Happy New Year 2023: ಸಡಗರ-ಸಂಭ್ರಮದಿಂದ ಹೊಸ ವರ್ಷಕ್ಕೆ ಸ್ವಾಗತ ಕೋರಿದ ದೇಶದ ಜನರು!

Happy New Year 2023: ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ & ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಜನರು ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡು ಸಂಭ್ರಮಿಸಿದರು.

Written by - Puttaraj K Alur | Last Updated : Jan 1, 2023, 08:00 AM IST
  • ಸಡಗರ-ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡ ದೇಶದ ಜನತೆ
  • ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಮುಗಿಲು ಮುಟ್ಟಿದ ಸಂಭ್ರಮ
  • 2022ಕ್ಕೆ ಗುಡ್‍ ಬೈ ಹೇಳಿ 2023ರ ಹೊಸ ವರ್ಷಕ್ಕೆ ವೆಲ್‍ಕಮ್ ಹೇಳಿದ ಜನ
Happy New Year 2023: ಸಡಗರ-ಸಂಭ್ರಮದಿಂದ ಹೊಸ ವರ್ಷಕ್ಕೆ ಸ್ವಾಗತ ಕೋರಿದ ದೇಶದ ಜನರು! title=
ಹೊಸ ವರ್ಷದ ಶುಭಾಶಯಗಳು 2023

ನವದೆಹಲಿ: 2023ರ ಹೊಸ ವರ್ಷವು ಅನೇಕ ಭರವಸೆಗಳು ಮತ್ತು ಸಾಧ್ಯತೆಗಳಿಂದ ತುಂಬಿದೆ. ಕಾಶ್ಮೀರದಿಂದ ಕಾನ್ಪುರದವರೆಗೆ ಮತ್ತು ಬೆಂಗಳೂರಿನಿಂದ ದೆಹಲಿವರೆಗೆ ಹೀಗೆ ದೇಶದ ಎಲ್ಲಾ ಭಾಗಗಳಲ್ಲಿಯೂ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಹೊಸ ವರ್ಷಕ್ಕೆ ಸ್ವಾಗತ ಕೋರಲಾಯಿತು. ಭರ್ಜರಿ ಡ್ಯಾನ್ಸ್-ಪಾರ್ಟಿಗಳ ಜೊತೆಗೆ ಹೊಸ ವರ್ಷದ ಸಂಭ್ರಮಾಚರಣೆ   ನಡೆಯಿತು.

 ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮಹಾನಗರಗಳಲ್ಲಿ ಲಕ್ಷಾಂತರ ಜನರು ಕುಣಿದು-ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಸಂಭ್ರಮಾಚರಣೆ ಹಿನ್ನೆಲೆ ಅಹಿತಕರ ಘಟನೆಗಳು ಜರುಗದಂತೆ ಕ್ರಮ ವಹಿಸಿದ್ದ ಖಾಕಿಪಡೆ ವಿವಿಧ ಸ್ಥಳಗಳಲ್ಲಿ ಪೊಲೀಸ್ ತಂಡಗಳನ್ನು ನಿಯೋಜಿಸಿತ್ತು.  

ಇದನ್ನೂ ಓದಿ: Oppose New Year Celebration : ಹೊಸ ವರ್ಷ ಆಚರಣೆ ವಿರೋಧಿಸಿ ರೂಪಾ ಅಯ್ಯರ್, ಬ್ರಹ್ಮಾಂಡ ಗುರೂಜಿಯಿಂದ ಪಾದಯಾತ್ರೆ

