ಅಕ್ರಮವಾಗಿ 700 ಕೆ.ಜಿ. ಪಟಾಕಿ ಹೊಂದಿದ್ದ ವ್ಯಕ್ತಿ ಬಂಧನ

ಜಗತ್‌ಪುರಿಯಲ್ಲಿ ಹಿಟ್ಟಿನ ಗಿರಣಿಯಲ್ಲಿ ಇಡಲಾಗಿದ್ದ ಸುಮಾರು 700 ಕೆ.ಜಿ. ಅಕ್ರಮ ಪಟಾಕಿಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ. 

Last Updated : Oct 23, 2019, 11:10 AM IST
ಅಕ್ರಮವಾಗಿ 700 ಕೆ.ಜಿ. ಪಟಾಕಿ ಹೊಂದಿದ್ದ ವ್ಯಕ್ತಿ ಬಂಧನ title=

ದೆಹಲಿ: ಸುಮಾರು 700 ಕೆ.ಜಿ. ಪಟಾಕಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ಇಲ್ಲಿನ ಜಗತ್‌ಪುರಿಯಲ್ಲಿ ಹಿಟ್ಟಿನ ಗಿರಣಿಯಲ್ಲಿ ಇಡಲಾಗಿದ್ದ ಸುಮಾರು 700 ಕೆ.ಜಿ. ಅಕ್ರಮ ಪಟಾಕಿಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ. 

ಘಟನೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, "ಅಕ್ರಮವಾಗಿ ಪಟಾಕಿಗಳನ್ನು ಮಾರಾಟ ಮಾಡಿದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಗತ್‌ಪುರಿ ಪ್ರದೇಶದಲ್ಲಿ ಮಂಗಳವಾರ ಸಂಜೆ ದಾಳಿ ನಡೆಸಿ ಪರಿಶೀಲಿಸಿದಾಗ ಮತ್ತು ದಾಳಿ ನಡೆಸಿದಾಗ ಹಿಟ್ಟಿನ ಗಿರಣಿ ಹಿಂದಿ ಇರಿಸಲಾಗಿದ್ದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.

ಸದ್ಯ, ಮುಖ್ಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Trending News