Trending Video: ವಧುವಿಗೆ ಮಾಲೆ ಹಾಕುತ್ತಿದ್ದಂತೆ ಸಿಡಿದ ಪಟಾಕಿ: ಸೌಂಡ್ ಕೇಳಿ ಭಯಗೊಂಡ ವರ ಮಂಟಪದಲ್ಲಿ ಏನು ಮಾಡಿದ ನೋಡಿ

Trending Video: ಮದುವೆ ಮನೆಯಲ್ಲಿ ನಡೆಯುವ ಮೋಜು ಮಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ವರನ ಕಡೆಯವರು ಮೋಜು ಮಾಡುತ್ತಾರೆ. ಮತ್ತೊಮ್ಮೆ ವಧುವಿನ ಕಡೆಯವರು ತಮಾಷೆ ಮಾಡುತ್ತಾರೆ. ಇನ್ನೂ ಕೆಲವರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೂಲೆಯಲ್ಲಿ ಕುಳಿತಿರುತ್ತಾರೆ. ಇಂದು ನಾವು ಹೇಳಹೊರಟಿರುವ ವಿಡಿಯೋವನ್ನು ನೋಡಿದರೆ ನಿಮಗೂ ನಗು ತಡೆಯಲು ಸಾಧ್ಯವಿಲ್ಲ.

Written by - Bhavishya Shetty | Last Updated : Feb 25, 2023, 04:11 PM IST
    • ಮದುವೆಯ ಸೀಸನ್ ಶುರುವಾದ ತಕ್ಷಣ ಸಾವಿರಾರು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ.
    • ಕೆಲವು ವೀಡಿಯೊಗಳು ಮನಸ್ಸಿಗೆ ಮುದ ನೀಡುತ್ತವೆ, ಇನ್ನೂ ಕೆಲವು ವೀಡಿಯೊಗಳು ಭಾವನಾತ್ಮಕವಾಗಿರುತ್ತವೆ.
    • ಎಷ್ಟೋ ಸಂದರ್ಭಗಳಲ್ಲಿ ವಧು-ವರರ ನಡೆ ನಗು ತರಿಸಿದರೆ ಇನ್ನು ಕೆಲವೆಡೆ ಸಂಬಂಧಿಕರ ನಡೆ ಕೋಪ ತರಿಸುತ್ತದೆ.
Trending Video: ವಧುವಿಗೆ ಮಾಲೆ ಹಾಕುತ್ತಿದ್ದಂತೆ ಸಿಡಿದ ಪಟಾಕಿ: ಸೌಂಡ್ ಕೇಳಿ ಭಯಗೊಂಡ ವರ ಮಂಟಪದಲ್ಲಿ ಏನು ಮಾಡಿದ ನೋಡಿ title=
Wedding Video

Trending Video: ಮದುವೆಯ ಸೀಸನ್ ಶುರುವಾದ ತಕ್ಷಣ ಸಾವಿರಾರು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಕೆಲವು ವೀಡಿಯೊಗಳು ಮನಸ್ಸಿಗೆ ಮುದ ನೀಡುತ್ತವೆ, ಇನ್ನೂ ಕೆಲವು ವೀಡಿಯೊಗಳು ಭಾವನಾತ್ಮಕವಾಗಿರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ವಧು-ವರರ ನಡೆ ನಗು ತರಿಸಿದರೆ ಇನ್ನು ಕೆಲವೆಡೆ ಸಂಬಂಧಿಕರ ನಡೆ ಕೋಪ ತರಿಸುತ್ತದೆ.

ಇದನ್ನೂ ಓದಿ: Business Tips: ಈ ಹುಲ್ಲಿನಿಂದ ರಾತ್ರೋರಾತ್ರಿ ಲಕ್ಷಾಧಿಪತಿಯಾಗಬಹುದು: ಈ ಕೃಷಿಗೆ ಬೇಕಾಗಿರುವುದು ಇದು ಮಾತ್ರ!

ಮದುವೆ ಮನೆಯಲ್ಲಿ ನಡೆಯುವ ಮೋಜು ಮಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ವರನ ಕಡೆಯವರು ಮೋಜು ಮಾಡುತ್ತಾರೆ. ಮತ್ತೊಮ್ಮೆ ವಧುವಿನ ಕಡೆಯವರು ತಮಾಷೆ ಮಾಡುತ್ತಾರೆ. ಇನ್ನೂ ಕೆಲವರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೂಲೆಯಲ್ಲಿ ಕುಳಿತಿರುತ್ತಾರೆ. ಇಂದು ನಾವು ಹೇಳಹೊರಟಿರುವ ವಿಡಿಯೋವನ್ನು ನೋಡಿದರೆ ನಿಮಗೂ ನಗು ತಡೆಯಲು ಸಾಧ್ಯವಿಲ್ಲ.

