ಕ್ರೌಡ್ ಫಂಡಿಂಗ್ ಗೆ ಮೂಲಕ ಚುನಾವಣಾ ಸ್ಪರ್ಧೆಗೆ ಮುಂದಾದ ಕನ್ನಯ್ಯ ಕುಮಾರ್

ಜೆಎನ್ಯು ಪ್ರಕರಣದಲ್ಲಿ ಆಜಾದಿ ಭಾಷಣದಿಂದಲೇ ದೇಶದ ಗಮನ ಸೆಳೆದಿದ್ದ ಕನ್ನಯ್ಯ ಕುಮಾರ್ ಈಗ ಎಡಪಕ್ಷದ ಅಭ್ಯರ್ಥಿಯಾಗಿ ಬೇಗುಸರಾಯಿನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

Last Updated : Mar 26, 2019, 07:19 PM IST
ಕ್ರೌಡ್ ಫಂಡಿಂಗ್ ಗೆ ಮೂಲಕ ಚುನಾವಣಾ ಸ್ಪರ್ಧೆಗೆ ಮುಂದಾದ ಕನ್ನಯ್ಯ ಕುಮಾರ್ title=
file photo

ನವದೆಹಲಿ: ಜೆಎನ್ಯು ಪ್ರಕರಣದಲ್ಲಿ ಆಜಾದಿ ಭಾಷಣದಿಂದಲೇ ದೇಶದ ಗಮನ ಸೆಳೆದಿದ್ದ ಕನ್ನಯ್ಯ ಕುಮಾರ್ ಈಗ ಎಡಪಕ್ಷದ ಅಭ್ಯರ್ಥಿಯಾಗಿ ಬೇಗುಸರಾಯಿನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಈಗ ಚುನಾವಣಾ ವೆಚ್ಚವನ್ನು ನಿಗಿಸುವ ನಿಟ್ಟಿನಲ್ಲಿ ಅವರು ಕ್ರೌಡ್ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೇಗುಸರಾಯಿನಿಂದ ಕಣಕ್ಕೆ ಇಳಿದಿರುವ ಕನ್ನಯ್ಯ ಕುಮಾರ್ , ಈಗ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ  ಪ್ರಬಲ ಪೈಪೋಟಿ ನೀಡಲಿದ್ದಾರೆ ಎನ್ನಲಾಗಿದೆ.

ಕನ್ನಯ್ಯ ಕುಮಾರ್ ಮಂಗಳವಾರದಂದು ಬೆಳಗ್ಗೆ ಸುಮಾರು 71 ಲಕ್ಷ ಹಣವನ್ನು ಕ್ರೌಡ್ ಫಂಡಿಂಗ್ ಮೂಲಕ ಕಲೆಹಾಕುವ ಯೋಜನೆಗೆ ಚಾಲನೆ ಚಾಲನೆ ನೀಡಿದ್ದಾರೆ.ಇದಾದ ಸ್ವಲ್ಪ ಸಮಯದಲ್ಲಿಯೇ ಅವರಿಗೆ 5 ಲಕ್ಷದಷ್ಟು ಹಣ ಸಂಗ್ರಹವಾಗಿದೆ ಎನ್ನಲಾಗಿದೆ.

ತಮ್ಮ ಭಾಷಣದುದ್ದಕ್ಕೂ ಗೌರಿ ಲಂಕೇಶ್ ಎಂ.ಎಂ.ಕಲಬುರ್ಗಿ.ರೋಹಿತ್ ವೆಮುಲಾ ರನ್ನು ಪ್ರಸ್ತಾಪಿಸಿದ ಕನ್ನಯ್ಯ ಕುಮಾರ್, ಈ ಇಂತಹ ಸಂದರ್ಭದಲ್ಲಿ ಸಂವಿಧಾನದ ಮೌಲ್ಯ ಹಾಗೂ ಮಾನವೀಯತೆಯನ್ನು ಕಾಪಾಡಬೇಕಾಗಿದೆ ಎಂದರು. 

ನೋಟಿನೊಂದಿಗೆ ಮತ ವಿನೂತನ ಯೋಜನೆಯಾಗಿದ್ದು, ಈ ಹಿಂದೆ ಸಮಾಜವಾದಿ ನಾಯಕರಾಗಿದ್ದ ಮಧು ಲಿಮಾಯೇ ಹಾಗೂ ಜಾರ್ಜ್ ಫರ್ನಾಂಡಿಸ್ ಇಂತಹ ಯೋಜನೆಯನ್ನು ಚುನಾವಣೆ ವೇಳೆ ಕಾರ್ಯಗತಗೊಳಿಸಿದ್ದರು.

Trending News