ಮಾವು ಮತ್ತು ಹುಣಸೆ ಮರದ ಮದುವೆಗೂ ಮುದ್ರಣವಾಯಿತು ಆಮಂತ್ರಣ ಪತ್ರಿಕೆ, ದೂರದೂರಿನಿಂದ ಬಂದು ವಿವಾಹಕ್ಕೆ ಸಾಕ್ಷಿಯಾದ ಜನ

ಈ ಮದುವೆಯನ್ನು  ಭಾನುವಾರ ಅನಂತ ಚತುರ್ದಶಿಯ ಶುಭ ಸಂದರ್ಭದಲ್ಲಿ ನೆರವೇರಿಸಲಾಯಿತು. ಮದುವೆಗೆ ಮುದ್ರಿಸಿದ ಕಾರ್ಡ್ ನಲ್ಲಿ ವರನನ್ನು 'ಹಣ್ಣುಗಳ ರಾಜ' ಮತ್ತು ವಧುವನ್ನು 'ಚುಲ್ ಬುಲಿ ಪುತ್ರಿ ' ಎಂದು ಬರೆಯಲಾಗಿದೆ.  

Written by - Ranjitha R K | Last Updated : Sep 21, 2021, 05:35 PM IST
  • ಯುಪಿಯ ಸೀತಾಪುರದಲ್ಲಿ ನಡೆದ ವಿಶಿಷ್ಟ ವಿವಾಹ
  • ಮಾವು ಮತ್ತು ಹುಣಿಸೆಹಣ್ಣಿನ ಮರಗಳ ಮದುವೆ
  • ನದಿ ಉಳಿಸಲು ನಡೆದ ಅಭಿಯಾನ
ಮಾವು ಮತ್ತು ಹುಣಸೆ ಮರದ ಮದುವೆಗೂ ಮುದ್ರಣವಾಯಿತು ಆಮಂತ್ರಣ ಪತ್ರಿಕೆ, ದೂರದೂರಿನಿಂದ ಬಂದು ವಿವಾಹಕ್ಕೆ ಸಾಕ್ಷಿಯಾದ ಜನ  title=
ಯುಪಿಯ ಸೀತಾಪುರದಲ್ಲಿ ನಡೆದ ವಿಶಿಷ್ಟ ವಿವಾಹ (photo zee news)

ಸೀತಾಪುರ : ಸಾಮಾನ್ಯವಾಗಿ ಮದುವೆ ಎಂದಾಕ್ಷಣ ವರ ಮತ್ತು ವಧು ಕಣ್ಣ ಮುಂದೆ ಬರುತ್ತಾರೆ. ಒಂದು ಹೆಣ್ಣು ಮತ್ತು ಒಂದು ಗಂಡು ಮದುವೆ ಎಂಬ ಪವಿತ್ರ ಬಂಧನದಲ್ಲಿ ಒಂದಾಗುತ್ತಾರೆ.  ಕಷ್ಟ ಸುಖ ಏನೇ ಬರಲಿ ಜೀವಣ ಪೂರ್ತಿ ಜೊತೆಗಿರುವ ಪ್ರತಿಜ್ಞೆ ಮಾಡುತ್ತಾರೆ. ಆದರೆ, ಉತ್ತರ ಪ್ರದೇಶದ ಸೀತಾಪುರದಲ್ಲೊಂದು (Sitapura) ವಿಶೇಷ ಮದುವೆ ನಡೆದಿದೆ. ಹೌದು ಈ ಮದುವೆ ನಡೆದಿದ್ದು, ಹುಣಿಸೆ ಮರ ಮತ್ತು ಮಾವಿನ ಮರದ ಮಧ್ಯೆ.. ವ ಈ ವಿಶೇಷ ಮದುವೆಗಾಗಿ ಆಮಂತ್ರಣ ಪತ್ರಿಕೆ ಮುದ್ರಿಸಿ, ಊರೆಲ್ಲಾ ಹಂಚಿದ್ದೂ ಆಗಿದೆ. ಸುಮಾರು ೪೦೦ ರಿಂದ ೫೦೦ ಜನರ ಉಪಸ್ಥಿತಿಯಲ್ಲಿ ಈ ಮದುವೆ (Special marriage) ನೆರವೇರಿದೆ.
 
