ನವದೆಹಲಿ: ಆಧಾರ್ ಇಂಡಿಯನ್ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ನೀಲಿ ಬಣ್ಣ 'ಬಾಲ್ ಆಧಾರ್' ಕಾರ್ಡ್ಗಳನ್ನು ಪರಿಚಯಿಸಿದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಅನ್ನು ಯಾವುದೇ ಬಯೋಮೆಟ್ರಿಕ್ ವಿವರಗಳಿಲ್ಲದೆ ಪಡೆಯಬಹುದು. ಆದರೆ ಅವರು ಐದು ವರ್ಷ ಪೂರೈಸಿದ ನಂತರ ಕೆಲವು ಪರಿಶೀಲನಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಡ್ಡಾಯ ಎಂದು ಯುಐಡಿಎಐ ತಿಳಿಸಿದೆ.
ಯುಐಡಿಎಐ ಈ ರೀತಿ ಟ್ವೀಟ್ ಮಾಡಿದೆ:
A child below 5 years of age gets a blue in coloured Aadhaar known as Baal Aadhaar. When the child becomes 5 yr old, a mandatory biometric update is required. #AadhaarForMyChild pic.twitter.com/5IBZRuo7Tr
— Aadhaar (@UIDAI) February 23, 2018
ಮಗುವಿನ ಬಯೋಮೆಟ್ರಿಕ್ ಆಧಾರ್ ಡೇಟಾವನ್ನು ಮತ್ತೆ 15 ವರ್ಷಗಳ ವಯಸ್ಸಿನಲ್ಲಿ ನವೀಕರಿಸಬೇಕು ಎಂದು ಯುಐಡಿಎಐ ಹೇಳಿದೆ. ಮಕ್ಕಳಿಗೆ ಈ ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ ಉಚಿತ ಎಂದೂ ಸಹ ತಿಳಿಸಿದೆ.
ಆಧಾರ್ ಗೆ ಮಕ್ಕಳನ್ನು ಸೇರಿಸುವುದು ಹೇಗೆ?
- 1 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಬಹುದು.
- ಆದರೆ ಬೆರಳಚ್ಚು ಮುದ್ರಿತ ಸೇರಿದಂತೆ ಬಯೊಮಿಟ್ರಿಕ್ಸ್ ಡೇಟಾ ಅವರು 5 ನೇ ವಯಸ್ಸನ್ನು ತಲುಪುವವರೆಗೆ ನೋಂದಾಯಿಸಬೇಕಾಗಿಲ್ಲ, ಏಕೆಂದರೆ ಇದು ಆಗಾಗ್ಗೆ ಬದಲಾಗುತ್ತಿರುತ್ತದೆ.
- 5 ವರ್ಷದ ಕೆಳಗಿನ ಮಕ್ಕಳಿಗೆ, ಪೋಷಕರ ಆಧಾರ್ ಕಾರ್ಡ್ ವಿವರಗಳನ್ನು ಲಿಂಕ್ ಮಾಡಲಾಗುತ್ತದೆ.
- ಅವರು ಐದು ವರ್ಷ ಪೂರೈಸಿದ ನಂತರ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಅವರು 15 ವರ್ಷಕ್ಕೆ ತಿರುಗಿದಾಗ ಅದನ್ನು ಮತ್ತೊಮ್ಮೆ ಸಂಗ್ರಹಿಸಲಾಗುವುದು.