ಈ ವೀಡಿಯೋದಲ್ಲಿ ವರ ವರಮಾಲಾ ಸಮಯದಲ್ಲಿ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನೋಡಿ ಜನ ನಕ್ಕು ಬಿಟ್ಟಿದ್ದಾರೆ. ವರ ಹೀಗೆಲ್ಲ ಮಾಡುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಆದರೆ ಈ ವಿಡಿಯೋ ನೋಡಿ ಜನ ನಗುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by JIYA MEENA (@jiya_9017)

 

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವು ಬಹಳ ವೇಗವಾಗಿ ವೈರಲ್ ಆಗುತ್ತಿದೆ. ವೀಡಿಯೋ ವರಮಾಲಾ ಸಮಾರಂಭದದ್ದು. ವೇದಿಕೆಯಲ್ಲಿ ಎಲ್ಲಾ ಜನರು ಹಾಜರಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ವಧು-ವರರು ವರಮಾಲ ಸಮಾರಂಭಕ್ಕೆ ಸಿದ್ಧರಾಗಿ ನಿಂತಿದ್ದಾರೆ. ವಧು ಈಗಾಗಲೇ ವರನಿಗೆ ಹಾರವನ್ನು ಹಾಕಿದ್ದಾಳೆ. ಆದರೆ ವರನ ಸರದಿ ಬಂದಾಗ ಪಕ್ಕದಲ್ಲೇ ಇದ್ದ ಪಾರ್ಟಿ ಪಾಪ್ಪರ್ ಸಿಡಿಸುತ್ತಾರೆ. ಪಾರ್ಟಿ ಪಾಪ್ಪರ್ ಸಿಡಿಯುತ್ತಿದ್ದಂತೆ ವರನು ಸಂಪೂರ್ಣವಾಗಿ ಆಘಾತಕ್ಕೊಳಗಾಗುತ್ತಾನೆ. ಅಷ್ಟೇ ಅಲ್ಲದೆ ಕೆಳಗೆ ಬೀಳುವುದು ಕೂಡ ಜಸ್ಟ್ ಮಿಸ್. ಇದನ್ನು ನೋಡಿ ಅಲ್ಲಿದ್ದವರು ನಗುತ್ತಾರೆ.

ಇದರಿಂದ ಕೋಪಗೊಂಡ ವರನು ಹಿಂತಿರುಗಿ ಪಾರ್ಟಿ ಪಾಪ್ಪರ್‌’ಗೆ ಏನೋ ಕೆಟ್ಟದಾಗಿ ಹೇಳುತ್ತಿರುವುದು ಕಂಡುಬರುತ್ತದೆ. ವಿಡಿಯೋದಲ್ಲಿ ವರನನ್ನು ನೋಡಿದರೇ ಗನ್ ಸದ್ದು ಕೇಳಿ ಭಯ ಪಟ್ಟಂತೆ ಕಾಣುತ್ತದೆ. ಅದೇ ಸಮಯಕ್ಕೆ ವರನ ಪ್ರತಿಕ್ರಿಯೆ ನೋಡಿ ಅಲ್ಲಿದ್ದವರೆಲ್ಲ ಜೋರಾಗಿ ನಗಲು ಶುರುಮಾಡುತ್ತಾರೆ.

ಇದನ್ನೂ ಓದಿ: Harmanpreet Kaur: ಸೆಮೀಸ್’ನಲ್ಲಿ ಶಾಕಿಂಗ್ ರನೌಟ್: ಕೋಪಗೊಂಡ ಹರ್ಮನ್ ಮೈದಾನದಲ್ಲೇ ಈ ರೀತಿ ಮಾಡಿಯೇಬಿಟ್ರು!

ಜನರು ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, ಕೋಟಿಗಟ್ಟಲೆ ಜನ ವೀಕ್ಷಿಸಿದ್ದಾರೆ. “ಹನಿಮೂನ್‌ನ ರಾತ್ರಿ ಶರ್ಮಾ ಅವರ ನೆರೆಹೊರೆಯವರ ಮನೆಯಲ್ಲಿ ಅಡಗಿಕೊಂಡ ಹುಡುಗ ಇವನೇ ಇರಬೇಕು” ಎಂದು ಒಬ್ಬ ಕಮೆಂಟ್ ಮಾಡಿದರೆ, ಮತ್ತೊಬ್ಬ, “ವರ, ಹುಡುಗಿಯ ಪ್ರಿಯಕರ ಗುಂಡು ಹಾರಿಸಿದ್ದಾನೆ ಎಂಬ ಭ್ರಮೆಯಲ್ಲಿದ್ದಾನೆ” ಎಂದು ಬರೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News