ಮುದ್ರಣವಾಯಿತು ಆಮಂತ್ರಣ ಪ್ರತಿಕೆ :
ಈ ಮದುವೆಯನ್ನು (Marriage) ಭಾನುವಾರ ಅನಂತ ಚತುರ್ದಶಿಯ ಶುಭ ಸಂದರ್ಭದಲ್ಲಿ ನೆರವೇರಿಸಲಾಯಿತು. ಮದುವೆಗೆ ಮುದ್ರಿಸಿದ ಕಾರ್ಡ್ ನಲ್ಲಿ ವರನನ್ನು 'ಹಣ್ಣುಗಳ ರಾಜ' (Mango) ಮತ್ತು ವಧುವನ್ನು 'ಚುಲ್ ಬುಲಿ ಪುತ್ರಿ ' ಎಂದು ಬರೆಯಲಾಗಿದೆ.  ಮುಸ್ತಫಾಬಾದ್‌ನ ಕತಿನಾ ನದಿಯನ್ನು (Katina river)  ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಭಾನುವಾರ ಈ ವಿಶಿಷ್ಟ ವಿವಾಹ ಸಮಾರಂಭವನ್ನು (Marriage) ಹಮ್ಮಿಕೊಳ್ಳಲಾಗಿತ್ತು. ಈ ಮದುವೆಗೆ ಮೆರವಣಿಗೆ ಮೂಲಕ ಸುಮಾರು 400 ಅತಿಥಿಗಳು ಆಗಮಿಸಿದ್ದರು. ಇವರೆಲ್ಲರೂ ಎತ್ತಿನ ಗಾಡಿಗಳಲ್ಲಿ ಸವಾರಿ ಮಾಡುತ್ತಾ ಈ ಮದುವೆಗೆ ಆಗಮಿಸಿದ್ದರು. ಅಲ್ಲದೆ, ಸಮಾರಂಭದಲ್ಲಿ  50  ನವ ವಿವಾಹಿತ ಜೋಡಿಗಳು ಕೂಡಾ ಭಾಗಿಯಾಗಿದ್ದವು.  

ಇದನ್ನೂ ಓದಿ : ಉಧಂಪುರದಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್‌ಗಳು ಹುತಾತ್ಮ

ಅತಿಥಿಗಳಿಗೆ ಉತ್ತಮ ಸತ್ಕಾರ :
ಅಲಂಕರಿಸಿದ 'ಮಂಟಪ'ದಲ್ಲಿ ವಿವಾಹವನ್ನು ಅದ್ದೂರಿಯಾಗಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಮದುವೆಗೆ ಬಂದಿದ್ದ ಅತಿಥಿಗಳಿಗೆ ಪೂರಿ ಸಬ್ಜಿ, ಮೊಸರು ಬಜ್ಜಿ  ಮತ್ತು ಮೊಸರು ವಡೆ ಸೇರಿದಂತೆ ಇತರ ಖಾದ್ಯಗಳನ್ನೊಳಗೊಂಡ ಅದ್ದೂರಿ ಭೋಜನವನ್ನು ಕೂಡಾ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಸ್ಥಳದಲ್ಲಿ ಹುಣಸೆ ಗಿಡವನ್ನೂ ನೆಡಲಾಯಿತು. 

wedding card

ಅಷ್ಟೇ ಅಲ್ಲ, ಈ ವಿಶಿಷ್ಟ ವಿವಾಹದಲ್ಲಿ ಮನರಂಜನೆಗಾಗಿ ಕೂಡಾ ಸಂಪೂರ್ಣ ವ್ಯವಸ್ಥೆ ಮಾಡಲಾಗಿತ್ತು. ಕೊನೆಯಲ್ಲಿ, ವಧುವನ್ನು  ಗಂಡನ ಮನೆಗೆ ಕಳುಹಿಸಿ ಕೊಡುವ ಸಂಪ್ರದಾಯದಂತೆ, ಹುಣಸೆಹಣ್ಣಿನ ಗಿಡವನ್ನು ಮಾವಿನ ತೋಟದ (Mango) ಮಧ್ಯೆ ನೆಡಲಾಯಿತು. ಉಡುಗೊರೆಯಾಗಿ,   ಗೊಬ್ಬರ ಮತ್ತು ಸ್ಪ್ರೆಯರ್ ಮೆಷಿನ್ ಅನ್ನು ನೀಡಲಾಯಿತು. 

ಇದನ್ನೂ ಓದಿ : ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿದೆ ಭರ್ಜರಿ 5 ಜಿ ಸ್ಮಾರ್ಟ್‌ಫೋನ್‌, ವೈಶಿಷ್ಟ್ಯಗಳು ಏನಿರಲಿದೆ ಗೊತ್ತಾ ?

ಈ ವಿಶಿಷ್ಟ ವಿವಾಹದ ಉದ್ದೇಶ 
ಸ್ಥಳೀಯ ಜನರು ಕಳೆದ ಹಲವು ದಿನಗಳಿಂದ ವಿವಾಹವನ್ನು ಯೋಜಿಸುತ್ತಿದ್ದರು. ಈ ನಂಬಿಕೆಯಿಂದ ಕತಿನಾ ನದಿಯ ಪುನರುಜ್ಜೀವನಕ್ಕೆ ಸಹಾಯವಾಗಲಿದೆ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ (CDO) ಅಕ್ಷತ್ ವರ್ಮಾ ಹೇಳಿದ್ದಾರೆ.  ಸ್ಥಳೀಯರು ಈಗ ನದಿಯ ಉದ್ದಕ್ಕೂ ಹಣ್ಣಿನ ಮರಗಳನ್ನು ನೆಡಲು ಯೋಜಿಸುತ್ತಿದ್ದಾರೆ, ಇದು ನದಿಯನ್ನು ಪುನರುಜ್ಜೀವನಗೊಳಿಸುತ್ತದೆ ಎನ್ನುವುದು  ಈ ಜನರ ಧಾರ್ಮಿಕ ನಂಬಿಕೆ ಎಂದವರು ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News