ನವದೆಹಲಿ: ಕೇಂದ್ರ ತನಿಖಾ ದಳದ (CBI) ಅಧಿಕಾರಿಗಳು ಮತ್ತು ನೌಕರರಿಗೆ ಹೊಸ ಡ್ರೆಸ್ ಕೋಡ್ ನಿಗದಿಪಡಿಸಲಾಗಿದೆ. ಇದರ ಅಡಿಯಲ್ಲಿ ಅಧಿಕಾರಿಗಳು-ನೌಕರರು ಕರ್ತವ್ಯದಲ್ಲಿರುವಾಗ ಕ್ಯಾಶುಯಲ್ ಉಡುಗೆ ಧರಿಸುವಂತಿಲ್ಲ. ಈಗ ಸಿಬಿಐ ಸಿಬ್ಬಂದಿಯ ಯಾವುದೇ ಸದಸ್ಯರು ಕರ್ತ್ಯವ್ಯದ ವೇಳೆ ಜೀನ್ಸ್, ಟೀ ಶರ್ಟ್ ಮತ್ತು ಸ್ಪೋರ್ಟ್ಸ್ ಶೂಗಳನ್ನು ಧರಿಸುವಂತಿಲ್ಲ.
ಔಪಚಾರಿಕ ಉಡುಗೆಯಲ್ಲಿ ಸಿಬಿಐನ ಎಲ್ಲಾ ಸಿಬ್ಬಂದಿ :
ಸಿಬಿಐನ ಹೊಸ ಮುಖ್ಯಸ್ಥ ಸುಬೋಧ್ ಕುಮಾರ್ ಜೈಸ್ವಾಲ್ (Subodh Kumar Jaiswal) ಅವರು ಏಜೆನ್ಸಿಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯದಲ್ಲಿರುವಾಗ ಔಪಚಾರಿಕ ಉಡುಗೆಯಲ್ಲಿ (Formal Dress) ಶರ್ಟ್-ಪ್ಯಾಂಟ್ ಮತ್ತು ಔಪಚಾರಿಕ ಬೂಟುಗಳನ್ನಷ್ಟೇ ಧರಿಸಬೇಕು ಎಂದು ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಸರಿಯಾಗಿ ಕ್ಷೌರ ಮಾಡಿದ ನಂತರವೇ ಅವರು ಕಚೇರಿಗೆ ಬರಬೇಕಾಗುತ್ತದೆ. ಅದೇ ಸಮಯದಲ್ಲಿ, ಮಹಿಳಾ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಸೀರೆ, ಸೂಟ್ ಮತ್ತು ಔಪಚಾರಿಕ ಶರ್ಟ್-ಪ್ಯಾಂಟ್ ಧರಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ- RBI Credit Policy: 6ನೇ ಸಲವೂ ಬಡ್ಡಿದರದಲ್ಲಿ ಬದಲಾವಣೆ ಇಲ್ಲ, 2022ರ ವೇಳೆಗೆ ಶೇ. 9.5ರಷ್ಟು GDP ಬೆಳವಣಿಗೆಯ ಮುನ್ಸೂಚನೆ
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಬಿಐನ (CBI) ಎಲ್ಲಾ ಶಾಖೆಗಳ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ವೃತ್ತಿಪರ ತನಿಖಾ ಸಂಸ್ಥೆಯ ಅಧಿಕಾರಿಗಳು-ನೌಕರರು ಕಚೇರಿಯಲ್ಲಿ ಕಡ್ಡಾಯವಾಗಿ ಔಪಚಾರಿಕ ಉಡುಗೆಗಳನ್ನು ಮಾತ್ರ ಧರಿಸಬೇಕು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ- CSIR Society Meeting 2021: CSIR ಸಭೆಯಲ್ಲಿ PM Modi ನೀಡಿದ ಮುನ್ಸೂಚನೆಯ ಎಚ್ಚರಿಕೆ ಏನು?
ಸಿಬಿಐನ 33 ನೇ ನಿರ್ದೇಶಕರಾಗಿ ಸುಬೋಧ್ ಜೈಸ್ವಾಲ್ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಅನುಮೋದಿಸಿತು. ಮೂಲಗಳ ಪ್ರಕಾರ, 1985 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಜೈಸ್ವಾಲ್ ಮುಂದಿನ ದಿನಗಳಲ್ಲಿ ಏಜೆನ್ಸಿಯ ದಕ್ಷತೆ ಮತ್ತು ಅದರ ಇಮೇಜ್ ಅನ್ನು ಸುಧಾರಿಸಲು ಏಜೆನ್ಸಿಯೊಳಗೆ ಕೆಲವು ಪ್ರಮುಖ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.