Trending Video: ಜೈಪುರದ ಬೀದಿಗಳಲ್ಲಿ ಬಹಿರಂಗವಾಗಿ ನಿಯಮಗಳನ್ನು ಉಲ್ಲಂಘಿಸಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ನಗರದ ಬೀದಿಗಳಲ್ಲಿ ಪ್ರೇಮ್ ಕಹಾನಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. ಅಶ್ಲೀಲತೆಯಿಂದ ತುಂಬಿರುವ ಈ ವೀಡಿಯೊದಲ್ಲಿ, ಬೈಕ್ ಓಡಿಸುವ ಹುಡುಗ ಮತ್ತು ಹುಡುಗಿ ಎಲ್ಲಾ ಮಿತಿಗಳನ್ನು ದಾಟಿರುವುದನ್ನು ಕಾಣಬಹುದು.
ಇದನ್ನೂ ಓದಿ: Mrunal Thakur: ಸಾಂಪ್ರದಾಯಿಕ ಉಡುಗೆಯಲ್ಲಿ ಸೀತೆಯಂತೆ ಕಂಗೊಳಿಸಿದ ರಾಜಕುಮಾರಿ ನೂರ್ ಜಹಾನ್!
ಜೈಪುರದ ಪೋರ್ಷೆ ಪ್ರದೇಶದಲ್ಲಿರುವ ಜವಾಹರ್ ಸರ್ಕಲ್’ನಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಹೋಳಿ ಹಬ್ಬದಂದು ಯಾರೋ ತಮ್ಮ ಕ್ಯಾಮರಾದಲ್ಲಿ ಈ ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
#जयपुर में बाइक पर आशिका का वीडियो वायरल pic.twitter.com/ghn5cYvzKk
— ZEE Rajasthan (@zeerajasthan_) March 7, 2023
ಈ ಘಟನೆ ಜೈಪುರದ ಜವಾಹರ್ ಸರ್ಕಲ್’ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ ಜೋಡಿಗಳಿಬ್ಬರು ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುತ್ತಿರುವುದನ್ನು ಕಾಣಬಹುದು. ಬುಲೆಟ್ ಬೈಕ್’ನಲ್ಲಿ ಸವಾರಿ ಮಾಡುತ್ತಿರುವ ಹುಡುಗ ಮತ್ತು ಹುಡುಗಿ ಇಬ್ಬರೂ ಹೋಳಿ ಆಚರಣೆ ಮಾಡಿದ್ದಾರೆ ಎಂದು ಕಾಣಿಸುತ್ತದೆ
ಜೈಪುರದ ಬೀದಿಯಲ್ಲಿ ಬುಲೆಟ್ ಬೈಕ್’ನಲ್ಲಿ ಜೋಡಿ ಎದುರು ಬದುರಾಗಿ ಕುಳಿತುಕೊಂಡಿದ್ದಾರೆ. ಬುಲೆಟ್ ಬೈಕ್’ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಹುಡುಗಿ ಮುತ್ತಿಟ್ಟಂತೆ ಕಾಣಿಸುತ್ತಿದೆ. ಜೊತೆಗೆ ಹುಡುಗಿ ತನ್ನ ತೋಳುಗಳಿಂದ ಹುಡುಗನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ಎಲ್ಲಾ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಅಂದು ಸಾಮಾನ್ಯ ಮಹಿಳೆ; ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ: ಈಕೆಯ ಅದೃಷ್ಟದಿಂದಲೇ ವಿಶ್ವಕಪ್ ಗೆದ್ದಿದ್ದರಂತೆ ಆ ನಾಯಕ!
ಹೋಳಿ ಆಚರಣೆಯ ಮಧ್ಯೆ ಹುಡುಗ-ಹುಡುಗಿ ರಸ್ತೆಯಲ್ಲಿ ಅಶ್ಲೀಲತೆಯನ್ನು ಪ್ರದರ್ಶಿಸಿದ್ದಾರೆ. ಸುಮಾರು 12 ಸೆಕೆಂಡುಗಳ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಶೇರ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.