ಸೈನಿಕರ ಜೊತೆ ದೀಪಾವಳಿ ಆಚರಣೆಗೆ ಗಡಿಯತ್ತ ಹೊರಟ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಗಡಿಯಲ್ಲಿರುವ ನಮ್ಮ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡಲು ಗಡಿಯತ್ತ ಹೊರಟಿದ್ದಾರೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಅವರು ಗಡಿ ಭಾಗಕ್ಕೆ ತೆರಳುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯು ಅವರು ಗಡಿ ಭಾಗಕ್ಕೆ ಹೋಗಿ ದೀಪಾವಳಿ ಆಚರಣೆ ಮಾಡಲಿದ್ದಾರೆ.

Last Updated : Nov 14, 2020, 11:35 AM IST
ಸೈನಿಕರ ಜೊತೆ ದೀಪಾವಳಿ ಆಚರಣೆಗೆ ಗಡಿಯತ್ತ ಹೊರಟ ಪ್ರಧಾನಿ ಮೋದಿ title=
Image Courtesy-File Image

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಗಡಿಯಲ್ಲಿರುವ ನಮ್ಮ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡಲು ಗಡಿಯತ್ತ ಹೊರಟಿದ್ದಾರೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಅವರು ಗಡಿ ಭಾಗಕ್ಕೆ ತೆರಳುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯು ಅವರು ಗಡಿ ಭಾಗಕ್ಕೆ ಹೋಗಿ ದೀಪಾವಳಿ ಆಚರಣೆ ಮಾಡಲಿದ್ದಾರೆ.

ರಾಜಸ್ಥಾನದ ಜೈಸಲ್ಮಾರ್ ಗಡಿ ಭಾಗಕ್ಕೆ ಪ್ರಧಾನಿ ಮೋದಿ(PM Modi) ಮುಂಜಾನೆ 9:30ಕ್ಕೆ ತೆರಳಿದ್ದಾರೆ. ಸೇನೆ, ವಾಯು ಪಡೆ ಮತ್ತು ಗಡಿ ಭದ್ರತಾ ಪಡೆಯ 600 ಸಿಬ್ಬಂದಿ ಇಂದಿನ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮೋದಿಯೊಂದಿಗೆ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂಎಂ ನರವಾನೆ, ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ಕೂಡ ಭಾಗಿ ಆಗುವ ಸಾಧ್ಯತೆ ಇದೆ.

Children’s Day 2020: ಮಕ್ಕಳ ದಿನಾಚರಣೆಯ ಇತಿಹಾಸ, ಮಹತ್ವ

ಅದಲ್ಲದೆ, ಪ್ರಧಾನಿ ಮೋದಿ ಅವರು ರಾಷ್ಟ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು "ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ಬಾಳಿನಲ್ಲಿ ಮತ್ತಷ್ಟು ಬೆಳಕು ಹಾಗೂ ಸಂತೋಷವನ್ನು ನೀಡಲಿ. ದೇವರು ಎಲ್ಲರಿಗೂ ಸಮೃದ್ಧಿ ಹಾಗೂ ಆರೋಗ್ಯವನ್ನು ನೀಡಲಿ" ಅಂತ ಆಶಿಸುತ್ತೇನೆಂದು ಎಂದು ಮೋದಿ ಅವರು ಟ್ವೀಟ್ ನಲ್ಲಿ ಬರೆದಿದ್ದರೆ.

https://twitter.com/narendramodi/status/1327415543616348165?s=20

ನಿನ್ನೆ ಕೂಡ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ, ಧೈರ್ಯದಿಂದ ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅವರ ಹೆಸರಿನಲ್ಲಿ ದೀಪವನ್ನು ಬೆಳಗಿ ಎಂದು ಮೋದಿ ಜನರಿಗೆ ಕರೆ ನೀಡಿದ್ದರು.

https://twitter.com/narendramodi/status/1327225291668852736?s=20

 

Trending News