ಲೋಕಸಭಾ ಚುನಾವಣೆ 2019: ದಿಲ್ಲಿ ಅಭ್ಯರ್ಥಿಗಳ ಪೈಕಿ ಶ್ರೀಮಂತರಿವರು!

ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡ ಕ್ರಿಕೆಟ್ ಪಟು ಗೌತಮ್ ಗಂಭೀರ್ ಇದೇ ಮೊದಲ ಬಾರಿಗೆ ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಈಶಾನ್ಯ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ.

Last Updated : Apr 24, 2019, 07:30 AM IST
ಲೋಕಸಭಾ ಚುನಾವಣೆ 2019: ದಿಲ್ಲಿ ಅಭ್ಯರ್ಥಿಗಳ ಪೈಕಿ ಶ್ರೀಮಂತರಿವರು! title=
Pic Courtesy: IANS

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಬಿಜೆಪಿ-ಕಾಂಗ್ರೆಸ್-ಎಎಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ ದೆಹಲಿಯಲ್ಲಿ ಕಣಕ್ಕಿಳಿಯುತ್ತಿರುವ ಅಭ್ಯರ್ಥಿಗಳ ಪೈಕಿ ಅತಿ ಶ್ರೀಮಂತ ವ್ಯಕ್ತಿ ಯಾರು ಗೊತ್ತೇ? ಅದು ಮತ್ಯಾರು ಅಲ್ಲ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್. ಗೌತಮ್ ಇದೇ ಮೊದಲ ಬಾರಿಗೆ ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದು, ಇವರು ದೆಹಲಿಯ ಎಲ್ಲಾ ಅಭ್ಯರ್ಥಿಗಳಿಗಿಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಇವರ ಒಟ್ಟು ಆಸ್ತಿ 147 ಕೋಟಿ ರೂಪಾಯಿಗಳು. 

ಗೌತಮ್ ಗಂಭೀರ್ 2017-18 ತೆರಿಗೆ ರಿಟರ್ನ್ಸ್ ಸಲ್ಲಿಸಲು 12.40 ಕೋಟಿ ರೂ. ಆದಾಯವನ್ನು ತೋರಿಸಿದ್ದಾರೆ. ಇದೇ ಅವಧಿಯಲ್ಲಿ ಅವರ ಪತ್ನಿ ನತಾಶಾ ಗಂಭೀರ್ ಐಟಿ ರಿಟರ್ನ್ಸ್ ನಲ್ಲಿ 6.15 ಲಕ್ಷ ಆದಾಯ ತೋರಿಸಿದ್ದಾರೆ. ಅವರು 147 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಅಫಿಡವಿಟ್ ಘೋಷಿಸಿದ್ದಾರೆ. ಮಾಹಿತಿಯ ಪ್ರಕಾರ, ಬಾರಕಂಭ ರೋಡ್ ನಲ್ಲಿರುವ ಮಾಡರ್ನ್ ಶಾಲೆಯಲ್ಲಿ ಗಂಭೀರ್ ಶಾಲಾ ಶಿಕ್ಷಣ ಪಡೆದಿದ್ದು, ದೆಹಲಿಯ ಹಿಂದೂ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಮನೋಜ್ ತಿವಾರಿ ಮತ್ತು ರಮೇಶ್ ಬಿಧುಡಿ ಬಳಿ ಇರುವ ಸಂಪತ್ತು:
ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಈಶಾನ್ಯ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರ ಒಟ್ಟು ಚರ ಮತ್ತು ಸ್ಥಿರ ಆಸ್ತಿ 24 ಕೋಟಿ ರೂ. 2014 ಕ್ಕೆ ಹೋಲಿಸಿದರೆ ಅದು 4.33 ಕೋಟಿ ಹೆಚ್ಚಾಗಿದೆ. 2017-18ರ ಆದಾಯದ ಪ್ರಕಾರ, ಅವರ ಆದಾಯ 48.03 ಲಕ್ಷ ರೂ. ಎನ್ನಲಾಗಿದೆ.

ದಕ್ಷಿಣ ದೆಹಲಿಯ ಬಿಜೆಪಿ ಸಂಸದರಾಗಿರುವ ರಮೇಶ್ ಬಿಧುಡಿ ತಮ್ಮ ಅಫಿಡವಿಟ್ ನಲ್ಲಿ 18 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಯನ್ನು ಘೋಷಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಇದು 3.5 ಕೋಟಿ ರೂ. ಹೆಚ್ಚಾಗಿದೆ. 2017-18ರಲ್ಲಿ ಬಿಧೋಡಿ ಮತ್ತು ಅವರ ಪತ್ನಿ ಕ್ರಮವಾಗಿ ರೂ. 16.72 ಲಕ್ಷ ಮತ್ತು 3.09 ಲಕ್ಷ ರೂ. ಆದಾಯ ಘೋಷಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಬಳಿಯಿರುವ ಆಸ್ತಿ ಮೌಲ್ಯ?
ಬಿಧುಡಿ ಅವರಿಗೆ ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿ ವಿಜೇಂದರ್ ಸಿಂಗ್ 3.57 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು  5.05 ಕೋಟಿ ರೂ. ಸ್ಥಿರ ಆಸ್ತಿಗಳನ್ನು ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಶೀಲಾ ದೀಕ್ಷಿತ್ ಮಂಗಳವಾರ ಸಲ್ಲಿಸಿದ ಅಫಿಡವಿಟ್ ನಲ್ಲಿ  4.92 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದಾರೆ. 81 ವರ್ಷ ವಯಸ್ಸಿನ ದೀಕ್ಷಿತ್ ಅವರು ನಿಜಾಮುದ್ದೀನ್ ಪ್ರದೇಶದಲ್ಲಿ 1.88 ಕೋಟಿ ಮಾರುಕಟ್ಟೆ ಮೌಲ್ಯವಿರುವ ಮನೆ ಹೊಂದಿದ್ದಾರೆ.
 

Trending News