ಸತ್ನಾ: ಸತ್ನಾ ಜಿಲ್ಲೆಯಲ್ಲಿ ನಡೆದ ದರೋಡೆ ಘಟನೆಯ ನಂತರ ಸತ್ನಾ ಎಸ್ಪಿ ಧರಮ್ವೀರ್ ಸಿಂಗ್ ನಗರದ ಎಟಿಎಂ (ATM)ಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ರಾತ್ರಿ 100 ಕ್ಕೂ ಹೆಚ್ಚು ಎಟಿಎಂಗಳನ್ನು ಮುಚ್ಚುವಂತೆ ಎಸ್ಪಿ ನಿರ್ದೇಶನ ನೀಡಿದ್ದಾರೆ. ಏಕೆಂದರೆ ಈ ಎಟಿಎಂ ಯಂತ್ರಗಳು ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದವರು ತಿಳಿಸಿದ್ದಾರೆ.
ಏನಿದು ವಿಷಯ?
ವಾಸ್ತವವಾಗಿ, ಶನಿವಾರ ಮಧ್ಯಪ್ರದೇಶ (Madhya Pradesh)ದ ಸತ್ನಾ ಜಿಲ್ಲೆಯ ಬಿರ್ಸಿಂಗ್ಪುರ ಪಟ್ಟಣದ ಮಧ್ಯಮ ಮಾರುಕಟ್ಟೆಯ ಎಟಿಎಂ ಬೂತ್ನಲ್ಲಿ ಕೆಲವು ವಂಚಕರು 10 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ ಇದುವರೆಗೂ ಸತ್ನಾ ಪೊಲೀಸರಿಗೆ ಅಪರಾಧಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಇದನ್ನೂ ಓದಿ - ಶೀಘ್ರ ಕೊನೆಗೊಳ್ಳಬಹುದು ATM Withdrawal ಮೇಲಿನ ಚಾರ್ಜ್..ಇಲ್ಲಿದೆ ಡೀಟೆಲ್ಸ್
ರಾತ್ರಿ ವೇಳೆ ಎಟಿಎಂ (ATM) ಬಂದ್ :
ಈ ವಿಷಯ ಬೆಳಕಿಗೆ ಬಂದ ಜಿಲ್ಲೆಯಾದ್ಯಂತ ಪರಿಶೀಲನೆ ನಡೆಸಿರುವ ಸತ್ನಾ ಎಸ್ಪಿ ಜಿಲ್ಲೆಯಲ್ಲಿ 178 ಕ್ಕೂ ಹೆಚ್ಚು ಎಟಿಎಂಗಳನ್ನು ನಡೆಸಲಾಗುತ್ತಿದೆ. ಆದರೆ ಹೆಚ್ಚಿನ ಎಟಿಎಂ (ATM) ಯಂತ್ರಗಳ ಬೂತ್ಗಳಲ್ಲಿ ನಿಯಮಗಳನ್ನು ಅನುಸರಿಸುತ್ತಿಲ್ಲ. ಈ ಯಂತ್ರಗಳನ್ನು ರಕ್ಷಿಸಲು ಯಾವುದೇ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿಲ್ಲ ಅಥವಾ ಕಾವಲುಗಾರರನ್ನು ನಿಯೋಜಿಸಲಾಗಿಲ್ಲ. ಇವೆಲ್ಲವನ್ನೂ ತಿಳಿದೇ ವಂಚಕರು ದರೋಡೆ ಮಾಡುತ್ತಾರೆ. ಈ ಕಾರಣದಿಂದಾಗಿ ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವ ಯಂತ್ರಗಳನ್ನು ರಾತ್ರಿ ವೇಳೆ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ - SBI ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ
ಈ ಕೆಳಕಂಡ ವಿಷಯಗಳ ಆಧಾರದ ಮೇಲೆ ರಾತ್ರಿ ವೇಳೆ ಎಟಿಎಂ ಮುಚ್ಚಲು ನಿರ್ಧಾರ :
- ಬ್ಯಾಂಕ್ (Bank) ಎಟಿಎಂ ನಿರ್ವಹಣೆ ನಿಯಮಗಳನ್ನು ಉಲ್ಲಂಘಿಸುತ್ತಿದೆ.
- ಜಿಲ್ಲೆಯ ಹೆಚ್ಚಿನ ಬ್ಯಾಂಕ್ಗಳಲ್ಲಿ ಸೆಕ್ಯುರಿಟಿ ಗಾರ್ಡ್ಗಳನ್ನು ಸಹ ನೇಮಿಸಲಾಗಿಲ್ಲ ಎಂದು ಜಿಲ್ಲೆಯ ಪ್ರಮುಖ ಬ್ಯಾಂಕ್ ವ್ಯವಸ್ಥಾಪಕರು ಒಪ್ಪಿರುತ್ತಾರೆ.
- ಈ ಹಿನ್ನಲೆಯಲ್ಲಿ ಕ್ಯಾಮರಾ ಇಲ್ಲದ ಹಾಗೂ ಸೆಕ್ಯುರಿಟಿ ಗಾರ್ಡ್ಗಳನ್ನು ಸಹ ನೇಮಿಸಿಲ್ಲದ ಎಟಿಎಂಗಳನ್ನು ರಾತ್ರಿಯಲ್ಲಿ ಮುಚ್ಚಲು ನಿರ್ದೇಶನ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.