ನವದೆಹಲಿ: ಕೇದಾರನಾಥ-ಬದರಿನಾಥ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೇದಾರನಾಥದ ಗರುಡ್ ಚಟ್ಟಿ ಪ್ರದೇಶದಲ್ಲಿರುವ ಗುಹೆಯಲ್ಲಿ ಶನಿವಾರ ರಾತ್ರಿಯಿಡೀ ಧ್ಯಾನದಲ್ಲಿ ತಲ್ಲಿನರಾದರು. ಬಳಿಕ ಭಾನುವಾರ ಬೆಳಿಗ್ಗೆ ಧ್ಯಾನ ಪೂರ್ಣಗೊಳಿಸಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಬೇಟಿ ನೀಡಲು ಎರಡು ದಿನಗಳ ಅವಕಾಶ ನೀಡಿದ ಚುನಾವಣಾ ಆಯೋಗಕ್ಕೆ ತಾವು ಆಭಾರಿಯಾಗಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು.
Prime Minister Narendra Modi in Kedarnath: Mera saubhagya raha hai ki adhyatmik chetna ki bhoomi pe jaane ka mujhe kai varshon se awsar milta raha hai. Yahan ka mera jo development mission hai usmein prakriti, paryavaran aur paryatan hain. pic.twitter.com/NYLvtKQERU
— ANI (@ANI) May 19, 2019
"ನಾನು ಇದುವರೆಗೂ ದೇವರಲ್ಲಿ ಏನನ್ನೂ ಕೇಳಿಲ್ಲ. ಯಾವುದಕ್ಕೇ ಆಗಲಿ ಬೇಡಿಕೆ ಇಡುವ ಪ್ರವೃತ್ತಿಯನ್ನು ನಾನು ಒಪ್ಪುವುದಿಲ್ಲ. ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಸ್ಥಳಗಳಿಗೆ ಭೇಟಿ ನೀಡಲು ನನಗೆ ಅನೇಕ ವರ್ಷಗಳಿಂದ ಅವಕಾಶ ದೊರೆಯುತ್ತಿರುವುದು ನನ್ನ ಸೌಭಾಗ್ಯ. ಇಲ್ಲಿ ನನ್ನ ಅಭಿವೃದ್ಧಿ ಯೋಜನೆಗಳಿವೆ. ಅದರಲ್ಲಿ ಪ್ರಕೃತಿ, ಪರಿಸರ ಮತ್ತು ಪ್ರವಾಸೋದ್ಯಮವನ್ನು ಎಲ್ಲವೂ ಇದೆ. ನಿನ್ನೆಯಿಂದ ನಾನಿಲ್ಲಿದ್ದೇನೆ. ಬಹಳ ಸಮಯದ ಬಳಿಕ ಏಕಾಂಗಿಯಾಗಿ ಕಾಲ ಕಳೆಯುವ ಅವಕಾಶ ದೊರೆತಿದೆ. ದೇವರ ಬಳಿ ಬರುತ್ತೇನೆ, ಆದರೆ ಏನನ್ನೂ ಬೇಡುವುದಿಲ್ಲ. ಇದು ಸಮಾಜ ಮತ್ತು ಆದ್ಯಾತ್ಮ ದೇವತೆಯ ಮಿಳನವಾಗಿದೆ. ನನ್ನ ದೇಶದಲ್ಲಿಯೂ ನೋಡಲು ಸಾಕಷ್ಟಿದೆಸಮಾಜದ ಒಕ್ಕೂಟ ಮತ್ತು ಆಧ್ಯಾತ್ಮಿಕತೆಯು ಒಕ್ಕೂಟವಾಗಿದೆ. ನಮ್ಮ ದೇಶದಲ್ಲಿಯೂ ವೀಕ್ಷಣೆಗೆ ಯೋಗ್ಯವಾದ ಸಾಕಷ್ಟು ಸ್ಥಳಗಳಿವೆ" ಎಂದು ಮೋದಿ ಹೇಳಿದರು
ಕೇದಾರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ಬದರಿನಾಥಕ್ಕೆ ಪ್ರಯಾಣ ಬೆಳೆಸಿದರು.