2022ಕ್ಕೆ ಗುಡ್‍ ಬೈ ಹೇಳಿ, 2023ರನ್ನು ವೆಲ್‍ಕಮ್ ಮಾಡಿದ ಜನ

ಹೊಸ ವರ್ಷಾಚರಣೆ ಹಿನ್ನೆಲೆ ದೇಶದ ಎಲ್ಲಾ ಗಿರಿಧಾಮಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಿಶೇಷ ಮ್ಯೂಸಿಕ್ ಸಿಸ್ಟಂ, ಕ್ಯಾಂಪ್ ಫೈರ್ ಹಾಗೂ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾಶ್ಮೀರ ಕಣಿವೆ, ಶಿಮ್ಲಾ, ನೈನಿತಾಲ್, ಮಸ್ಸೂರಿಯ ಹೋಟೆಲ್‌ಗಳು ತುಂಬಿ ತುಳುಕಿದ್ದವು. ಹೊಸ ವರ್ಷವನ್ನು ಆಚರಿಸಲು ಲಕ್ಷಾಂತರ ಪ್ರವಾಸಿಗರು ಗೋವಾದಲ್ಲಿ ಮಜಾ ಮಾಡಿದರು. 12 ಗಂಟೆಯ ಬೆಲ್ ಹೊಡೆದ ತಕ್ಷಣ ‘ಹೊಸ ವರ್ಷದ ಶುಭಾಶಯಗಳು 2023’ ಎಂಬ ದೊಡ್ಡ ಶಬ್ದವು ಪ್ರತಿಧ್ವನಿಸಿತು. 2022ಕ್ಕೆ ಗುಡ್ ಬೈ ಹೇಳಿದ ಜನರು 2023ರ ಹೊಸ ವರ್ಷವನ್ನು ಕುಣಿದು ಕುಪ್ಪಳಿಸುವ ಮೂಲಕ ಸ್ವಾಗತಿಸಿದರು. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಪರಸ್ಪರ ಹೊಸ ವರ್ಷದ ಶುಭಾಶಯ ಸಂದೇಶಗಳನ್ನು  ವಿನಿಮಯ ಮಾಡಿಕೊಂಡರು.

ದೆಹಲಿಯಲ್ಲಿ ಹೊಸ ವರ್ಷದ ಸಂಭ್ರಮ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯ್ತು. ಹೊಸ ವರ್ಷವನ್ನು ಸ್ವಾಗತಿಸಲು ಕನ್ನಾಟ್ ಪ್ಲೇಸ್‌ನಲ್ಲಿ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು, ಇವರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹೊಸ ವರ್ಷದ ಆಚರಣೆಗಾಗಿ ಕನ್ನಾಟ್ ಪ್ಲೇಸ್‌ನ ಹೋಟೆಲ್-ರೆಸ್ಟೋರೆಂಟ್‌ಗಳನ್ನು ಅಲಂಕರಿಸಲಾಗಿತ್ತು. ಸಂಜೆಯಿಂದಲೇ ಅಲ್ಲಿ ಜನಸಂದಣಿ ಹೆಚ್ಚಾಗತೊಡಗಿತು. ಟ್ರಾಫಿಕ್ ಪೊಲೀಸರ ಸಲಹೆಗೆ ಕ್ಯಾರೆ ಅನ್ನದ ಜನರು ತಮ್ಮ ವಾಹನಗಳನ್ನು ರಸ್ತೆಯ ಬದಿ ನಿಲ್ಲಿಸಿದ್ದರು. ಅವುಗಳನ್ನು ಪೊಲೀಸರು ತಮ್ಮ ಕ್ರೇನ್‌ಗಳ ಮೂಲಕ ಎತ್ತಾಕಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂದಿತು.  

ಇದನ್ನೂ ಓದಿ: Happy New Year 2023: ಹುಚ್ಚೆದ್ದು ಕುಣಿದು ಹೊಸ ವರ್ಷವನ್ನು ಸ್ವಾಗತಿಸಿದ ಬೆಂಗಳೂರು ಮಂದಿ

ಮುಂಬೈನ ಗೇಟ್‌ವೇ ಆಫ್ ಇಂಡಿಯಾ 

ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಬಳಿ ಅದ್ದೂರಿಯಾಗಿ ಹೊಸ ವರ್ಷಾಚರಣೆ ನಡೆಸಲಾಯಿತು. ಗೇಟ್‌ವೇ ಆಫರ್ ಇಂಡಿಯಾ ಬಳಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. 12 ಗಂಟೆಯ ಬೆಲ್ ಬಾರಿಸಿದ ತಕ್ಷಣವೇ ಜನರ ಹರ್ಷೋದ್ಗಾರ ಮುಗಿಲುಮುಟ್ಟಿತು. ಹೊಸ ವರ್ಷಾಚರಣೆ ನಂತರ ಜನರು ಮನೆಗೆ ತೆರಳಲು ಮುಂಬೈನಲ್ಲಿ ತಡರಾತ್ರಿಯವರೆಗೆ ಸ್ಥಳೀಯ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರಿನಲ್ಲಿ ಅದ್ದೂರಿ ಹೊಸ ವರ್ಷಾಚರಣೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಹೊಸ ವರ್ಷಾರಣೆ ನಡೆಯಿತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರ, ಜಯನಗರ, ಇಂದಿರಾನಗರ, ಕೋರಮಂಗಲ, ಮಾರತ್ತಹಳ್ಳಿ, ಹಲಸೂರು, ಕಾಡುಗೋಡಿ, ವೈಟ್‌ ಫೀಲ್ಡ್‌ ಹಾಗೂ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಜನರು ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡು ಸಂಭ್ರಮಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News