ನಾಳೆಯಿಂದ 2 ದಿನಗಳ ಕಾಲ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಭಾರತ ಬಂದ್

ಜನವರಿ 8, 9ರಂದು ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಕಾಲ ಭಾರತ ಬಂದ್ ಗೆ ಕರೆ ನೀಡಿವೆ.ಈ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ದೇಶಾದ್ಯಂತ ಜನ ಜೀವನ ಅಸ್ತವ್ಯಸ್ಥಗೊಳ್ಳಲಿದೆ ಎನ್ನಲಾಗಿದೆ.10 ಪ್ರಮುಖ ಕಾರ್ಮಿಕ ಸಂಘಟನೆಗಳು ಈ ಬಂದ್ ಗೆ ಕರೆ ನೀಡಿವೆ. ಅದರಲ್ಲಿ ಇಂಟಕ್, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಲ್ಪಿಎಫ್, ಸೇವಾ ಪ್ರಮುಖ ಸಂಘಟನೆಗಳು ಇದರಲ್ಲಿ ಭಾಗವಹಿಸಲಿವೆ. 

Last Updated : Jan 7, 2019, 08:34 PM IST
ನಾಳೆಯಿಂದ 2 ದಿನಗಳ ಕಾಲ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಭಾರತ ಬಂದ್  title=

ನವದೆಹಲಿ: ಜನವರಿ 8, 9ರಂದು ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಕಾಲ ಭಾರತ ಬಂದ್ ಗೆ ಕರೆ ನೀಡಿವೆ. ಈ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ದೇಶಾದ್ಯಂತ ಜನ ಜೀವನ ಅಸ್ತವ್ಯಸ್ಥಗೊಳ್ಳಲಿದೆ ಎನ್ನಲಾಗಿದೆ.10 ಪ್ರಮುಖ ಕಾರ್ಮಿಕ ಸಂಘಟನೆಗಳು ಈ ಬಂದ್ ಗೆ ಕರೆ ನೀಡಿವೆ. ಅದರಲ್ಲಿ ಇಂಟಕ್, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಲ್ಪಿಎಫ್, ಸೇವಾ ಪ್ರಮುಖ ಸಂಘಟನೆಗಳು ಇದರಲ್ಲಿ ಭಾಗವಹಿಸಲಿವೆ. 

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮ್ರಜೀತ್ ಕೌರ್ ಪ್ರಕಾರ ಸುಮಾರು 10 ಕಾರ್ಮಿಕ ಸಂಘಟನೆಗಲು ಈ ಬಂದ್ ನಲ್ಲಿ ಭಾಗಿಯಾಗಲಿದ್ದು ಸುಮಾರು 20 ಕೋಟಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ವಲಯಗಳ ಕಾರ್ಮಿಕರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಮುಖವಾಗಿ ಬ್ಯಾಂಕಿಂಗ್ ,ಶಿಕ್ಷಣ, ಕಲ್ಲಿದ್ದಲು, ಟೆಲಿಕಾಂ, ಆರೋಗ್ಯ, ವಿಮೆ, ಹಾಗೂ ಸಾರಿಗೆ ವಲಯದ ಕಾರ್ಮಿಕರು ಭಾರತ ಬಂದ್ ನಲ್ಲಿ ಭಾಗವಹಿಸಲಿದ್ದಾರೆ.ಈ ಬಂದ್ ವಿಚಾರವಾಗಿ ಮಾತನಾಡಿದ ಅಮ್ರಜೀತ್ ಕೌರ್ " ಸರ್ಕಾರವು ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಮತ್ತು ಕಾರ್ಮಿಕ ಸಂಘಟನೆಗಳ 12 ಅಂಶಗಳ ಬೇಡಿಕೆಯನ್ನು ನಿರ್ಲಕ್ಷಿಸಿವೆ, ಇನ್ನು ಕಾರ್ಮಿಕರ ವಿಚಾರವಾಗಿ ಸೆಪ್ಟಂಬರ್ 2, 2015 ರಿಂದ ಹಣಕಾಸು ಅರುಣ್ ಜೈಟ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ, ಆದ್ದರಿಂದ ನಮಗೆ ಮತ್ತೆ ಬೇರೆ ಯಾವುದೇ ಆಯ್ಕೆಯಿಲ್ಲದೆ ಈಗ ಪ್ರತಿಭಟನೆಗೆ ಮೊರೆಹೊಗಬೇಕಾಗಿದೆ" ಎಂದರು.

Trending News