UGC NET 2021 exam: NET 2021 ಪರೀಕ್ಷೆಯನ್ನು ಮುಂದೂಡಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ

 ಅಕ್ಟೋಬರ್ 17 ರಂದು ಆರಂಭವಾಗಬೇಕಿದ್ದ ಯುಜಿಸಿ ನೆಟ್ 2021 ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿ ಎ) ಪ್ರಕಟಿಸಿದೆ.

Written by - Zee Kannada News Desk | Last Updated : Oct 10, 2021, 08:30 PM IST
 UGC NET 2021 exam: NET 2021 ಪರೀಕ್ಷೆಯನ್ನು ಮುಂದೂಡಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ  title=

ನವದೆಹಲಿ: ಅಕ್ಟೋಬರ್ 17 ರಂದು ಆರಂಭವಾಗಬೇಕಿದ್ದ ಯುಜಿಸಿ ನೆಟ್ 2021 ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿ ಎ) ಪ್ರಕಟಿಸಿದೆ.

ಇತರ ಪ್ರಮುಖ ಪರೀಕ್ಷೆಗಳೊಂದಿಗೆ ಯುಜಿಸಿ ನೆಟ್ (UGC NET) 2021 ಪರೀಕ್ಷೆಯ ಇರುವುದರ ಹಿನ್ನಲೆಯಲ್ಲಿ ಈಗ ಮುಂದಿನ ಸೂಚನೆ ಬರುವವರೆಗೂ ಎನ್‌ಟಿಎ ಪರೀಕ್ಷೆಯನ್ನು ಮುಂದೂಡಿದೆ.ಇದಕ್ಕೂ ಮುನ್ನ ಸೆಪ್ಟೆಂಬರ್ 3 ರಂದು, ಎನ್‌ಟಿಎ ಅದೇ ಕಾರಣವನ್ನು ಮುಂದಿಟ್ಟುಕೊಂಡು ಪರೀಕ್ಷೆಯನ್ನು ಮುಂದೂಡಿತ್ತು.

'ಇತರ ಕೆಲವು ಪ್ರಮುಖ ಪರೀಕ್ಷೆಗಳೊಂದಿಗೆ ಘರ್ಷಣೆಯ ಕುರಿತು ಅಭ್ಯರ್ಥಿಗಳಿಂದ ಹಲವಾರು ವಿನಂತಿಗಳನ್ನು ಸ್ವೀಕರಿಸಲಾಗಿದೆ.ಆದ್ದರಿಂದ ಎನ್‌ಟಿಎ ಯುಜಿಸಿ-ನೆಟ್ ಡಿಸೆಂಬರ್ 2020 ಮತ್ತು ಜೂನ್ 2021 ಪರೀಕ್ಷೆಗಳನ್ನು ಮುಂದಿನ ದಿನಾಂಕಗಳಿಗೆ ಮುಂದೂಡಲು ನಿರ್ಧರಿಸಿದೆ, ಅದನ್ನು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಎನ್‌ಟಿಎ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ-Alert! Fake Universities ಪಟ್ಟಿ ಸೇರಿದ ಕರ್ನಾಟಕದ ಈ ವಿಶ್ವವಿದ್ಯಾಲಯ, ಎಚ್ಚರ !

ಪರೀಕ್ಷೆಗೆ ಸಂಬಂಧಿಸಿದ ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ ಅಭ್ಯರ್ಥಿಗಳು ನಿಯಮಿತವಾಗಿ NTA ವೆಬ್‌ಸೈಟ್ (ಗಳು) www.nta.ac.in, https://ugcnet.nta.nic.in ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.ಯಾವುದೇ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣಗಳಿಗಾಗಿ, ಅಭ್ಯರ್ಥಿಗಳು NTA ಸಹಾಯ ಕೇಂದ್ರಕ್ಕೆ 011 40759000 ಗೆ ಕರೆ ಮಾಡಬಹುದು ಅಥವಾ ugcnet@nta.ac.in ನಲ್ಲಿ NTA ಗೆ ಬರೆಯಬಹುದು 'ಎಂದು NTA ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅಡ್ಡಿಪಡಿಸಲಾದ ಪರೀಕ್ಷಾ ವೇಳಾಪಟ್ಟಿಯನ್ನು ಕ್ರಮಬದ್ಧಗೊಳಿಸಲು,ಎನ್‌ಟಿಎ ಯುಜಿಸಿ ನೆಟ್, ಡಿಸೆಂಬರ್ 2020 ಮತ್ತು ಜೂನ್ 2021 ಪರೀಕ್ಷೆಗಳನ್ನು ಒಟ್ಟಿಗೆ ನಡೆಸಲು ಮುಂದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News