24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 60 ಸಾವಿರ ಕೊರೊನಾ ಪ್ರಕರಣ ಹಾಗೂ 349 ಸಾವು

 ಮಹಾರಾಷ್ಟ್ರದಲ್ಲಿ ಗುರುವಾರ 61,695 ಹೊಸ ಕೊರೊನಾ ಪ್ರಕರಣಗಳು ಮತ್ತು 349 ಸಾವುಗಳು ದಾಖಲಾಗಿವೆ.ಪರಿಸ್ಥಿತಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಈಗ ಮೇ 1 ರವರೆಗೆ ಕಠಿಣ ಕರ್ಫ್ಯೂ ಜಾರಿಗೊಳಿಲಾಗಿದೆ.

Last Updated : Apr 15, 2021, 10:01 PM IST
24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 60 ಸಾವಿರ ಕೊರೊನಾ ಪ್ರಕರಣ ಹಾಗೂ 349 ಸಾವು  title=

ನವದೆಹಲಿ: ಮಹಾರಾಷ್ಟ್ರದಲ್ಲಿ ಗುರುವಾರ 61,695 ಹೊಸ ಕೊರೊನಾ ಪ್ರಕರಣಗಳು ಮತ್ತು 349 ಸಾವುಗಳು ದಾಖಲಾಗಿವೆ.ಪರಿಸ್ಥಿತಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಈಗ ಮೇ 1 ರವರೆಗೆ ಕಠಿಣ ಕರ್ಫ್ಯೂ ಜಾರಿಗೊಳಿಲಾಗಿದೆ.

ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ 8,209 ಹೊಸ ಸೋಂಕುಗಳು ಮತ್ತು 50 ಸಾವುಗಳು ವರದಿಯಾಗಿವೆ.ಏಪ್ರಿಲ್ 11 ರಂದು ಮಹಾರಾಷ್ಟ್ರವು 63,000 ಕ್ಕೂ ಹೆಚ್ಚು ಕೊರೊನಾ (Coronavirus) ಪ್ರಕರಣಗಳನ್ನು ದಾಖಲಿಸಿದೆ.

ಇದನ್ನೂ ಓದಿ: Corona Vaccine: ಅಮೆರಿಕದ ನಂತರ ಈ ದೇಶದಲ್ಲೂ Johnson & Johnson ಲಸಿಕೆ ನಿಷೇಧ

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರವು 2,34,452 ಪರೀಕ್ಷೆಗಳನ್ನು ನಡೆಸಿದ್ದು, ಸಕಾರಾತ್ಮಕತೆ ಶೇಕಡಾ 26.3 ಕ್ಕೆ ಏರಿದೆ.ಕಳೆದ 24 ಗಂಟೆಗಳಲ್ಲಿ 53,335 ಚೇತರಿಕೆಗಳು ಪ್ರಕರಣಗಳು ವರದಿಯಾಗಿವೆ.ಆದರೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Kumbh Mela 2021: ಕುಂಭಮೇಳ 5 ದಿನಗಳಲ್ಲಿ 1,700 ಕೊರೋನಾ ಪ್ರಕರಣಗಳು ಪತ್ತೆ!

ಏಪ್ರಿಲ್ 30 ರ ವೇಳೆಗೆ ರಾಜ್ಯದ ಸಕ್ರಿಯ ಪ್ರಕರಣಗಳು 11.9 ಲಕ್ಷದವರೆಗೆ ತಲುಪಲಿದೆ ಎಂದು ಯೋಜಿಸಲಾಗಿದೆ.ಏಪ್ರಿಲ್ 14 ರಂದು ರಾತ್ರಿ 8 ಗಂಟೆಯಿಂದ, ಇಡೀ ಮಹಾರಾಷ್ಟ್ರದಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದ್ದು, ಅಗತ್ಯ ಸೇವೆಗಳನ್ನು ನಿರ್ವಹಿಸುವ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News