close

News WrapGet Handpicked Stories from our editors directly to your mailbox

J&K: ಕಂದಕಕ್ಕೆ ಉರುಳಿದ ಐಟಿಬಿಟಿ ಬಸ್; ಓರ್ವ ಸಾವು, 34 ಮಂದಿಗೆ ಗಾಯ

ರಾಮಬನ ಜಿಲ್ಲೆಯ ಖುನಿ ನಲ್ಲಾ ಎಂಬಲ್ಲಿ ಸೋಮವಾರ ಬೆಳಿಗ್ಗೆ 8.45ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Updated: Dec 24, 2018 , 12:53 PM IST
J&K: ಕಂದಕಕ್ಕೆ ಉರುಳಿದ ಐಟಿಬಿಟಿ ಬಸ್; ಓರ್ವ ಸಾವು, 34 ಮಂದಿಗೆ ಗಾಯ
Pic Courtesy: ANI

ನವದೆಹಲಿ: ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಸಿಬ್ಬಂದಿಗಳಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 34 ಮಂದಿ ಗಾಯಗೊಂಡಿದ್ದಾರೆ. 

ರಾಮಬನ ಜಿಲ್ಲೆಯ ಖುನಿ ನಲ್ಲಾ ಎಂಬಲ್ಲಿ ಸೋಮವಾರ ಬೆಳಿಗ್ಗೆ 8.45ರ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂದಕಕ್ಕೆ ಬಸ್ ಬೀಳುವಾಗ ಮರವೊಂದು ಅಡ್ಡವಾದ್ದರಿಂದ ಹೆಚ್ಚಿನ ಅಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇನೆ, ಪೊಲೀಸ್ ಮತ್ತು ಇತರ ಸಿಬ್ಬಂದಿಯನ್ನೊಳಗೊಂಡ ಬಸ್ ಜಮ್ಮು ಕಡೆಗೆ ಚಲಿಸುತ್ತಿತ್ತು. ಆದರೆ, ಆಯತಪ್ಪಿ ಖೂನಿ ನಲ್ಲಾ ಸಮೀಪದಲ್ಲಿ ಆಳವಾದ ಕಂದಕಕ್ಕೆ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ಸ್ಥಳೀಯ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಕೆಲವರನ್ನು ರಾಮಬನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಜಮ್ಮುಗೆ ರವಾನೆ ಮಾಡಲಾಗಿದೆ ಎಂದು ರಾಮಬನ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.