವಾಗಿ ಖಾತೆ ತೆರೆಯಲು ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜನ್ ಧನ್ ಖಾತೆ ಯೋಜನೆ. ನೀವು ಸಹ ಜನ ಧನ್ ಖಾತೆಯನ್ನು ತೆರೆಯಲು ಬಯಸಿದರೆ ಅದು ತುಂಬಾ ಸುಲಭ. ಮನೆಯ ಸಮೀಪವಿರುವ ಯಾವುದೇ ಸರ್ಕಾರಿ ಬ್ಯಾಂಕ್‌ಗೆ ಹೋಗಿ ನೀವು ಈ ಖಾತೆ ತೆರೆಯಬಹುದು. ವಿಶೇಷವೆಂದರೆ ನಿಮ್ಮ ಬಳಿ ಪ್ಯಾನ್ ಕಾರ್ಡ್, ಆಧಾರ್ ನಂತಹ ಯಾವುದೇ ಪ್ರಮುಖ ದಾಖಲೆಗಳಿಲ್ಲದಿದ್ದರೂ ಈ ಖಾತೆಯನ್ನು ತೆರೆಯಬಹುದು.
ಖಾತೆ ತೆರೆಯಲು ಇರುವ ನಿಯಮವೇನು?
> ಜನ ಧನ್ (Jan Dhan) ಖಾತೆಗಳಿಗಾಗಿ ಆರ್‌ಬಿಐ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಇದರ ಪ್ರಕಾರ ಒಬ್ಬ ನಾಗರಿಕನಿಗೆ ಮತದಾರರ ಗುರುತಿನ ಚೀಟಿ, ಪ್ಯಾನ್, ಆಧಾರ್ ಸೇರಿದಂತೆ ಯಾವುದೇ ಅಧಿಕೃತ ದಾಖಲೆ ಇಲ್ಲದಿದ್ದರೂ ಕೂಡ ಆತ ಖಾತೆಯನ್ನು ತೆರೆಯಬಹುದು.
> ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಖಾತೆ ತೆರೆಯಲು ಸ್ವಯಂ ದೃಢೀಕರಿಸಿದ ಛಾಯಾಚಿತ್ರಗಳನ್ನು ಬ್ಯಾಂಕ್ ಅಧಿಕಾರಿಯ ಸಮ್ಮುಖದಲ್ಲಿ ನೀಡಬೇಕಾಗುತ್ತದೆ. ಫೋಟೋದಲ್ಲಿ ಸಹಿ ಅಥವಾ ಹೆಬ್ಬೆರಳಿನ ಗುರುತು ಇರಬೇಕು. ನಂತರ ಬ್ಯಾಂಕರ್ ಖಾತೆಯನ್ನು ತೆರೆಯುತ್ತಾರೆ.
> ಖಾತೆಯನ್ನು ಪ್ರಸ್ತುತವಾಗಿಡಲು ಖಾತೆ ತೆರೆದ 12 ತಿಂಗಳೊಳಗೆ ಯಾವುದಾದರೊಂದು ಮಾನ್ಯ ದಾಖಲೆಗಳನ್ನೂ ಬ್ಯಾಂಕಿನಲ್ಲಿ ಠೇವಣಿ ಮಾಡಬೇಕಾಗುತ್ತದೆ. ನಂತರವಷ್ಟೇ ಈ ಖಾತೆಯು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.
