ಈಗ ಇಂಟರ್ನೆಟ್ ಇಲ್ಲದೆ ಡಿಜಿಟಲ್ ವಹಿವಾಟು, ಪ್ರಾರಂಭವಾಗಿದೆ ಹೊಸ ವೈಶಿಷ್ಟ್ಯ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಆಫ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡುವ ಸೌಲಭ್ಯವನ್ನು ಜಾರಿಗೆ ತಂದಿದೆ. 

Updated: Aug 10, 2020 , 07:30 AM IST
ಈಗ ಇಂಟರ್ನೆಟ್ ಇಲ್ಲದೆ ಡಿಜಿಟಲ್ ವಹಿವಾಟು, ಪ್ರಾರಂಭವಾಗಿದೆ ಹೊಸ ವೈಶಿಷ್ಟ್ಯ

ನವದೆಹಲಿ: ನಾವು ಅನೇಕ ಬಾರಿ ಡಿಜಿಟಲ್ ವಹಿವಾಟು ನಡೆಸುವಾಗ ಇಂಟರ್ನೆಟ್ (Internet) ಸಂಪರ್ಕ ಸರಿಯಾಗಿ ಸಿಗದೆ ನಮ್ಮ ಪಾವತಿ ಸಿಲುಕಿಕೊಳ್ಳುತ್ತದೆ ಅಥವಾ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಜನರು ಅನೇಕ ಬಾರಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇಂದಿನಿಂದ ನೀವು ಡಿಜಿಟಲ್ ಪಾವತಿ (Digital Payment) ವೇಳೆ ಇಂಟರ್ನೆಟ್ ಸಂಪರ್ಕದ ಬಗ್ಗೆ ಚಿಂತಿಸಬೇಕಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಈ ಸಮಸ್ಯೆಯನ್ನು ಪರಿಹರಿಸಿದೆ.

200 ರೂಪಾಯಿಗಳವರೆಗೆ ವಹಿವಾಟು ನಡೆಸಿ:
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಈಗ ಪಾವತಿಗಳನ್ನು ಆಫ್‌ಲೈನ್‌ನಲ್ಲಿ ಮಾಡುವ ಸೌಲಭ್ಯವನ್ನು ಜಾರಿಗೆ ತಂದಿದೆ. ಅಂದರೆ ಇಂಟರ್ನೆಟ್ ಇಲ್ಲದೆ ನೀವು ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಈ ಸೌಲಭ್ಯದ ಅಡಿಯಲ್ಲಿ ಗ್ರಾಹಕರು ಇಂಟರ್ನೆಟ್ ಇಲ್ಲದೆ ಸಣ್ಣ ಪಾವತಿಗಳನ್ನು ಮಾಡಬಹುದು. ಈ ಸೌಲಭ್ಯದಲ್ಲಿ ಗ್ರಾಹಕರು ಒಂದು ಸಮಯದಲ್ಲಿ 200 ರೂಪಾಯಿವರೆಗೆ ಪಾವತಿಸಬಹುದು. 

ಈ ದೇಶದಲ್ಲಿ ಡಿಜಿಟಲ್ ಪಾವತಿ ಸಿಸ್ಟಮ್ ಆರಂಭಿಸಿದ WhatsApp

ಹೆಚ್ಚಾಗಲಿದೆ ಡಿಜಿಟಲ್ ವಹಿವಾಟು:
ಇಂದಿಗೂ ಇಂಟರ್ನೆಟ್ ಸಂಪರ್ಕ ಕಡಿಮೆ ಇರುವ ಅನೇಕ ಸ್ಥಳಗಳಿವೆ ಮತ್ತು ಇದರಿಂದಾಗಿ ಗ್ರಾಹಕರು ಆನ್‌ಲೈನ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ದೇಶಾದ್ಯಂತ ಡಿಜಿಟಲ್ ವಹಿವಾಟು ನಡೆಸಲು ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

ಪರಿಶೀಲನೆ ಇಲ್ಲದೆ ಪಾವತಿಸಿ:
ಕೇಂದ್ರ ಬ್ಯಾಂಕ್ ನೀಡಿದ ಅಧಿಸೂಚನೆಯ ಪ್ರಕಾರ ಪ್ರಾಯೋಗಿಕ ಯೋಜನೆಯಡಿ, ಗ್ರಾಹಕರು ಕಾರ್ಡ್, ಮೊಬೈಲ್ ವ್ಯಾಲೆಟ್ ಅಥವಾ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಿಂದ ಹಣವನ್ನು ವರ್ಗಾಯಿಸಬಹುದು. ಇದಕ್ಕಾಗಿ ಯಾವುದೇ ಪರಿಶೀಲನೆ ಅಗತ್ಯವಿಲ್ಲ.

2021ರ ಮಾರ್ಚ್ 31 ರವರೆಗೆ ನಡೆಯಲಿದೆ ಪ್ರಾಯೋಗಿಕ ಯೋಜನೆ:
ಪರಿಶೀಲನೆ ಇಲ್ಲದೆ ಈ ಸಮಯದಲ್ಲಿ ಗ್ರಾಹಕರು ಗರಿಷ್ಠ 200 ರೂಪಾಯಿಗಳವರೆಗೆ ಪಾವತಿಸಬಹುದು. ಆದರೆ ಮುಂಬರುವ ಸಮಯದಲ್ಲಿ ಈ ಮೊತ್ತವನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪ್ರಾಯೋಗಿಕ ಯೋಜನೆ ಮಾರ್ಚ್ 31, 2021 ರವರೆಗೆ ನಡೆಯುತ್ತದೆ. ಇದರ ನಂತರ ಆರ್‌ಬಿಐ ಹೆಚ್ಚಿನ ವಿವರಗಳನ್ನು ತಿಳಿಸಲಿದೆ.

ಇಂದಿಗೂ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲ, ಇದರಿಂದಾಗಿ ಡಿಜಿಟಲ್ ಪಾವತಿಗೂ ತೊಂದರೆಯಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಕಾರ್ಡ್, ವ್ಯಾಲೆಟ್ ಮತ್ತು ಮೊಬೈಲ್ ಸಾಧನಗಳ ಮೂಲಕ ಆಫ್‌ಲೈನ್ ಪಾವತಿ ಆಯ್ಕೆ ಲಭ್ಯವಾಗುವ ವೈಶಿಷ್ಟ್ಯ ಪರಿಚಯಿಸಲು ಇದು ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.