ನವದೆಹಲಿ: Omicron's Community Spread - ದೇಶದಲ್ಲಿ ಕೊರೊನಾ (Covid-19) ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ, ಕೆಲವು ರಾಜ್ಯಗಳಲ್ಲಿ ಈ ವೇಗ ಕಡಿಮೆಯಾಗಿದ್ದರೂ ಕೂಡ ದಕ್ಷಿಣದ ರಾಜ್ಯಗಳಲ್ಲಿ, ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ, ಈ ಮಧ್ಯೆ ದೇಶದಲ್ಲಿ ಕರೋನಾ ಸ್ಥಿತಿಯ ಕುರಿತು ಇತ್ತೀಚಿನ ಅಪ್ಡೇಟ್ ಪ್ರಕಟಗೊಂಡಿದೆ. ಅದರ ಪ್ರಕಾರ ಈಗ Omicron ನ ಸಮುದಾಯ ಹರಡುವಿಕೆ ಭಾರತದಲ್ಲಿ ನಡೆಯುತ್ತಿದೆ ಎನ್ನಲಾಗಿದೆ
ಆರೋಗ್ಯ ಸಚಿವಾಲಯದ ಸಂಸ್ಥೆಯಾದ INSACOG ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ಕರೋನಾ ಹೊಸ ರೂಪಾಂತರ ಓಮಿಕ್ರಾನ್ ಭಾರತದಲ್ಲಿ ಸಮುದಾಯ ಹರಡುವ ಹಂತದಲ್ಲಿದೆ ಮತ್ತು ಹೊಸ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಅನೇಕ ಮೆಟ್ರೋಗಳಲ್ಲಿ ಅದು ವೇಗವಾಗಿ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.
Omicron ಈಗ ಭಾರತದಲ್ಲಿ ತನ್ನ ಸಮುದಾಯವನ್ನು ಹರಡುತ್ತಿದೆ ಎಂದು INSACOG ವರದಿ ಮಾಡಿದೆ. INSACOG ಅನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ಗಮನಾರ್ಹ.
Omicron is now in community transmission stage in India and has become dominant in multiple metros: INSACOG pic.twitter.com/AURS2eu66R
— ANI (@ANI) January 23, 2022
ಇದನ್ನೂ ಓದಿ-India Post: ಜಬರ್ದಸ್ತ್ ರಿಟರ್ನ್ ಸಂಪಾದಿಸಲು ಅಂಚೆ ಕಚೇರಿಯ ಈ ನಾಲ್ಕು ಯೋಜನೆಗಳಲ್ಲಿ ಹಣ ಹೂಡಿಕೆ ಉತ್ತಮ
ದೇಶಾದ್ಯಂತ ಮತ್ತೊಮ್ಮೆ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆ
ಕಳೆದ ಒಂದು ದಿನದಲ್ಲಿ, ಮತ್ತೊಮ್ಮೆ ದೇಶಾದ್ಯಂತ 3 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ, ಇದೆ ಅವಧಿಯಲ್ಲಿ 525 ಜನರು ಈ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ-NFBS: ಈ ಸ್ಕೀಮ್ ಅಡಿ ನಿಮಗೆ ಉಚಿತವಾಗಿ ಸಿಗುತ್ತೆ 30,000 ರೂ.ಗಳ ಲಾಭ
ಕೊವಿಡ್ ನಿಂದ ಚೇತರಿಸಿಕೊಂಡ ರೋಗಿಗಳ ದರ ಶೇ.93.18ರಷ್ಟಿದೆ
ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,33,533 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆ ಹಿಂದಿನ ದಿನಕ್ಕಿಂತ 4,171ರಷ್ಟು ಕಡಿಮೆಯಾಗಿದೆ, ಆದರೆ ಇನ್ನೂ ಆತಂಕಕಾರಿ ಮಟ್ಟದಲ್ಲಿ ಉಳಿದಿದೆ. ಅದೇ ಅವಧಿಯಲ್ಲಿ, ಕೋವಿಡ್ -19 ಸೋಂಕಿಗೆ ಒಳಗಾದ 525 ರೋಗಿಗಳು ಪ್ರಾಣ ಕಳೆದುಕೊಂಡಿದ್ದರೆ, 2,59,168 ರೋಗಿಗಳು ಈ ಮಾರಣಾಂತಿಕ ಸಾಂಕ್ರಾಮಿಕ ಕಾಯಿಲೆಯಿಂದ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ-Benefits Of Ghee-Coffee: ತುಪ್ಪ ಬೆರೆಸಿದ ಕಾಫಿ ಸೇವನೆಯಿಂದ ನಿಮ್ಮ ದಿನ ಆರಂಭಿಸಿ, ಸಿಗಲಿವೆ ಹಲವು ಲಾಭಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.