ಚಲನ್ ನೀಡಿದ್ದಕ್ಕೆ ಬೈಕ್‍ಗೇ ಬೆಂಕಿ ಹಚ್ಚಿದ! ಮುಂದೆ...

ಸಂಚಾರಿ ಪೊಲೀಸ್ ಸಿಬ್ಬಂದಿ ಚಲನ್ ನೀಡಿದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

Updated: Sep 23, 2019 , 11:12 AM IST
ಚಲನ್ ನೀಡಿದ್ದಕ್ಕೆ ಬೈಕ್‍ಗೇ ಬೆಂಕಿ ಹಚ್ಚಿದ! ಮುಂದೆ...

ಇಂದೋರ್: ಸಂಚಾರಿ ಪೊಲೀಸ್ ಸಿಬ್ಬಂದಿ ಚಲನ್ ನೀಡಿದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಹನ ಸವಾರರಿಗೆ ಕಿರುಕುಳ ನೀಡುತ್ತಿದ್ದು, ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಟ್ರಾಫಿಕ್ ಸಿಬ್ಬಂದಿ ತಮ್ಮ ಐಡೆಂಟಿಟಿ ಕಾರ್ಡ್ ತೋರಿಸುವುದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

"ಮೊದಲು ಆತನ ಬೈಕ್ ತಡೆದ ಟ್ರಾಫಿಕ್ ಸಿಬ್ಬಂದಿ 500 ರೂ. ನೀಡುವಂತೆ ಕೇಳಿದರು. ಆ ವ್ಯಕ್ತಿ ಒಂದು ಗಂಟೆಗಳ ಕಾಲ ನಿಂತು ಮನವಿ ಮಾಡಿಕೊಂಡರೂ ಪೊಲೀಸರು ಬಿಡದ ಕಾರಣ ಮನನೊಂದ ಆತ ತನ್ನ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ" ಎಂದು  ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಮತ್ತೋರ್ವ ಪ್ರತಕ್ಷದರ್ಶಿ, "ಸಾಮಾನ್ಯವಾಗಿ ಈ ಟ್ರಾಫಿಕ್ ಸಿಬ್ಬಂದಿಗಳು ಮದ್ಯಸೇವನೆ ಮಾಡಿ ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ತಡೆದು ಹಣ ಸುಲಿಗೆ ಮಾಡುತ್ತಿದ್ದಾರೆ. ಮೊದಲಿಗೆ 1000 ದಂಡ ಹಾಕುವುದಾಗಿ ಹೇಳಿ, ಬಳಿಕ 500 ಲಂಚ ಪಡೆದು ಬಿಟ್ಟುಬಿಡುತ್ತಾರೆ. ಅಷ್ಟಕ್ಕೂ ಮಧ್ಯಪ್ರದೇಶದಲ್ಲಿ ಇನ್ನೂ ಮೋಟಾರು ವಾಹನ ಕಾಯ್ದೆ ಜಾರಿಯಾಗಿಲ್ಲ. ಹೀಗಿದ್ದರೂ ಪೋಲೀಸರ ವರ್ತನೆ ಅಸಹನೀಯವಾಗಿದೆ" ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ  ಪಾರ್ದೇಸಿಪುರ ಸ್ಟೇಷನ್ ಹೌಸ್ ಅಧಿಕಾರಿ ರಾಹುಲ್ ಶರ್ಮಾ, ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.