ಯುದ್ಧ ಸಾಮಗ್ರಿಗಳ ಆಮದಿನಲ್ಲಿ ಭಾರತಕ್ಕೆ ಅಗ್ರಸ್ಥಾನ!

      

Last Updated : Mar 13, 2018, 01:08 PM IST
ಯುದ್ಧ ಸಾಮಗ್ರಿಗಳ ಆಮದಿನಲ್ಲಿ ಭಾರತಕ್ಕೆ ಅಗ್ರಸ್ಥಾನ!  title=

ನವದೆಹಲಿ: ಸ್ಟಾಕ್ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಐಪಿಆರ್ಐ) ಹೊಸ ವರದಿಯ  ಪ್ರಕಾರ ಭಾರತ ದೇಶವು 2013-17ರ ಅವಧಿಯಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದು ಪ್ರಮಾಣದಲ್ಲಿ ಭಾರತದ ಪಾಲು ಶೇ 12 ರಷ್ಟು ಇದೆ ಎಂದು ಈ ವರದಿ ತಿಳಿಸಿದೆ.2008-12 ಮತ್ತು 2013-17ರಲ್ಲಿ ಭಾರತದ ಶಸ್ತ್ರ ಆಮದಿನಲ್ಲಿ  ಶೇ 24 ರಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯನ ಹೇಳಿದೆ. ಅದರಲ್ಲಿ  ಭಾರತವು ರಷ್ಯಾದಿಂದ ಶೇ 62% ರಷ್ಟು ಯುದ್ದಸಾಮಗ್ರಿಗಳನ್ನು ಆಮದು ಮಾಡಿಕೊಂಡಿದೆ.

ಅಲ್ಲದೆ 2013-17ರ ಅವಧಿಯಲ್ಲಿ ಅಮೇರಿಕಾದೊಂದಿಗಿನ ಶಸ್ತ್ರಾಸ್ತ್ರ ಆಮದು 557 ರಷ್ಟು ಏರಿಕೆಯಾಗಿದೆ, ಆ ಮೂಲಕ ರಷ್ಯಾ ನಂತರ ಭಾರತಕ್ಕೆ ಅತಿಹೆಚ್ಚು ಯುದ್ದ ಸಾಮಗ್ರಿ ಪೂರೈಸುವ ಎರಡನೆಯ ರಾಷ್ಟ್ರ ಎನ್ನುವ ಖ್ಯಾತಿ ಪಡೆದಿದೆ.

Trending News