Coronavirus: ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ರೋಗಿಗಳಿಗೆ ನೆಮ್ಮದಿಯ ಸುದ್ದಿ ನೀಡಿದ CBDT

Hospital Bill Payment - ಕರೋನಾ ಅವಧಿಯಲ್ಲಿ, ಹಲವು ಆಸ್ಪತ್ರೆಗಳು ಕರೋನಾ ಚಿಕಿತ್ಸೆಗಾಗಿ ಬಂದ ರೋಗಿಗಳಿಂದ ನಗದು ಪಾವತಿಸುವಂತೆ ಒತ್ತಾಯಿಸುತ್ತಿವೆ. ಈ ಕಾರಣದಿಂದಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಕಾಯ್ದೆಯ ಈ ಸೆಕ್ಷನ್ ನಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಜನರ ಪ್ರಾಣ ಉಳಿಸುವುದೇ ನಮ್ಮ ಆದ್ಯತೆ ಎಂದು ಸರ್ಕಾರ ಹೇಳಿದೆ.

Written by - Nitin Tabib | Last Updated : May 12, 2021, 06:06 PM IST
  • ರೂ.2 ಲಕ್ಷವರೆಗಿನ ಆಸ್ಪತ್ರೆಯ ಬಿಲ್ ನಗದು ರೂಪದಲ್ಲಿ ಪಾವತಿಸಬಹುದು.
  • ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ST ನಿಬಂಧನೆಗಳಿಂದ ನೆಮ್ಮದಿ ನೀಡಿದ ಇಲಾಖೆ
  • ಅದಕ್ಕಿಂತ ಹೆಚ್ಚಿನ ಹಣ ನಗದು ಪಾವತಿಸಲು ಈ ದಾಖಲೆಗಳನ್ನು ನೀಡಬೇಕು.
Coronavirus: ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ರೋಗಿಗಳಿಗೆ ನೆಮ್ಮದಿಯ ಸುದ್ದಿ ನೀಡಿದ CBDT title=
Hospital Bill Payment (File Photo)

ನವದೆಹಲಿ:  Hospital Bill Payment - ಕೊರೊನಾ (Coronavirus) ಕಾಲದಲ್ಲಿ ಒಂದು ವೇಳೆ ನೀವೂ ಕೂಡ ಆಸ್ಪತ್ರೆಯ ಬಿಲ್ ಕ್ಯಾಶ್ ಪೇಮೆಂಟ್ (Cash Payment) ಮೂಲಕ ಮಾಡುತ್ತಿದ್ದರೆ. ಈ ಸುದ್ದಿ ನೀವು ತಪ್ಪದೆ ಓದಬೇಕು. ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಆದಾಯ ತೆರಿಗೆ ಇಲಾಖೆ (Income Tax Department), ಇದೀಗ ಎರಡು ಲಕ್ಷ ರೂ.ಗಳವರೆಗಿನ ಆಸ್ಪತ್ರೆಯ ಬಿಲ್ ಅನ್ನು ನೀವು ನಗದು ರೂಪದಲ್ಲಿ ಪಾವತಿಸಬಹುದು ಎಂದು ಹೇಳಿದೆ. ಆದರೆ, ಇದಕ್ಕಿಂತ ಹೆಚ್ಚಿನ ಬಿಲ್ (Hospital Bill)ಪಾವತಿಸಲು ನೀವು ಕೆಲ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗಿದೆ.

ಇದನ್ನೂ ಓದಿ-Bankನ ಈ SMS ಅಪ್ಪಿ-ತಪ್ಪಿಯೂ ಕೂಡ IGNORE ಮಾಡ್ಬೇಡಿ, ಇಲ್ದಿದ್ರೆ ಬೀಳುತ್ತೆ 1000 ರೂ. ದಂಡ

ಈ ದಾಖಲೆಗಳು ನೀಡಬೇಕು
ಇದಕ್ಕೆ ಸಂಬಂಧಿಸದಂತೆ ಟ್ವೀಟ್ ಮಾಡಿರುವ IT DEPARTMENT, 'CBDT ಮಹಾಮಾರಿಯ ಕಾಲದಲ್ಲಿ ರೋಗಿಗಳಿಗೆ ಸೌಕರ್ಯ ಒದಗಿಸುವ ಕೆಲಸ ಮಾಡಿದೆ. ಹೀಗಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269ST ನಿಬಂಧನೆಗಳಿಂದ ವಿನಾಯ್ತಿ ನೀಡುತ್ತ, ಕೊವಿಡ್-19 ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ 2 ಲಕ್ಷ ರೂ.ವರೆಗಿನ ಆಸ್ಪತ್ರೆಯ ಬಿಲ್ ಅನ್ನು ನಗದು ಪಾವತಿಸಲು ಅನುಮತಿ ನೀಡಿದೆ. ಆದ್ರೆ, ಇದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಲು ರೋಗಿಗಳು ತಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಬೇಕು ' ಎಂದು ಹೇಳಿದೆ.

ಇದನ್ನೂ ಓದಿ- LPG Subsidy ಬರುತ್ತಿಲ್ಲವೇ? ಸಬ್ಸಿಡಿ ಪಡೆಯಲು ಇದು ಸುಲಭ ಮಾರ್ಗ

ಮೇ 31ರವರೆಗೆ ಕ್ಯಾಶ್ ಪೇಮೆಂಟ್ ಮಾಡಬಹುದು
ಇತ್ತೀಚೆಗಷ್ಟೇ ಕೇಂದ್ರ ನೇರ ತೆರಿಗೆ ಮಂಡಳಿ (CBDT) ಕಳೆದ ವಾರವಷ್ಟೇ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಹಾಗೂ ಕೊವಿಡ್ ಕೇರ್ ಸೆಂಟರ್ ಗಳಿಗೆ ರೋಗಿಗಳಿಂದ ಅಥವಾ ಅವರ ಸಂಬಂಧಿಕರಿಂದ ಮೇ 31ರವರೆಗೆ ರೂ.2 ಲಕ್ಷ ರೂ.ಗಳವರೆಗಿನ ಬಿಲ್ ಅನ್ನು ನಗದು ರೂಪದಲ್ಲಿ ಸ್ವೀಕರಿಸುವ ಅನುಮತಿ ನೀಡಿತ್ತು. ಇದಕ್ಕಾಗಿ ಆಸ್ಪತ್ರೆಗಳು ರೋಗಿಗಳ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಸಂಕ್ಯೆಯನ್ನು ಪಡೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದೆ. ಜೊತೆಗೆ ರೋಗಿ ಹಾಗೂ ಅವರ ಬಿಲ್ ಪಾವತಿಸುವವರ ನಡುವಿನ ಸಂಬಂಧದ ಮಾಹಿತಿ ಕೂಡ ಪಡೆಯಬೇಕು ಎಂದು ಹೇಳಿತ್ತು.

ಇದನ್ನೂ ಓದಿ-DDP Mandatory: ಹೂಡಿಕೆದಾರರಿಗೊಂದು ಸಂತಸದ ಸುದ್ದಿ, ತನ್ನ ಈ ನಿಯಮದಲ್ಲಿ ಬದಲಾವಣೆ ತಂದ SEBI

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News