ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಕ್ಕೆ!

ಇಂದೂ ಕೂಡ ತೈಲ ಬೆಲೆ ಹೆಚ್ಚಿಸಿರುವ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 29 ಪೈಸೆ ಏರಿಕೆ ಮಾಡಿವೆ.   

Last Updated : Oct 8, 2018, 09:52 AM IST
ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಕ್ಕೆ! title=

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದೂ ಕೂಡ ತೈಲ ಬೆಲೆ ಹೆಚ್ಚಳ ಕಂಡು ಬಂದಿದೆ.  ಪೆಟ್ರೋಲ್ ಬೆಲೆಯು 0.21 ಪೈಸೆ ಹೆಚ್ಚಾಗಿ 82.03 ರೂ.ಗೆ ತಲುಪಿದ್ದರೆ, ಡೀಸೆಲ್ ಬೆಲೆ 0.29 ಪೈಸೆ ಹೆಚ್ಚಾಗಿದ್ದು 73.82 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 21 ಪೈಸೆ ಹೆಚ್ಚಳದ ನಂತರ ಪೆಟ್ರೋಲ್ ದರ 87.50 ರೂ. ಅದೇ ಸಮಯದಲ್ಲಿ ಡೀಸೆಲ್ ಬೆಲೆ 31 ಪೈಸೆ ಏರಿಕೆ ಕಂಡಿದೆ. ಡೀಸೆಲ್ ಬೆಲೆ 77.37 ರೂಪಾಯಿಗಳಿಗೆ ತಲುಪಿದೆ.

ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಕ್ಕೆ:
ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಶುಕ್ರವಾರವಷ್ಟೇ ರೂ.2.50 ಇಳಿಕೆ ಮಾಡಿತ್ತು. ಆದರೆ, ಇದಾದ ಮಾರನೇ ದಿನದಲ್ಲಿ ಮತ್ತೊಮ್ಮೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. ಈ ಎರಡು ಇಂಧನಗಳ ಬೆಲೆ ಮತ್ತೊಮ್ಮೆ ಅತಿ ಹೆಚ್ಚು ದರವನ್ನು ತಲುಪಿದೆ. ಭಾನುವಾರವಷ್ಟೇ ಪೆಟ್ರೋಲ್ ಬೆಲೆ 14 ಪೈಸೆ ಏರಿಕೆ ಮಾಡಿದ್ದ ತೈಲ ಕಂಪನಿಗಳು ಇಂದೂ ಕೂಡ ಮತ್ತೆ ಏರಿಕೆ ಮಾಡಿದ್ದು, ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 29 ಪೈಸೆ ಏರಿಕೆ ಮಾಡಿವೆ. 

ತೈಲ ಕಂಪೆನಿಗಳು ಲೀಟರ್/1 ರೂಪಾಯಿ ಸಬ್ಸಿಡಿ ನೀಡಿವೆ:
ಅಕ್ಟೋಬರ್ 4 ರಂದು ಕೇಂದ್ರ ಸರಕಾರವು ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 2.50 ರೂ. ಮತ್ತು ಡೀಸೆಲ್ ಬೆಲೆ ಲೀಟರ್ ಗೆ  1.50 ರೂ. ಎಕ್ಸೈಸ್ ಸುಂಕವನ್ನು ಕಡಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪೆಟ್ರೋಲಿಯಂ ಮಾರ್ಕೆಟಿಂಗ್ ಕಂಪನಿಗಳು ಪೆಟ್ರೋಲ್ ಮತ್ತು ಡೀಸಲ್ ಮೇಲೆ ಒಂದು ರೂಪಾಯಿ/ಲೀಟರ್ ಸಬ್ಸಿಡಿಯನ್ನು ನೀಡಿದೆ. ಬಿಜೆಪಿ ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ, ಸ್ಥಳೀಯ ತೆರಿಗೆಗಳು ಮತ್ತು ವ್ಯಾಟ್ಗಳನ್ನು ಕೂಡಾ 2.5 ರೂಪಾಯಿಗಳಿಂದ ಕಡಿತಗೊಳಿಸಲಾಗಿದೆ. ಅಂದರೆ, ಈ ರಾಜ್ಯಗಳಲ್ಲಿ, ಬೆಲೆ ಐದು ರೂಪಾಯಿವರೆಗೆ ಕುಸಿದಿದೆ.
 

Trending News