ಮಾನ್ಯ ದಾಖಲೆಗಳು (Valid document)
* ಆಧಾರ್ ಕಾರ್ಡ್ (Aadhaar card)
* ಪ್ಯಾನ್ ಕಾರ್ಡ್ (Pan card)
* ವೋಟರ್ ಐಡಿ (Voter id)
* ಡ್ರೈವಿಂಗ್ ಲೈಸೆನ್ಸ್ (Driving licence)
* ಪಾಸ್ಪೋರ್ಟ್ (Passport)
* ನರೇಗಾ ಜಾಬ್ ಕಾರ್ಡ್ (Narega Job card)
ಜನ ಧನ್ ಖಾತೆಗಳಲ್ಲಿ ಲಭ್ಯವಿರುವ ಸೌಲಭ್ಯಗಳಿವು:
ಸರ್ಕಾರವು ತೆರೆದಿರುವ ಝೀರೋ ಬ್ಯಾಲೆನ್ಸ್ ಜನ ಧನ್ ಖಾತೆಗಳಲ್ಲಿ ನೀವು ಅನೇಕ ರೀತಿಯ ಸೌಲಭ್ಯಗಳನ್ನು ಪಡೆಯುತ್ತೀರಿ. ಇವುಗಳಲ್ಲಿ ನೀವು ಓವರ್‌ಡ್ರಾಫ್ಟ್ ಸೌಲಭ್ಯ ಮತ್ತು ರುಪೇ ಡೆಬಿಟ್ ಕಾರ್ಡ್ ಅನ್ನು ಪಡೆಯುತ್ತೀರಿ. ಈ ಕಾರ್ಡ್‌ನಲ್ಲಿ ನೀವು 1 ಲಕ್ಷ ರೂಪಾಯಿಗಳ ಅಪಘಾತ ವಿಮೆ ಉಚಿತ ಪ್ರಯೋಜನವನ್ನು ಸಹ ಪಡೆಯುತ್ತೀರಿ. ನೀವು ಚೆಕ್ಬುಕ್ ತೆಗೆದುಕೊಳ್ಳಲು ಬಯಸಿದರೆ ನೀವು ಯಾವಾಗಲೂ ನಿಮ್ಮ ಖಾತೆಯಲ್ಲಿ ಸ್ವಲ್ಪ ಮೊತ್ತವನ್ನು ಇಟ್ಟುಕೊಳ್ಳಬೇಕು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಒಂದೊಮ್ಮೆ ಖಾತೆಯಲ್ಲಿ ನಿಗದಿತ ಮೊತ್ತ ಜಮಾ ಮಾಡದಿದ್ದರೆ ಚೆಕ್ಬುಕ್ ಪಡೆಯಲು ನಿಮಗೆ ತೊಂದರೆ ಎದುರಾಗಬಹುದು.
ದೇಶಾದ್ಯಂತ ಜಾರಿಗೆ ತರಲಾಗಿರುವ ಲಾಕ್‌ಡೌನ್(Lockdown)ಮಧ್ಯೆ ಮಹಿಳಾ ಜನ್-ಧನ್ ಖಾತೆದಾರರ ಖಾತೆಗೆ ಸರ್ಕಾರ ಹಣ ಜಮಾ ಮಾಡುವ ಮೂಲಕ ಸಹಾಯ ಮಾಡಿದೆ. ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ ನೇರ ಲಾಭ ವರ್ಗಾವಣೆಯ ಮೂಲಕ ಸುಮಾರು 39 ಕೋಟಿ ಜನರಿಗೆ ನಗದು ನೆರವು ನೀಡಲಾಗಿದೆ. ಇದಕ್ಕಾಗಿ ಇದುವರೆಗೆ 34,800 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಮೊದಲ ಕಂತು 500 ರೂ.ಗಳಂತೆ 20.05 ಕೋಟಿ ಮಹಿಳಾ ಜನ ಧನ್ ಖಾತೆದಾರರ ಖಾತೆಗಳಿಗೆ 10,025 ಕೋಟಿ ರೂ. ಅದೇ ಸಮಯದಲ್ಲಿ, ಒಟ್ಟು 2,785 ಕೋಟಿ ರೂಗಳನ್ನು 5.57 ಕೋಟಿ ಮಹಿಳಾ ಜನ ಧನ್ ಖಾತೆದಾರರ ಖಾತೆಗೆ ಕಳುಹಿಸಲಾಗಿದೆ.