ಶಸ್ತ್ರಚಿಕಿತ್ಸೆ ಮೂಲಕ ಕೃತಕ ಅಂಗ ಪಡೆಯಲಿರುವ ವಿಶ್ವದ ಮೊದಲ ಹುಲಿ

ಸಾಹೇಬ್ರಾವ್ ಕೃತಕ ಅಂಗವನ್ನು ಪಡೆದ ವಿಶ್ವದ ಮೊದಲ ಹುಲಿ. ಈ ಹಿಂದೆ ಇದನ್ನು ನಾಯಿಗಳು ಮತ್ತು ಆನೆಗಳಿಗೆ ಮಾಡಲಾಗಿದೆ.

Updated: Jan 18, 2020 , 09:45 AM IST
ಶಸ್ತ್ರಚಿಕಿತ್ಸೆ ಮೂಲಕ ಕೃತಕ ಅಂಗ ಪಡೆಯಲಿರುವ ವಿಶ್ವದ ಮೊದಲ ಹುಲಿ

ನಾಗ್ಪುರ: ಶಸ್ತ್ರಚಿಕಿತ್ಸೆ ಮೂಲಕ ಕೃತಕ ಅಂಗ ಪಡೆಯುವ ವಿಧಾನ ಹೊಸತೇನಲ್ಲ. ಆದರೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಹುಲಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಹೌದು, ನಾಗ್ಪುರದಲ್ಲಿ 9 ವರ್ಷದ ಹುಲಿ 'ಸಾಹೇಬ್ರಾವ್' ಅವರಿಗೆ ಈ ರೀತಿಯ ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಅಂಗವನ್ನು ನೀಡಲಾಗುತ್ತಿದೆ. ಇಂದು ಹುಲಿಯ ಎಡಗೈಗೆ ಕೃತಕ ಅಂಗವನ್ನು ಹೊಂದುವಂತೆ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.

ಈ ತಂಡವು ಮೂಳೆ ಶಸ್ತ್ರಚಿಕಿತ್ಸಕ ವೈದ್ಯರಾದ ಡಾ. ಬಾಭುಲ್ಕರ್, ಪಶುವೈದ್ಯ ವೈದ್ಯ ಶಿರೀಶ್ ಉಪಾಧ್ಯಾಯ, ಮಹಾರಾಷ್ಟ್ರ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ (ಮಾಫ್ಸು) ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರದ (ಡಬ್ಲ್ಯುಆರ್‌ಟಿಸಿ) ವೈದ್ಯಕೀಯ ಸಿಬ್ಬಂದಿ, ಐಐಟಿ-ಬಾಂಬೆಯ ತಜ್ಞರು ಮತ್ತು ಲೀಡ್ಸ್ ವಿಶ್ವವಿದ್ಯಾಲಯದ ಡಾ. ಪೀಟರ್ ಜಿಯಾನೌಡಿಸ್ ಅವರನ್ನು ಒಳಗೊಂಡಿದೆ.

.

ಗೋರೆವಾಡಾ ಪಾರುಗಾಣಿಕಾ ಕೇಂದ್ರದಲ್ಲಿ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಭಿವೃದ್ಧಿ ನಿಗಮದ (ಎಫ್‌ಡಿಸಿಎಂ) ಅಧಿಕಾರಿಗಳು ಕೇಂದ್ರದಲ್ಲಿ ಹಾಜರಿರುತ್ತಾರೆ ಎನ್ನಲಾಗಿದೆ.

ಸಾಹೇಬ್ರಾವ್ ಕೃತಕ ಅಂಗವನ್ನು ಪಡೆಯಲಿರುವ ವಿಶ್ವದ ಮೊದಲ ಹುಲಿ. ಈ ಹಿಂದೆ ನಾಯಿಗಳು ಮತ್ತು ಆನೆಗಳಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ನೀಡಲಾಗಿದೆ.

ಚಂದ್ರಪುರ ಜಿಲ್ಲೆಯ ತಡೋಬಾ-ಅಂಧಾರಿ ಟೈಗರ್ ರಿಸರ್ವ್‌ನ ಹೊರಗೆ ಬೇಟೆಗಾರರು ಹಾಕಿದ ಬಲೆಗೆ ಬಿದ್ದ ಸಾಹೇಬ್ರಾವ್ ಏಪ್ರಿಲ್ 26, 2012 ರಂದು ತನ್ನ ಮುಂಗಾಲು(paw) ಕಳೆದು ಕೊಂಡಿದೆ. ಶತಾಯಗತಾಯ ಈ ಹುಲಿಗೆ ಶಸ್ತ್ರಚಿಕಿತ್ಸೆ ನೀಡುವ ಮೂಲಕವಾದರೂ ಕೃತಕ ಅಂಗ ನೀಡಲು ಈ ತಂಡವು ಐಐಟಿ-ಬಾಂಬೆ ಮತ್ತು ವಿದೇಶದ ತಜ್ಞರಲ್ಲದೆ, ಕಳೆದ ಎರಡು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ.